ದಾಬಸ್‍ಪೇಟೆ: ಸಾರ್ವಜನಿಕರು ಕುಟುಂಬದ ಆರ್ಥಿಕ ಭದ್ರತೆ ದೃಷ್ಟಿಯಿಂದ ವಿಮಾ ಪಾಲಿಸಿ ಮಾಡಿಸಿಕೊಳ್ಳಬೇಕು ಎಂದು ತುಮಕೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಸುಧೀಂದ್ರ ಪಂಚಮುಖಿ ತಿಳಿಸಿದರು.
ಪಟ್ಟಣದ ಕರ್ಣಾಟಕ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಕೆಬಿಎಲ್ ಸುರಕ್ಷಾ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರು ಮೃತಪಟ್ಟ ಅವರ ಕುಟುಂಬಕ್ಕೆ10 ಲಕ್ಷ ಚೆಕ್ ವಿತರಿಸಿ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದ ಚಂದ್ರಶೇಖರ್ ಅಡುಗೆ ಅನಿಲ ಸೋರಿಕೆ ಅಪಘಾತದಲ್ಲಿ ಸಾವನ್ನಪ್ಪಿದರು. ಆದರೆ, ಅವರು ನೋಂದಾಯಿಸಿದ್ದ ಕೆಬಿಎಲ್ ಸುರಕ್ಷಾ ವಿಮಾ ವಾರ್ಷಿಕ ಮೊತ್ತ 300 ರು. ಪಾಲಿಸಿಯಿಂದಾಗಿ, ಅವರ ನಿಧನದ ನಂತರ ಅವರ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ದೊರೆತಿದೆ. ಈ ಪರಿಹಾರ ಕುಟುಂಬದ ಭವಿಷ್ಯಕ್ಕೆ ಆರ್ಥಿಕ ಭದ್ರತೆ ನೀಡಲಿದೆ. ಎಲ್ಲಾ ಖಾತೆದಾರರು ವಿಮಾ ಪಾಲಿಸಿ ಮಾಡಿಸಿಕೊಂಡರೆ ಅನುಕೂಲವಾಗಲಿದೆ ಎಂದರು.ದಾಬಸ್‍ಪೇಟೆ ಶಾಖೆಯ ಶಾಖಾ ವ್ಯವಸ್ಥಾಪಕ ಚಂದನ್.ಯು.ಎಸ್.ಭಟ್ ಮಾತನಾಡಿ, ಕೆಬಿಎಲ್ ಸುರಕ್ಷಾ, ಪಿಎಂಜೆಜೆವೈ, ಪಿಎಮ್‍ಎಸ್‍ಬಿವೈ, ಅಟಲ್ ಪೆನ್ಷನ್ ಯೋಜನೆ, ಎನ್‍ಪಿಎಸ್ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳು ಕಡಿಮೆ ಪ್ರೀಮಿಯಂ ದರದಲ್ಲಿ ಕರ್ಣಾಟಕ ಬ್ಯಾಂಕ್ ಗ್ರಾಹಕರಿಗೆ ಲಭ್ಯವಾಗುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ದಾಬಸ್‍ಪೇಟೆ ಶಾಖೆಯ ಸಹಾಯಕ ವ್ಯವಸ್ಥಾಪಕ ಸಿದ್ದಲಿಂಗ ವಿ. ಹೂಗಾರ, ಭಾರತೀಯ ಆಕ್ಸಾ ಲೈಫ್ ಇನ್ಸೂರೆನ್ಸ್‍ನ ಮ್ಯಾನೇಜರ್ ಪ್ರಕಾಶ್ ಜಾದವ್, ಹರಿಣಿ, ಬ್ಯಾಂಕಿನ ಸಿಬ್ಬಂದಿ ನಾಗಸಿಂಹ, ಅಶ್ವಿನ್ ಮತ್ತು ರಮೇಶ್ ಉಪಸ್ಥಿತರಿದ್ದರು.ಪೋಟೋ 1 :
ದಾಬಸ್‍ಪೇಟೆ ಕರ್ಣಾಟಕ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಕೆಬಿಎಲ್ ಸುರಕ್ಷಾ ಸಾಮಾಜಿಕ ಭದ್ರತಾ ಯೋಜನೆಯ ಗ್ರಾಹಕರೊಬ್ಬರು ಮೃತಪಟ್ಟದ್ದರಿಂದ ಅವರ ಕುಟುಂಬಕ್ಕೆ 10 ಲಕ್ಷ ರು. ಚೆಕ್ ವಿತರಿಸಲಾಯಿತು.