ಕೊರೋನಾ ಚಿಕಿತ್ಸೆಗೆ ಕಿಮ್ಸ್‌ನಲ್ಲಿ 100 ಬೆಡ್‌ ಮೀಸಲು!

KannadaprabhaNewsNetwork |  
Published : Dec 20, 2023, 01:15 AM IST
19ಎಚ್‌ಯುಬಿ1ಕಿಮ್ಸ್‌ ಹೊರನೋಟ | Kannada Prabha

ಸಾರಾಂಶ

ಮತ್ತೆ ಕೋವಿಡ್‌ ಭೀತಿ ಶುರುವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್‌ನಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಸೋಂಕಿತರ ಚಿಕಿತ್ಸೆಗೆ 100 ಬೆಡ್‌ಗಳನ್ನು ಮೀಸಲಿಡಲಾಗಿದೆ!

- 60 ಆಕ್ಸಿಜನ್‌ ಬೆಡ್‌, 30 ಐಸಿಯು ಬೆಡ್‌ ಮೀಸಲು

- 19 ಜನ ವೈದ್ಯರ ತಾಂತ್ರಿಕ ಸಮಿತಿ ರಚನೆಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮತ್ತೆ ಕೋವಿಡ್‌ ಭೀತಿ ಶುರುವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್‌ನಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಸೋಂಕಿತರ ಚಿಕಿತ್ಸೆಗೆ 100 ಬೆಡ್‌ಗಳನ್ನು ಮೀಸಲಿಡಲಾಗಿದೆ!

ಅವುಗಳಲ್ಲಿ 60 ಆಕ್ಸಿಜನ್‌ ಬೆಡ್‌, 30 ಐಸಿಯು ಬೆಡ್‌ ಇವೆ. ಈಗಾಗಲೇ ತಾಂತ್ರಿಕ ಸಮಿತಿ ರಚಿಸಿರುವ ಕಿಮ್ಸ್‌ ಆಡಳಿತ ಮಂಡಳಿ, ಕೋವಿಡ್‌ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ 100 ಬೆಡ್‌ಗಳನ್ನು ಮೀಸಲಿಟ್ಟಿದೆ.

ಕೋರೋನಾ ಮೊದಲ ಹಾಗೂ ಎರಡನೆಯ ಅಲೆಯ ವೇಳೆ ಕಿಮ್ಸ್‌ ಮಾಡಿದ ಸೇವೆ ಅಪರಿಮಿತ. ಎಲ್ಲ ಖಾಸಗಿ ಆಸ್ಪತ್ರೆಗಳು ಕೈಚೆಲ್ಲಿ ಬಂದ್‌ ಮಾಡಿಕೊಂಡು ಕುಳಿತ ವೇಳೆ "ಏನು ಆಗಲ್ಲ ನಾವಿದ್ದೇವೆ " ಎಂಬ ಜನರಿಗೆ ಅಭಯ ಹಸ್ತ ಚಾಚಿತ್ತು ಕಿಮ್ಸ್‌. ಅಕ್ಷರಶಃ ಜನರ ಜೀವ ಉಳಿಸಲು ಇಲ್ಲಿನ ವೈದ್ಯರು, ದಾದಿಯರು ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದು ಇನ್ನು ಜನರ ಮನದಲ್ಲಿ ಹಚ್ಚ ಹಸಿರಾಗಿದೆ.

ಬರೀ ಹುಬ್ಬಳ್ಳಿ-ಧಾರವಾಡಕ್ಕಷ್ಟೇ ಅಲ್ಲ. ಸುತ್ತಮುತ್ತಲಿನ ಸುಮಾರು 8-10 ಜಿಲ್ಲೆಗಳಿಗೂ ಕಿಮ್ಸ್‌ ಜೀವದಾನನೀಡುವ ಆಸ್ಪತ್ರೆಯೆಂದೇ ಹೆಸರು ಪಡೆಯಿತು. ಇದೀಗ ಅತ್ತ ಕೇರಳದಲ್ಲಿ ಕೋವಿಡ್‌ ಪತ್ತೆಯಾಗುತ್ತಿದ್ದಂತೆ ಇತ್ತ ಕಿಮ್ಸ್‌ ಎಚ್ಚೆತ್ತುಕೊಂಡಿದೆ.

ಭೀತಿ ಹೆಚ್ಚು:

ಸದ್ಯ ಇಲ್ಲಿ ಭಯವೇನೂ ಇಲ್ಲ. ಆದರೆ ಕೇರಳದಲ್ಲಿ ಈ ಸೋಂಕು ಕಂಡು ಬಂದಿದೆ. ಜತೆಗೆ ಅಯ್ಯಪ್ಪ ಸ್ವಾಮಿ ವೃತ ಕೂಡ ಈಗ ನಡೆಯುತ್ತಿದೆ. ಹೀಗಾಗಿ, ಇಲ್ಲಿನವರು ಕೇರಳದ ಶಬರಿಮಲೈಗೆ ಹೋಗುವುದು ಜಾಸ್ತಿ. ಹೀಗೆ ಹೋದವರು ಬರುವಾಗ ಸೋಂಕು ತಗುಲಿಸಿಕೊಂಡು ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದಕಾರಣ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಿಮ್ಸ್‌ ಮುಂದಾಗಿದೆ.

