ಬಲಿಜ ನಿಗಮಕ್ಕೆ100 ಕೋಟಿ ರು. ಅನುದಾನ ನೀಡಿ : ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಮನವಿ

KannadaprabhaNewsNetwork |  
Published : Aug 06, 2024, 12:47 AM ISTUpdated : Aug 06, 2024, 10:24 AM IST
ಯೋಗಿನಾರೇಯಣ ಯತೀಂದ್ರರ ಜೀವಸಮಾಧಿ ಮಹೋತ್ಸವ ಆಚರಣೆ | Kannada Prabha

ಸಾರಾಂಶ

ಬಲಿಜ ಅಭಿವೃದ್ಧಿ ನಿಗಮಕ್ಕೆ ಈಗಿನ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡಿ,100 ಕೋಟಿ ರೂ. ಅನುದಾನ ನೀಡಿ

 ತುಮಕೂರು :  ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿ ಅಧಿಕಾರವಧಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಲಿಜ ಅಭಿವೃದ್ಧಿ ನಿಗಮಕ್ಕೆ ಈಗಿನ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡಿ,100 ಕೋಟಿ ರೂ. ಅನುದಾನ ನೀಡಿ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಮನವಿ ಮಾಡಿದರು.

ಜಿಲ್ಲಾ ಬಲಿಜ ಸಂಘದಿಂದ ನಗರದಲ್ಲಿ ಭಾನುವಾರ ನಡೆದ ಯೋಗಿನಾರೇಯಣ ಯತೀಂದ್ರರ 189ನೇ ವರ್ಷದ ಜೀವ ಸಮಾಧಿ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಬಲಿಜ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು, ಅದಕ್ಕಾಗಿ ಸಮಾಜದ ಹಿರಿಯರು ಅಗತ್ಯ ಅನುಕೂಲ ಮಾಡಿಕೊಟ್ಟು ಸಹಕರಿಸಬೇಕು. ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಬಾಲಕರಿಗೆ, ಬಾಲಕಿಯರಿಗೆ ಹಾಸ್ಟೆಲ್ ನಿರ್ಮಾಣ ಮಾಡಬೇಕು. ಈ ಕಾರ್ಯಕ್ಕೆ ಸಮಾಜದ ದಾನಿಗಳು ಕೈ ಜೋಡಿಸಬೇಕು ಎಂದು ವಿನಂತಿಸಿದರು.ಸ್ಫೂರ್ತಿ ಡೆವಲಪರ್ಸ್ ಎಸ್.ಪಿ.ಚಿದಾನಂದ್ ಮಾತನಾಡಿ, ಬಲಿಜ ಸಮಾಜದವರು ಉತ್ತಮ ಶಿಕ್ಷಣದೊಂದಿಗೆ ಆರ್ಥಿಕ ಸ್ವಾವಲಂಬಿಗಳಾಗಿ ಬೆಳೆಯಬೇಕು ಎಂದರು.

ಉದ್ಯಮಿ, ಚಿಕ್ಕಬಳ್ಳಾಪುರ ಜಿಲ್ಲೆ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯಲು ಸಾಧ್ಯ ಎಂದರು.

ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ, ಎನ್. ಗೋವಿಂದರಾಜು ಎಸ್.ನರಸಿಂಹಮೂರ್ತಿ, ಎನ್.ತಿಮ್ಮಶೆಟ್ಟಿ, ಎ.ಆರ್.ಚಿಕ್ಕರಂಗಯ್ಯ, ಎಂ.ವಿ.ರಾಮಚಂದ್ರ, ಬಿ.ವೆಂಕಟೇಶ್, ಟಿ.ಆರ್.ಹೆಚ್.ಪ್ರಕಾಶ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