ಕನ್ನಡಪ್ರಭ ವಾರ್ತೆ ಮಂಡ್ಯ
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಣ್ಣೆಹೊಳೆಕೊಪ್ಪಲು ಗ್ರಾಮ ಮತ್ತು ಹಾಗನಹಳ್ಳಿ ಗ್ರಾಮದ ಪರಿವಿತಿಯಲ್ಲಿ ೧೦.೫೫ ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ನೆರವೇರಿಸಿದರು.೬.೨೫ ಕೋಟಿ ರು. ವೆಚ್ಚದಲ್ಲಿ ಎಣ್ಣೆಹೊಳೆಕೊಪ್ಪಲು ಗ್ರಾಮದ ಪರಿಮಿತಿಯಲ್ಲಿ ವಿವಿಧ ಕಾಮಗಾರಿ ಹಾಗೂ ೪.೩೦ ಕೋಟಿ ರು. ವೆಚ್ಚದಲ್ಲಿ ಅರಳಕುಪ್ಪೆ-ಹಾಗನಹಳ್ಳಿ ನಡುವೆ ಇರುವ ಬೇಬಿ ಕೆರೆ ಕೋಡಿ ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಅರಳಕುಪ್ಪೆ - ಹಾಗನಹಳ್ಳಿ ನಡುವೆ ಇರುವ ಬೇಬಿ ಕೆರೆ ಸೇತುವೆ ಕುಸಿದಿತ್ತು. ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ನೀಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಪ್ರವಾಹದಿಂದ ಹಲವಾರು ಸಮಸ್ಯೆ ಉಂಟಾಗಿ ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಪ್ರಾರಂಭ ಮಾಡಿದ್ದೇವೆ ಎಂದರು.ರಸಗೊಬ್ಬರದ ಕೊರತೆ ನೀಗಿಸಲು ಈಗಾಗಲೇ ಕೃಷಿ ಸಚಿವರ ಬಳಿ ಚರ್ಚಿಸಿದ್ದೇನೆ ಸಚಿವರು ಆಧಿಕಾರಿಗಳ ಬಳಿ ಮಾಹಿತಿ ಪಡೆದು ಶೀಘ್ರದಲ್ಲಿ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ , ಕಾರ್ಯಕರ್ತರು , ಗ್ರಾಮದ ಮುಖಂಡರುಗಳು ಹಾಜರಿದ್ದರು.ಸೊಸೈಟಿ ಅಧ್ಯಕ್ಷರಾಗಿ ಬೇಲೂರು ಸೋಮಶೇಖರ್ ಆಯ್ಕೆ
ಮಂಡ್ಯ: ತಾಲೂಕಿನ ಬೇಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬೇಲೂರು ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು.ಸಂಘದ 12 ಮಂದಿ ನಿರ್ದೇಶಕರಿದ್ದು, ಅಧ್ಯಕ್ಷರಾಗಿದ್ದ ಸಾಕಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ನಿರ್ದೇಶಕರು, ಗ್ರಾಮಸ್ಥರು ಅಭಿನಂದಿಸಿದರು. ನಿರ್ದೇಶಕರಾದ ಬಿ.ಡಿ.ಚಂದ್ರಶೇಖರ್, ಬಿ.ಜೆ.ನರಸಿಂಹಯ್ಯ, ಮುತ್ತುರಾಜು, ಉಮೇಶ್, ವೈ.ಎಸ್.ಶ್ರೀಧರ್, ಬಿ.ಯರಹಳ್ಳಿ ದೊಡ್ಡ ಚೌಡಯ್ಯ, ಜೆ.ಎ.ಶೃತಿ, ಚಂದ್ರಮ್ಮ, ಅನಂತ ಲಕ್ಷ್ಮಿ, ಸಾಕಮ್ಮ, ಬಿ.ಬಿ.ಶಿವರಾಮು, ಕೆ.ಚೆನ್ನಯ್ಯ, ಜಯಚಂದ್ರ ಹಾಗೂ ಸಿಇಓ ಟಿ.ಹೆಚ್ ಶ್ರೀನಿವಾಸ್, ನೌಕರರಾದ ಬಿ.ಪಿ ಮಮತಾ, ಬಿ.ಆರ್.ಮಹದೇವು, ಮುಖಂಡರಾದ ಕೃಷ್ಣೇಗೌಡ, ಚೆನ್ನೇಗೌಡ, ಜಯಣ್ಣ, ಬಿ.ಕೆ. ಬೊಮ್ಮೇಗೌಡ, ಬೊಮ್ಮಯ್ಯ, ಶಶಿಧರ್ ಇದ್ದರು.