ತಾಂತ್ರಿಕ ಸಮಿತಿ:

ಮಂಗಳವಾರ ಎರಡನೆಯ ಬಾರಿಗೆ ಪೂರ್ವಭಾವಿ ಸಭೆ ನಡೆಸಿರುವ ಕಿಮ್ಸ್‌ ಆಡಳಿತ ಮಂಡಳಿ 19 ಜನ ವೈದ್ಯರ ತಾಂತ್ರಿಕ ಸಮಿತಿಯನ್ನು ರಚಿಸಿದೆ. ಈ ಸಮಿತಿ ಕೊರೋನಾ ವಿಷಯದಲ್ಲಿ ಯಾವ ರೀತಿ ಚಿಕಿತ್ಸೆ ಇರಬೇಕು. ಪರೀಕ್ಷೆ ಯಾವಾಗಿಂದ ಪ್ರಾರಂಭಿಸಬೇಕು. ಸದ್ಯ ಕೊರೋನಾ ಲಕ್ಷಣವಿರುವ ರೋಗಿಗಳೇನಾದರೂ ಬರುತ್ತಾರೆಯೇ? ಬಂದಿದ್ದರೆ ಎಷ್ಟು ಗಂಭೀರತೆ ಹೊಂದಿದವರು ಇರುತ್ತಾರೆ? ಎಂಬುದರ ಬಗ್ಗೆ ಪರಿಶೀಲಿಸಿ ಚಿಕಿತ್ಸೆಗೆ ಕ್ರಮಕೈಗೊಳ್ಳಲಿದೆ. ಇನ್ನೆರಡು ದಿನಗಳಲ್ಲಿ ಕೊರೋನಾ ಪರೀಕ್ಷೆ ಪ್ರಾರಂಭಿಸಲು ನಿರ್ಧರಿಸಿದೆ.

100 ಬೆಡ್‌ ಮೀಸಲು:

2490 ಬೆಡ್‌ಗಳ ದೊಡ್ಡ ಆಸ್ಪತ್ರೆಯಿದು. ಅದರಲ್ಲಿ ಕೊರೋನಾಕ್ಕೆಂದೇ 100 ಬೆಡ್‌ಗಳನ್ನು ಮೀಸಲಿಟ್ಟಿದೆ. ಇದರಲ್ಲಿ 10 ಸಾಮಾನ್ಯ ಬೆಡ್‌ಗಳಾದರೆ, 60 ಆಕ್ಸಿಜನ್‌ ಬೆಡ್‌ಗಳಾಗಿವೆ. 30 ಐಸಿಯು ಬೆಡ್‌ಗಳಾಗಿವೆ.

ಇನ್ನು ಇಲ್ಲಿ 40 ಕೆಎಲ್‌ ಸಾಮರ್ಥ್ಯವಿರುವ ಆಕ್ಸಿಜನ್‌ ಘಟಕವಿದೆ. ಹೀಗಾಗಿ, ಎಂತಹದೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧ ಎಂಬ ವಿಶ್ವಾಸ ಕಿಮ್ಸ್‌ ಆಡಳಿತ ಮಂಡಳಿದ್ದು.

ಸದ್ಯ ನೆಗಡಿ, ಕೆಮ್ಮು, ಜ್ವರ ಕಂಡು ಬಂದರೆ ವೈದ್ಯರ ಸಲಹೆ ಪಡೆಯಿರಿ. ಆದರೆ ಆತಂಕಕ್ಕೆ ಒಳಗಾಗಬೇಡಿ. ಜನಜಂಗುಳಿ ಇದ್ದಲ್ಲಿ ಹೋಗುವುದನ್ನು ಸ್ವಲ್ಪ ಕಡಿಮೆ ಮಾಡಿ ಎಂಬ ಸಲಹೆ ನೀಡಿದ್ದಾರೆ ಕಿಮ್ಸ್‌ ವೈದ್ಯರು.ಕೊರೋನಾ ಭೀತಿ ಸದ್ಯಕ್ಕಿಲ್ಲ. ಆದರೆ, ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. 19 ಜನ ವೈದ್ಯರ ತಾಂತ್ರಿಕ ಸಮಿತಿ ರಚಿಸಿದೆ. ಕೊರೋನಾ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 100 ಬೆಡ್‌ ಮೀಸಲಿಡಲಾಗಿದೆ. ಆದರೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕಿಮ್ಸ್ ನಿರ್ದೇಶಕ ಎಸ್‌.ಎಫ್‌. ಕಮ್ಮಾರ ತಿಳಿಸಿದ್ದಾರೆ.- 60 ಆಕ್ಸಿಜನ್‌ ಬೆಡ್‌, 30 ಐಸಿಯು ಬೆಡ್‌ ಮೀಸಲು

