ಶೀಘ್ರ 108 ಆ್ಯಂಬುಲೆನ್ಸ್‌ ವ್ಯವಸ್ಥೆ: ಖಾದರ್

KannadaprabhaNewsNetwork |  
Published : Oct 14, 2026, 01:45 AM IST
ಖಾದರ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಬುಧವಾರ ರಾತ್ರಿಯಿಂದ ಕರ್ತವ್ಯ ಬಹಿಷ್ಕರಿಸುವುದಾಗಿ ಹೇಳುತ್ತಿರುವ 108 ಆ್ಯಂಬುಲೆನ್ಸ್‌ ಸಿಬ್ಬಂದಿ ಬ್ಲ್ಯಾಕ್‌ಮೇಲ್‌ಗೆ ನಾವು ಜಗ್ಗುವುದಿಲ್ಲ. ಸಾರ್ವಜನಿಕರು ಮುಂದಿನ ಎರಡು ತಿಂಗಳು 108 ಆ್ಯಂಬುಲೆನ್ಸ್ ಮೇಲೆ ಅವಲಂಬಿಸಬೇಡಿ. 2 ತಿಂಗಳ ಬಳಿಕ ಅತ್ಯುತ್ತಮ ಆ್ಯಂಬುಲೆನ್ಸ್‌ ಸೇವೆ ವ್ಯವಸ್ಥೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಬುಧವಾರ ರಾತ್ರಿಯಿಂದ ಕರ್ತವ್ಯ ಬಹಿಷ್ಕರಿಸುವುದಾಗಿ ಹೇಳುತ್ತಿರುವ 108 ಆ್ಯಂಬುಲೆನ್ಸ್‌ ಸಿಬ್ಬಂದಿ ಬ್ಲ್ಯಾಕ್‌ಮೇಲ್‌ಗೆ ನಾವು ಜಗ್ಗುವುದಿಲ್ಲ. ಸಾರ್ವಜನಿಕರು ಮುಂದಿನ ಎರಡು ತಿಂಗಳು 108 ಆ್ಯಂಬುಲೆನ್ಸ್ ಮೇಲೆ ಅವಲಂಬಿಸಬೇಡಿ. 2 ತಿಂಗಳ ಬಳಿಕ ಅತ್ಯುತ್ತಮ ಆ್ಯಂಬುಲೆನ್ಸ್‌ ಸೇವೆ ವ್ಯವಸ್ಥೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಈಗಲೂ 108 ಆ್ಯಂಬುಲೆನ್ಸ್‌ ಸೇವೆ ಸರಿಯಾಗಿಲ್ಲ. ಕರೆ ಮಾಡಿದರೆ ಮುಕ್ಕಾಲು ಗಂಟೆ, ಒಂದು ಗಂಟೆಯಾದರೂ ಬರುವುದಿಲ್ಲ. ಹೀಗಾಗಿ ಇದನ್ನು ಸಂಪೂರ್ಣ ಬದಲಿಸಿ ಡಿಸೆಂಬರ್‌ ವೇಳೆಗೆ ಹೊಸ ವ್ಯವಸ್ಥೆ ಜಾರಿ ಮಾಡುತ್ತೇವೆ. ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

1 ಸಾವಿರ ಆ್ಯಂಬುಲೆನ್ಸ್‌ಗಳಿವೆ: ಅಲ್ಲಿಯವರೆಗೆ ತುರ್ತು ಆರೋಗ್ಯ ಸೇವೆ ಪಡೆಯಲು ಏನು ಮಾಡಬೇಕೆಂಬ ಪ್ರಶ್ನೆಗೆ, ‘ರಾಜ್ಯದ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ 1,000 ಆ್ಯಂಬುಲೆನ್ಸ್‌ಗಳಿವೆ. ಎರಡು ತಿಂಗಳ ಮಟ್ಟಿಗೆ ಈ ಆ್ಯಂಬುಲೆನ್ಸ್‌ಗಳ ಮೂಲಕ ಸೇವೆ ಪಡೆಯಿರಿ. 108 ಆ್ಯಂಬುಲೆನ್ಸ್‌ ಅವಲಂಬಿಸಬೇಡಿಸಬೇಡಿ’ ಎಂದು ಯು.ಟಿ.ಖಾದರ್‌ ಹೇಳಿದ್ದಾರೆ.

ರಾಜ್ಯಾದ್ಯಂತ ಯೋಜನೆ ವಿಸ್ತರಣೆ:

ಈ ಮೊದಲು 108 ಆ್ಯಂಬುಲೆನ್ಸ್ ಇರಲಿಲ್ಲ. ಬಿಜೆಪಿ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಹೈ-ಕ ಭಾಗದ 4 ಜಿಲ್ಲೆಗಳಲ್ಲಿ ಮಾತ್ರ ಜಾರಿ ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆರೋಗ್ಯ ಸಚಿವನಾಗಿದ್ದಾಗ ನಾನೇ ರಾಜ್ಯಾದ್ಯಂತ ಯೋಜನೆ ವಿಸ್ತರಣೆ ಮಾಡಿದೆ.

735 ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದೆವು. ಆದರೆ, ಈಗ 400 ಚಿಲ್ಲರೆ ಆ್ಯಂಬುಲೆನ್ಸ್‌ ಮಾತ್ರ ಇದೆ. 750ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ ಅಗತ್ಯವಿರುವ ಕಡೆ 400 ಆ್ಯಂಬುಲೆನ್ಸ್‌ನಿಂದ ಯಾವ ಸೇವೆ ನೀಡಲು ಸಾಧ್ಯ? ಹೀಗಾಗಿಯೇ 20 ನಿಮಿಷಕ್ಕೆ ಬರಬೇಕಾಗಿರುವ ಆ್ಯಂಬುಲೆನ್ಸ್‌ 40-50 ನಿಮಿಷಕ್ಕೆ ಬರುತ್ತದೆ ಎಂದು ಕಿಡಿಕಾರಿದರು.

ಸಮಸ್ಯೆಯಾದರೆ ಜಿವಿಕೆ ಮೇಲೆ ಕ್ರಮ:

ಒಂದು ವೇಳೆ ಆ್ಯಂಬುಲೆನ್ಸ್ ಮುಷ್ಕರದಿಂದ ಸಮಸ್ಯೆಯಾದರೆ ಜಿವಿಕೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇವರನ್ನು ಸಂಪೂರ್ಣ ಬದಲಿಸಲು ಮುಂದಾಗಿದ್ದೇವೆ. ಹೀಗಾಗಿಯೇ ಎರಡು ತಿಂಗಳು ಸಾರ್ವಜನಿಕರ ಸಹಕಾರ ಕೋರುತ್ತಿದ್ದೇವೆ ಎಂದು ಖಾದರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಮಾಧಾನ ಬದಿಗಿಟ್ಟು ಲಿಂಬಿಕಾಯಿ ಪರ ಪ್ರಚಾರ: ಕುಬೇರಪ್ಪ
ಗೊಂಬೆಗಳ ಪ್ರದರ್ಶನ ಸಂಸ್ಕೃತಿ, ಸಂಸ್ಕಾರಗಳ ಭಾವನಾತ್ಮಕ ಬೆಸುಗೆ: ಶಕುಂತಲಾ ಆನಂದ್