ಕಾಫಿನಾಡಿನಲ್ಲಿ 100 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಯಾತ್ರೆ

KannadaprabhaNewsNetwork |  
Published : Aug 13, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ದೇಶಭಕ್ತರ ಬಳಗದಿಂದ ಬುಧವಾರ ಚಿಕ್ಕಮಗಳೂರು ನಗರದಲ್ಲಿ 100 ಮೀ. ಉದ್ದದ ತ್ರಿವರ್ಣ ಧ್ವಜಯಾತ್ರೆ ನಡೆಯಿತು.

ನಗರದ ಹನುಮಂತಪ್ಪ ವೃತ್ತದಿಂದ ತಾಲೂಕು ಕಚೇರಿ ಆವರಣದಿಂದ ಅಜಾದ್ ಪಾಕ್ ವರೆಗೆ ಯಾತ್ರೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ದೇಶಭಕ್ತರ ಬಳಗದಿಂದ ಬುಧವಾರ ಚಿಕ್ಕಮಗಳೂರು ನಗರದಲ್ಲಿ 100 ಮೀ. ಉದ್ದದ ತ್ರಿವರ್ಣ ಧ್ವಜಯಾತ್ರೆ ನಡೆಯಿತು.

ಇದು ದೇಶ ಭಕ್ತಿಯ ಜಾಗೃತಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಸಂದೇಶ ಹೊತ್ತು ನಗರದ ಹನುಮಂತಪ್ಪ ವೃತ್ತದಿಂದ ತಾಲೂಕು ಕಚೇರಿ ಆವರಣದಿಂದ ಯಾತ್ರೆ ಎಂ.ಜಿ. ರಸ್ತೆಯ ಮೂಲಕ ಸಾಗಿ ಅಜಾದ್ ಪಾಕ್ ವರೆಗೆ ಸಾಗಿತು. ನೂರಾರು ಮಂದಿ ತ್ರಿವರ್ಣ ಧ್ವಜ ಹಿಡಿದು ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷ ವಾಕ್ಯದೊಂದಿಗೆ ಸಾಗಿದರು.ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ತಿರಂಗಾ ಯಾತ್ರೆ ದೇಶಭಕ್ತಿ ಜಾಗರಣೆ ಮತ್ತು ಜನಜಾಗೃತಿ ಸಂಕಲ್ಪ ದೊಂದಿಗೆ ನಡೆಯುತ್ತಿರುವ ಪುಟ್ಟ ಪ್ರಯತ್ನ ಎಂದರು.

ರಾಷ್ಟ್ರಕ್ಕೆ ಒಂದೇ ಧ್ವಜ ಅದು ತ್ರಿವರ್ಣಧ್ವಜ. ವಿವಿಧ ಸಂಘಟನೆಗಳು, ಪಕ್ಷಗಳು, ಜಾತಿ-ಸಮುದಾಯಗಳು ತಮ್ಮದೇ ಧ್ವಜಗಳನ್ನು ಹೊಂದಿರ ಬಹುದು. ಆದರೆ,ಇಡೀ ದೇಶವನ್ನು ಪ್ರತಿನಿಧಿಸುವ ಧ್ವಜ ರಾಷ್ಟ್ರಧ್ವಜ ಒಂದೇ. ಎಲ್ಲ ಧ್ವಜಗಳಿಗಿಂತ ಶ್ರೇಷ್ಠ ಧ್ವಜ, ರಾಷ್ಟ್ರಧ್ವಜ. ಅದಕ್ಕಿಂತ ಮಿಗಿಲಾದ ಧ್ವಜ ಮತ್ತೊಂದಿಲ್ಲ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲೂ ಇರಬೇಕು ಎಂದರು.ದೇಶದ ಪ್ರತಿಯೊಬ್ಬರಿಗೂ ವಿಭಿನ್ನ ಧಾರ್ಮಿಕ ಗ್ರಂಥಗಳು ಇರಬಹುದು. ಆದರೆ ಭಾರತದ ಸಂವಿಧಾನವೇ ದೇಶದ ಪರಮ ಕಾನೂನು ಮತ್ತು ಎಲ್ಲ ಭಾರತೀಯರನ್ನು ಒಂದೇ ಚೌಕಟ್ಟಿನಡಿ ಜೋಡಿಸುವ ಶಕ್ತಿ. ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆಗಳು ದೇಶದ ೧೪೦ ಕೋಟಿ ಗೂ ಅಧಿಕ ಜನರನ್ನು ಒಗ್ಗೂಡಿಸುವ ರಾಷ್ಟ್ರೀಯ ಸಂಕೇತಗಳಾಗಿವೆ ಎಂದರು.ಭಾರತೀಯ ಸೈನಿಕರು ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಹಲವು ಸಂದರ್ಭಗಳಲ್ಲಿ ತಮ್ಮ ಪರಾಕ್ರಮ ಪ್ರದರ್ಶಿಸಿದ್ದಾರೆ. ೧೯೪೮, ೧೯೬೫ ಮತ್ತು ೧೯೭೧ರ ಯುದ್ಧಗಳಲ್ಲಿ ಭಾರತೀಯ ಸೇನೆ ಸಾಹಸ ಸ್ಮರಿಸಿದ ಅವರು, ೧೯೭೧ರಲ್ಲಿ ೯೩ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಶರಣಾಗು ವಂತೆ ಮಾಡಿದ ಭಾರತದ ಸೇನೆ ಸಾಧನೆ ಐತಿಹಾಸಿಕ ಎಂದು ಹೇಳಿದರು.ಕಾರ್ಗಿಲ್‌ಯುದ್ಧದ ಸಂದರ್ಭದಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರ ಅವರ ಶೌರ್ಯ ಉಲ್ಲೇಖಿಸಿದ ಅವರು ಅತ್ಯಂತ ಕಠಿಣ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಯಲ್ಲೂ ಭಾರತೀಯ ಸೈನಿಕರು ಶತ್ರುಗಳ ವಿರುದ್ಧ ಹೋರಾಡಿ ವಿಜಯ ಸಾಧಿಸಿದರು ಎಂದು ಹೇಳಿದರು.

