ಬೆಳೆಗಾರರಿಗೆ ಕಬ್ಬಿನ ಹೆಚ್ಚುವರಿ 100 ರು. ಪಾವತಿಸಿ: ಡೀಸಿ

KannadaprabhaNewsNetwork |  
Published : Mar 13, 2026, 02:00 AM IST
11ಕೆಎಂಎನ್ ಡಿ20 | Kannada Prabha

ಸಾರಾಂಶ

ರಾಜ್ಯ ಸರ್ಕಾರವು 50 ರು. ಆರ್ಥಿಕ ನೆರವು ಮತ್ತು ಕಾರ್ಖಾನೆಗಳು ಹೆಚ್ಚುವರಿ 50 ರು. ಸೇರಿಸಿ ಒಟ್ಟು 100 ರು. ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಈಗಾಗಲೇ ಸರ್ಕಾರದ ಹಂತದಲ್ಲಿ ಈಗಾಗಲೇ ಹಣ ಬಿಡುಗಡೆಯಾಗಿದೆ. ಕಾರ್ಖಾನೆಯವರು ಯಾವುದೇ ಸಬೂಬು ಹೇಳದೇ ರೈತರ ಹಣ ಸಂದಾಯ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳೆರಡು ಸೇರಿ ಪ್ರತಿ ಟನ್ ಕಬ್ಬಿಗೆ ಬಾಕಿ ನೀಡಬೇಕಾಗಿರುವ 100 ರು. ಹೆಚ್ಚುವರಿ ಹಣವನ್ನು ರೈತರ ಖಾತೆಗೆ ಹಣ ಸಂದಾಯ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಬ್ಬು ಸರಬರಾಜು ಹೆಚ್ಚುವರಿ ಕಬ್ಬಿನ ಬೆಲೆ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿದ ಡೀಸಿ, 2025-26ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಎಫ್‌ಆರ್‌ಪಿ (ಎಫ್‌ಆರ್‌ಪಿ) ಮೇಲೆ ಪ್ರತಿ ಟನ್‌ಗೆ 100 ರು. ಹೆಚ್ಚುವರಿ ಹಣ ಜಮಾ ಮಾಡಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯ ಸರ್ಕಾರವು 50 ರು. ಆರ್ಥಿಕ ನೆರವು ಮತ್ತು ಕಾರ್ಖಾನೆಗಳು ಹೆಚ್ಚುವರಿ 50 ರು. ಸೇರಿಸಿ ಒಟ್ಟು 100 ರು. ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಈಗಾಗಲೇ ಸರ್ಕಾರದ ಹಂತದಲ್ಲಿ ಈಗಾಗಲೇ ಹಣ ಬಿಡುಗಡೆಯಾಗಿದೆ. ಕಾರ್ಖಾನೆಯವರು ಯಾವುದೇ ಸಬೂಬು ಹೇಳದೇ ರೈತರ ಹಣ ಸಂದಾಯ ಮಾಡಬೇಕು ಎಂದರು.

ಸರ್ಕಾರದ ಆದೇಶವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಪಾಲಿಸಬೇಕು. ಸರ್ಕಾರ ನೀಡಿರುವ 50 ರು. ಗಳನ್ನು ಸಹಾಯ ಧನವನ್ನು ಪಡೆದು ಕಾರ್ಖಾನೆಯ ಹೆಚ್ಚುವರಿ ಹಣ 50 ಸೇರಿಸಿ ಒಟ್ಟು 100 ರು. ರೈತರ ಖಾತೆಗೆ ಸಂದಾಯ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಉಪಸ್ಥಿತರಿದ್ದರು.ಪೊಲೀಸ್ ಇಲಾಖೆಯಿಂದ ನಾಗರಿಕರಿಗೆ ಬಂದೂಕು ತರಬೇತಿ

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮಾ.23ರಿಂದ ಮಾ.29ರ ವರೆಗೆ 7 ದಿನಗಳ ಕಾಲ ನಾಗರಿಕ ಬಂದೂಕು ತರಬೇತಿ ನೀಡಲಾಗುವುದು. ತರಬೇತಿ ಪಡೆಯಲು ಇಚ್ಛಿಸುವ ನಾಗರಿಕರು ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಯುಧಗಾರದಲ್ಲಿ ನಿಗಧಿತ ಶುಲ್ಕ ಪಾವತಿಸಿ ಅರ್ಜಿ ಪಡೆದುಕೊಳ್ಳುವುದು.

ಮಾ.15ರಿಂದ ಮಾ.21ರವರೆಗೆ ಅರ್ಜಿ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ವಾಸ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್‌ ಸಲ್ಲಿಸುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗದಿರುವ ಹಾಗೂ ಉತ್ತಮ ನಡತೆ ಹೊಂದಿರುವ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ದೃಢೀಕರಣ ಪತ್ರದೊಂದಿಗೆ ಮಂಡ್ಯ ಡಿಎಆರ್ ಘಟಕಕ್ಕೆ ಅರ್ಜಿ ಸಲ್ಲಿಸಬಹುದು.ತರಬೇತಿಯಲ್ಲಿ ಗುರಿ ಅಭ್ಯಾಸ ಮಾಡಿಸಲಾಗುವುದು, ಗುರಿ ಅಭ್ಯಾಸ ನಡೆಸುವಾಗ ತರಬೇತಿ ಪಡೆಯುವ ಅಭ್ಯರ್ಥಿಗಳು ಉಪಯೋಗಿಸುವ ಗುಂಡುಗಳಿಗೆ ತಗಲುವ ವೆಚ್ಚವನ್ನು ಆಯಾ ಅಭ್ಯರ್ಥಿಗಳು ತಪ್ಪದೇ ಭರಿಸಬೇಕು. ತರಬೇತಿ ನಡೆಯುವ ಸಮಯ ಬೆಳಗ್ಗೆ 7 ರಿಂದ 9 ರವರೆಗೆ ನಡೆಯುಲಿದ್ದು, ತರಬೇತಿಗೆ ಅಭ್ಯರ್ಥಿಗಳು ಗೈರು ಹಾಜರಾಗದಂತೆ ಸೂಚಿಸಿದೆ. ತರಬೇತಿಗೆ ಆಯ್ಕೆಯಾದ ಸಾರ್ವಜನಿಕರು ಬಿಳಿ ಪ್ಯಾಂಟ್, ಬಿಳಿ ಟೀ ಪರ್ಟ್ ಹಾಗೂ ಬಿಳಿ ಶೂ ಮತ್ತು ಗೌಂಡ್ ಶೀಟ್ ತರುವುದು. ಹೆಚ್ಚಿನ ಮಾಹಿತಿಗಾಗಿ ತರಬೇತಿಯ ಸಂಪೂರ್ಣ ಮೇಲುಸ್ತುವಾರಿಯನ್ನು ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಡಿಎಸ್‌ಪಿ ಎಸ್‌.ರಾಚಯ್ಯ, ಮೊ.ಸಂ.9480804806 ಅನ್ನು ಸಂಪರ್ಕಿಸಬಹುದು. ಸಾರ್ವಜನಿಕರು ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಜೀವನದ ಮೇಲೆ ಪ್ರಭಾವ ಬೀರಿದ ದಾಸ ಸಾಹಿತ್ಯ
ನಾಳೆ ಜಿಲ್ಲಾದ್ಯಂತ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್