ಆರ್.ಜೆ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ 100 ಫಲಿತಾಂಶ

KannadaprabhaNewsNetwork |  
Published : Apr 11, 2024, 12:53 AM IST
ಫೋಟೋ- ಆರ್‌ಜೆ ಪಿಯು ಕಾಲೇಜ | Kannada Prabha

ಸಾರಾಂಶ

ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ 248 ವಿದ್ಯಾರ್ಥಿಗಳಲ್ಲಿ 149 ವಿದ್ಯಾರ್ಥಿಗಳು ಉನ್ನತಶ್ರೇಣಿ (ಡಿಸ್ಟಿಂಗ್‍ಷನ್), 99 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ (ಫಸ್ಟ್ ಕ್ಲಾಸ್) ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ 248 ವಿದ್ಯಾರ್ಥಿಗಳಲ್ಲಿ 149 ವಿದ್ಯಾರ್ಥಿಗಳು ಉನ್ನತಶ್ರೇಣಿ (ಡಿಸ್ಟಿಂಗ್‍ಷನ್), 99 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ (ಫಸ್ಟ್ ಕ್ಲಾಸ್) ಪಡೆದಿದ್ದಾರೆ.

16 ವಿದ್ಯಾರ್ಥಿಗಳು ‘ಗಣಿತ’ ವಿಷಯದಲ್ಲಿ, 05 ವಿದ್ಯಾರ್ಥಿಗಳು ‘ಜೀವಶಾಸ್ತ್ರ’, 04 ವಿದ್ಯಾರ್ಥಿಗಳು ‘ಭೌತಶಾಸ್ತ್ರ’, 04 ವಿದ್ಯಾರ್ಥಿಗಳು ‘ರಸಾಯನಶಾಸ್ತ್ರ’, ಓರ್ವ ವಿದ್ಯಾರ್ಥಿ ‘ಕನ್ನಡ’ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಾಲೇಜಿಗೆ ಪ್ರಥಮಸ್ಥಾನ ಗೌರಿ ಎನ್. ಕುಲಕರ್ಣಿ 585, ದ್ವಿತೀಯಸ್ಥಾನ ಪ್ರಿಯಾಂಕಾ ಭೀಮಶಪ್ಪಾ 581, ತೃತೀಯಸ್ಥಾನ ಶ್ರೇಯಸ್ ಜೆ. ದೇಶಮುಖ್ 579, ಶ್ರೀನಿಧಿ ಬಿರಾದಾರ 578, ಭಾರತಿ ಬಿ 577, ನಿಖಿತಾ ರೆಡ್ಡಿ 577, ಝರನಾ ಕೆ. ಚಾವಡಾ 574, ಕಾವೇರಿ ಎಸ್ 574, ಶ್ರೇಯಸ್ ಆರ್ ಅಕ್ಕಿ 573, ರಾಜೇಶ್ ಸಿದ್ದಪ್ಪಾ 572, ಕೆ.ಎ. ರಕ್ಷಿತಾ 570, ಶರಣು ಬಿ 570, ಪ್ರವೀಣಾ ರೆಡ್ಡಿ 569, ವೆಂಕಟೇಶ್ ಎಮ್ 569, ಹರ್ಷಿತಾ ಸಿ 568, ಪ್ರಾಜಕ್ತಾ ಎ 567, ರಂಜೀತಾ ಕೆ 567, ಪ್ರಶಾಂತ ಗೌಡ 566, ವೈಷ್ಣವಿ ಸಂತೋಷ 565, ಅಂಕಿತಾ ಸಾಬಯ್ಯ 564, ದೇವಿಂದ್ರಮ್ಮ ಕಲಕೇರಿ 564, ಶಿತಲ್ ಚವ್ಹಾಣ 564, ಸೌಜನ್ಯ ಕುಲಕರ್ಣಿ 564 ಅಂಕಗಳನ್ನು ಪಡೆದಿರುತ್ತಾರೆ.

ವಿಶೇಷವೇನೆಂದರೆ ಈ ಮೇಲ್ಕಾಣಿಸಿದ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳಿಗಿಂತ 10% ಹೆಚ್ಚು ಅಂಕಗಳನ್ನು ದ್ವಿತೀಯ ಪಿಯುಸಿಯಲ್ಲಿ ಪಡೆದಿರುತ್ತಾರೆ.

ಕಾಲೇಜಿನ ಶೈಕ್ಷಣಿಕ ನಿರ್ದೇಶಕರು, ಪ್ರಾಚಾರ್ಯರಾದ ಡಾ. ಭುರ್ಲಿ ಪ್ರಹ್ಲಾದ ಹಾಗೂ ಸರದಾರ ವಲ್ಲಭಭಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಕಾಲೇಜಿನ ಉಪನ್ಯಾಸಕರು, ಸಿಬ್ಬಂಧಿ ಬಳಗ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