- ಶಿಲಾನ್ಯಾಸ ಕಾರ್ಯಕ್ರಮಕ್ಕೆ ವರ್ಚುವಲ್ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ
- ಉನ್ನತೀಕರಣಗೊಂಡ ಬಳಿಕ ಅಕ್ಕಪಕ್ಕದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಫ್.ಎಂ. ಕಾರ್ಯನಿರ್ವಹಿಸಲು ಸಹಕಾರಿ
- ಶಿವಮೊಗ್ಗದ ಯಾವುದೇ ಮೂಲೆಗೆ ಹೋದರೂ 150 ಕಿಲೋ ಮೀಟರ್‌ವರೆಗೆ ರೇಡಿಯೋ ಕೇಳಿಕೊಂಡು ಸಾಗಬಹುದು- ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಶಿವಮೊಗ್ಗದಲ್ಲೇ ಅತ್ಯಧಿಕ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಕೆ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಜನತೆಯ ಬಹುದಿನದ ಬೇಡಿಕೆ ಆಗಿದ್ದ ಎಫ್.ಎಂ ಕೇಂದ್ರ 10 ವ್ಯಾಟ್ ನ ಎಫ್.ಎಂ ಕೇಂದ್ರವಾಗಿ ವಿಸ್ತರಣೆ ಹೊಂದಿದೆ. 1 ಕಿಲೋ ವ್ಯಾಟ್ ಇದ್ದ ಶಿವಮೊಗ್ಗ ಭದ್ರಾವತಿ ಕೇಂದ್ರಕ್ಕೆ 10 ಕಿಲೋ ವ್ಯಾಟ್ ಸಿಕ್ಕಿರುವುದು ಮಲೆನಾಡಿಗೆ ಸಿಕ್ಕ ಗೌರವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದರ ಪೂರ್ಣಪ್ರಮಾಣದ ಕಾರ್ಯಾರಂಭವಾದ ಮೇಲೆ ನಾವು ಕಾರ್‌ನಲ್ಲಿ ಪ್ರಯಾಣ ಮಾಡುವಾಗ ಶಿವಮೊಗ್ಗದ ಯಾವುದೇ ಮೂಲೆಗೆ ಸಮಾರು 150 ಕಿಲೋ ಮೀಟರ್‌ವರೆಗೆ ರೇಡಿಯೋ ಕೇಳಿಕೊಂಡು ಹೋಗಬಹುದು. ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅತ್ಯಧಿಕ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಕೆ ಕಾರ್ಯ ನಮ್ಮ ಶಿವಮೊಗ್ಗದಲ್ಲಿ ಆಗುತ್ತಿರುವುದು ನಮಗೆಲ್ಲ ಹೆಮ್ಮೆ ಹಾಗೂ ಸಂತೋಷ ತರುವ ವಿಚಾರವಾಗಿದೆ ಎಂದರು.
ಆಕಾಶವಾಣಿಗೆ 59 ವರ್ಷ ತುಂಬಿದ್ದು ಇಳಿವಯಸ್ಸಿನಲ್ಲಿ ಯೌವನ ಬಂದಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ನಾಯಕತ್ವವು ನಮ್ಮ ಮಲೆನಾಡಿನ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಯೋಜನೆಗೆ ರೂ. 10 ಕೋಟಿ ಅನುದಾನ ನೀಡಲಾಗಿದ್ದು, ಅನುಷ್ಠಾನದ ನಂತರ ತುಮಕೂರುವರೆಗೂ ರೆಡಿಯೋ ಸೇವೆ ದೊರೆಯಲಿದೆ. ಮೊಬೈಲ್‌ನಲ್ಲೂ ಇಂಟರ್ನೆಟ್ ಇಲ್ಲದೇ ಬಳಸಬಹುದು. ನಮ್ಮ ಮಲೆನಾಡಿನ ಗ್ರಾಮೀಣ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹ ಸಹಕಾರಿ ಆಗಲಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿ ಅತಿ ದೊಡ್ಡ ಎಫ್.ಎಂ. ಕೇಂದ್ರ ಇದಾಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಭದ್ರಾವತಿ ಆಕಾಶವಾಣಿ ಸ್ಟುಡಿಯೋವನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಈ ರೀತಿಯ ಯೋಜನೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರದ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಭದ್ರಾವತಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಎಸ್,ಆರ್. ಭಟ್ ಮಾತನಾಡಿ ನಮ್ಮ ಆಕಾಶವಾಣಿಗೆ ಹೊಸ ಹುರುಪು ಬರುತ್ತಿದೆ. ಈ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರ ಶ್ರಮ ಅತ್ಯಂತ ಅಮೂಲ್ಯವಾದದ್ದು ಎಂದು ಶ್ಲಾಘಿಸಿದರು.
- - - -28ಎಸ್‌ಎಂಜಿಕೆಪಿ02: