ಕೊಪ್ಪಳ:
ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಹಲಗೇರಿ ಗ್ರಾಮದಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲೆ ಮಾದರಿ ಎನ್ನುವಂತೆ ಕೊಪ್ಪಳ ತಾಲೂಕಿನ ಸಮ್ಮೇಳನವನ್ನ ಆಚರಿಸೋಣ, ಕನ್ನಡ ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಹಡಾದ, ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಬಿ. ಗೊಂಡಬಾಳ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶರಣಪ್ಪ ಬಾಚಲಾಪುರ, ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ, ಸಂತೋಷ ದೇಶಪಾಂಡೆ, ಹುಸೇನ್ ಪಾಷಾ, ಹನುಮಂತ ಹಳ್ಳಿಕೇರಿ, ಬಸವರಾಜ ಕರುಗಲ್ಲ, ಕಂದಾಯ ಇಲಾಖೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕೆ. ಮ್ಯಾಗಳಮನಿ, ಮಾರುತೇಶ ಅಂಗಡಿ, ಕಳಕನಗೌಡ ಹಲೆಮನಿ, ಕಾಸೀಮ್ ಸಾಬ್, ಭೀಮಣ್ಣ ಗುಡ್ಲಾನೂರ, ಕಸಾಪ ಪದಾಧಿಕಾರಿಗಳಾದ ಶಿವಕುಮಾರ ಕುಕನೂರ, ರಮೇಶ ತುಪ್ಪದ, ಸೋಮನಗೌಡ ಹೊಗರನಾಲ, ಶರಣು ಡೊಳ್ಳಿನ ಮತ್ತಿತರರು ಇದ್ದರು.