- 19 ಜನ ವೈದ್ಯರ ತಾಂತ್ರಿಕ ಸಮಿತಿ ರಚನೆಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮತ್ತೆ ಕೋವಿಡ್‌ ಭೀತಿ ಶುರುವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಿಮ್ಸ್‌ನಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಸೋಂಕಿತರ ಚಿಕಿತ್ಸೆಗೆ 100 ಬೆಡ್‌ಗಳನ್ನು ಮೀಸಲಿಡಲಾಗಿದೆ!

ಅವುಗಳಲ್ಲಿ 60 ಆಕ್ಸಿಜನ್‌ ಬೆಡ್‌, 30 ಐಸಿಯು ಬೆಡ್‌ ಇವೆ. ಈಗಾಗಲೇ ತಾಂತ್ರಿಕ ಸಮಿತಿ ರಚಿಸಿರುವ ಕಿಮ್ಸ್‌ ಆಡಳಿತ ಮಂಡಳಿ, ಕೋವಿಡ್‌ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ 100 ಬೆಡ್‌ಗಳನ್ನು ಮೀಸಲಿಟ್ಟಿದೆ.

ಕೋರೋನಾ ಮೊದಲ ಹಾಗೂ ಎರಡನೆಯ ಅಲೆಯ ವೇಳೆ ಕಿಮ್ಸ್‌ ಮಾಡಿದ ಸೇವೆ ಅಪರಿಮಿತ. ಎಲ್ಲ ಖಾಸಗಿ ಆಸ್ಪತ್ರೆಗಳು ಕೈಚೆಲ್ಲಿ ಬಂದ್‌ ಮಾಡಿಕೊಂಡು ಕುಳಿತ ವೇಳೆ "ಏನು ಆಗಲ್ಲ ನಾವಿದ್ದೇವೆ " ಎಂಬ ಜನರಿಗೆ ಅಭಯ ಹಸ್ತ ಚಾಚಿತ್ತು ಕಿಮ್ಸ್‌. ಅಕ್ಷರಶಃ ಜನರ ಜೀವ ಉಳಿಸಲು ಇಲ್ಲಿನ ವೈದ್ಯರು, ದಾದಿಯರು ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದು ಇನ್ನು ಜನರ ಮನದಲ್ಲಿ ಹಚ್ಚ ಹಸಿರಾಗಿದೆ.

ಬರೀ ಹುಬ್ಬಳ್ಳಿ-ಧಾರವಾಡಕ್ಕಷ್ಟೇ ಅಲ್ಲ. ಸುತ್ತಮುತ್ತಲಿನ ಸುಮಾರು 8-10 ಜಿಲ್ಲೆಗಳಿಗೂ ಕಿಮ್ಸ್‌ ಜೀವದಾನನೀಡುವ ಆಸ್ಪತ್ರೆಯೆಂದೇ ಹೆಸರು ಪಡೆಯಿತು. ಇದೀಗ ಅತ್ತ ಕೇರಳದಲ್ಲಿ ಕೋವಿಡ್‌ ಪತ್ತೆಯಾಗುತ್ತಿದ್ದಂತೆ ಇತ್ತ ಕಿಮ್ಸ್‌ ಎಚ್ಚೆತ್ತುಕೊಂಡಿದೆ.

ಭೀತಿ ಹೆಚ್ಚು:

ಸದ್ಯ ಇಲ್ಲಿ ಭಯವೇನೂ ಇಲ್ಲ. ಆದರೆ ಕೇರಳದಲ್ಲಿ ಈ ಸೋಂಕು ಕಂಡು ಬಂದಿದೆ. ಜತೆಗೆ ಅಯ್ಯಪ್ಪ ಸ್ವಾಮಿ ವೃತ ಕೂಡ ಈಗ ನಡೆಯುತ್ತಿದೆ. ಹೀಗಾಗಿ, ಇಲ್ಲಿನವರು ಕೇರಳದ ಶಬರಿಮಲೈಗೆ ಹೋಗುವುದು ಜಾಸ್ತಿ. ಹೀಗೆ ಹೋದವರು ಬರುವಾಗ ಸೋಂಕು ತಗುಲಿಸಿಕೊಂಡು ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದಕಾರಣ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಿಮ್ಸ್‌ ಮುಂದಾಗಿದೆ.