ಒಂದು ಶಿಖರವನ್ನು ಗೆದ್ದ ಬಳಿಕ ಮತ್ತೊಂದು ಶಿಖರ ಗೆಲ್ಲುವ ಉತ್ಸಾಹದಿಂದ ಅವರು ಹೇಳಿದ “ದಿಲ್ ಮಾಂಗೆ ಮೋರ್” ಎಂಬ ಮಾತು ಭಾರತೀಯ ಸೈನಿಕರ ಅಜೇಯ ಮನೋಭಾವದ ಸಂಕೇತವಾಗಿದೆ ಎಂದರು.ಆದರೆ ಇಂದಿನ ಸಂದರ್ಭದಲ್ಲಿ ಯುದ್ಧದ ಸ್ವರೂಪ ಬದಲಾಗಿದೆ. ಯುದ್ಧ ಕೇವಲ ಗಡಿಯಲ್ಲಿ ನಡೆಯುವುದಿಲ್ಲ. ಸೈಬರ್‌ಯುದ್ಧ, ಮಾಹಿತಿಯುದ್ಧ, ಸುಳ್ಳು ಸುದ್ದಿಗಳ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ, ಆರ್ಥಿಕ ಒತ್ತಡ ಹಾಗೂ ಜನಸಂಖ್ಯಾ ಬದಲಾವಣೆಗಳ ಮೂಲಕ ದೇಶದ ಆಂತರಿಕ ಸ್ಥಿರತೆ ಮೇಲೆ ಪರಿಣಾಮ ಬೀರುವ ಪ್ರಯತ್ನಗಳ ಬಗ್ಗೆಯೂ ಎಚ್ಚರಿಕೆಅಗತ್ಯಎಂದು ಹೇಳಿದರು.ಈ ವೇಳೆ ದೇಶಭಕ್ತರ ಬಳಗದ ಸಂಚಾಲಕ ಕೆ.ಎಸ್. ಪುಷ್ಪರಾಜ್, ನಿವೃತ್ತಯೋಧ ಮಂಜುನಾಥ್, ರಾಜ್ಯಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಸಿ ಕಲ್ಮರುಡಪ್ಪ, ನಗರ ಸಭಾ ಅಧ್ಯಕ್ಷೆ ಭವ್ಯಾ ಮಂಜುನಾಥ್, ಉಪಾಧ್ಯಕ್ಷೆ ಲಲಿತಾರವಿ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ನರೇಂದ್ರ, ರವೀಂದ್ರ ಬೆಳವಾಡಿ, ಬಿಜೆಪಿ ಜಿಲ್ಲಾ ವಕ್ತಾರ ಎಚ್.ಎಸ್ ಪುಟ್ಟಸ್ವಾಮಿ, ಮುಖಂಡರಾದ ಪ್ರೇಮ್‌ಕುಮಾರ್, ಶಾಲಾ ವಿದ್ಯಾರ್ಥಿಗಳು, ಬ್ರಹ್ಮಕುಮಾರಿ ಸಂಸ್ಥೆ, ಕನ್ನಡಪರ ಸಂಘಟನೆಗಳು, ದೇಶಭಕ್ತ ಬಾಂಧವರು, ವಿವಿಧ ಸಂಘ ಸಂಸ್ಥೆಗಳ ಪದಾದಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.-- ಕೋಟ್‌--

ದೇಶವನ್ನು ಸುರಕ್ಷಿತವಾಗಿಡುವುದು ಕೇವಲ ಸೈನಿಕರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಭಾರತೀಯನೂ ದೇಶದ ಭದ್ರತೆ ಮತ್ತು ಏಕತೆ ಬಗ್ಗೆ ಎಚ್ಚರವಾಗಿರಬೇಕು. ದೇಶ ದುರ್ಬಲಗೊಳಿಸುವ ಯಾವುದೇ ಪ್ರಯತ್ನದ ವಿರುದ್ಧ ರಾಷ್ಟ್ರೀಯ ಏಕತೆಯನ್ನುಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.

- ಸಿ.ಟಿ.ರವಿ, ಸದಸ್ಯ, ವಿಧಾನಪರಿಷತ್ತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ
ಲೀಡ್‌.... 16ರಂದು ಚಿತ್ತಾಪುರದಲ್ಲಿ ಉಪನ್ಯಾಸ, ಪ್ರತಿಭಾ ಪುರಸ್ಕಾರ