)
ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 75.31 ಕೋಟಿ ರು. ಮೌಲ್ಯದ 10.08 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿ ವಶಕ್ಕೆ ಪಡೆದಿದೆ.ಗೋಮಾಳ, ರಾಜಕಾಲುವೆ, ಸರ್ಕಾರಿ ಕುಂಟೆ, ಸರ್ಕಾರಿ ಖರಾಬು, ಸರ್ಕಾರಿ ಸ್ಮಶಾನ, ಕೆರೆ, ಮುತ್ತುರಾಯ ದೇವರ ಇನಾಂ, ಖರಾಬು ತೋಪು ಜಾಗಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಹಗದೂರಿನಲ್ಲಿ 3 ಕೋಟಿ ರು. ಮೌಲ್ಯದ 8 ಗುಂಟೆ ಗೋಮಾಳ, ದೊಡ್ಡಗುಬ್ಬಿಯಲ್ಲಿ 1.5 ಕೋಟಿ ರು. ಮೌಲ್ಯದ 5 ಗುಂಟೆ ರಾಜಕಾಲುವೆ,
ದಕ್ಷಿಣ ತಾಲೂಕಿನ ಮೈಲಸಂದ್ರದಲ್ಲಿ 1 ಕೋಟಿ ರು. ಮೌಲ್ಯದ 20 ಗುಂಟೆ ಜಮೀನು, ತರಳು ಗ್ರಾಮದಲ್ಲಿ 2.50 ಕೋಟಿ ರು. ಮೌಲ್ಯದ 2 ಎಕರೆ ಕೆರೆ, ತಗಚಗುಪ್ಪೆ ಗ್ರಾಮದಲ್ಲಿ 4 ಕೋಟಿ ರು. ಮೌಲ್ಯದ 20 ಗುಂಟೆ ಸರ್ಕಾರಿ ಖರಾಬು ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.