ತಾಂತ್ರಿಕ ಸಮಿತಿ:

ಮಂಗಳವಾರ ಎರಡನೆಯ ಬಾರಿಗೆ ಪೂರ್ವಭಾವಿ ಸಭೆ ನಡೆಸಿರುವ ಕಿಮ್ಸ್‌ ಆಡಳಿತ ಮಂಡಳಿ 19 ಜನ ವೈದ್ಯರ ತಾಂತ್ರಿಕ ಸಮಿತಿಯನ್ನು ರಚಿಸಿದೆ. ಈ ಸಮಿತಿ ಕೊರೋನಾ ವಿಷಯದಲ್ಲಿ ಯಾವ ರೀತಿ ಚಿಕಿತ್ಸೆ ಇರಬೇಕು. ಪರೀಕ್ಷೆ ಯಾವಾಗಿಂದ ಪ್ರಾರಂಭಿಸಬೇಕು. ಸದ್ಯ ಕೊರೋನಾ ಲಕ್ಷಣವಿರುವ ರೋಗಿಗಳೇನಾದರೂ ಬರುತ್ತಾರೆಯೇ? ಬಂದಿದ್ದರೆ ಎಷ್ಟು ಗಂಭೀರತೆ ಹೊಂದಿದವರು ಇರುತ್ತಾರೆ? ಎಂಬುದರ ಬಗ್ಗೆ ಪರಿಶೀಲಿಸಿ ಚಿಕಿತ್ಸೆಗೆ ಕ್ರಮಕೈಗೊಳ್ಳಲಿದೆ. ಇನ್ನೆರಡು ದಿನಗಳಲ್ಲಿ ಕೊರೋನಾ ಪರೀಕ್ಷೆ ಪ್ರಾರಂಭಿಸಲು ನಿರ್ಧರಿಸಿದೆ.

100 ಬೆಡ್‌ ಮೀಸಲು:

2490 ಬೆಡ್‌ಗಳ ದೊಡ್ಡ ಆಸ್ಪತ್ರೆಯಿದು. ಅದರಲ್ಲಿ ಕೊರೋನಾಕ್ಕೆಂದೇ 100 ಬೆಡ್‌ಗಳನ್ನು ಮೀಸಲಿಟ್ಟಿದೆ. ಇದರಲ್ಲಿ 10 ಸಾಮಾನ್ಯ ಬೆಡ್‌ಗಳಾದರೆ, 60 ಆಕ್ಸಿಜನ್‌ ಬೆಡ್‌ಗಳಾಗಿವೆ. 30 ಐಸಿಯು ಬೆಡ್‌ಗಳಾಗಿವೆ.

ಇನ್ನು ಇಲ್ಲಿ 40 ಕೆಎಲ್‌ ಸಾಮರ್ಥ್ಯವಿರುವ ಆಕ್ಸಿಜನ್‌ ಘಟಕವಿದೆ. ಹೀಗಾಗಿ, ಎಂತಹದೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧ ಎಂಬ ವಿಶ್ವಾಸ ಕಿಮ್ಸ್‌ ಆಡಳಿತ ಮಂಡಳಿದ್ದು.

ಸದ್ಯ ನೆಗಡಿ, ಕೆಮ್ಮು, ಜ್ವರ ಕಂಡು ಬಂದರೆ ವೈದ್ಯರ ಸಲಹೆ ಪಡೆಯಿರಿ. ಆದರೆ ಆತಂಕಕ್ಕೆ ಒಳಗಾಗಬೇಡಿ. ಜನಜಂಗುಳಿ ಇದ್ದಲ್ಲಿ ಹೋಗುವುದನ್ನು ಸ್ವಲ್ಪ ಕಡಿಮೆ ಮಾಡಿ ಎಂಬ ಸಲಹೆ ನೀಡಿದ್ದಾರೆ ಕಿಮ್ಸ್‌ ವೈದ್ಯರು.

ಕೊರೋನಾ ಭೀತಿ ಸದ್ಯಕ್ಕಿಲ್ಲ. ಆದರೆ, ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. 19 ಜನ ವೈದ್ಯರ ತಾಂತ್ರಿಕ ಸಮಿತಿ ರಚಿಸಿದೆ. ಕೊರೋನಾ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 100 ಬೆಡ್‌ ಮೀಸಲಿಡಲಾಗಿದೆ. ಆದರೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕಿಮ್ಸ್ ನಿರ್ದೇಶಕ ಎಸ್‌.ಎಫ್‌. ಕಮ್ಮಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಥನಾಳ ಸಂಗನಬಸವ ಶಿವಯೋಗಿಗಳ ಸ್ಮಾರಕ ನಿರ್ಮಾಣಕ್ಕೆ ಆಗ್ರಹ
ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಕಾರ್ಯ ಜನಮೆಚ್ಚುಗೆ