ಕನ್ನಡಪ್ರಭದ ಸದಾನಂದ, ಸುವರ್ಣ ನ್ಯೂಸ್‌ನ ಅನಿಲ್‌ ಸೇರಿದಂತೆ 11 ಮಾಧ್ಯಮ ಪ್ರತಿನಿಧಿಗಳಿಗೆ ರಾಜ್ಯೋತ್ಸವ ಸನ್ಮಾನ

KannadaprabhaNewsNetwork |  
Published : Nov 01, 2025, 03:15 AM ISTUpdated : Nov 01, 2025, 07:49 AM IST
Kannada Rajyotsava

ಸಾರಾಂಶ

 ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದ ಕನ್ನಡಪ್ರಭ   ಹಿರಿಯ ಉಪ ಸಂಪಾದಕ ಸದಾನಂದ ಮಜತಿ, ಸುವರ್ಣ ನ್ಯೂಸ್‌ನ ಜಿಲ್ಲಾ ಹಿರಿಯ ವರದಿಗಾರ ಅನಿಲ್ ಕಾಜಗಾರ ಸೇರಿದಂತೆ ಜಿಲ್ಲೆಯ 11 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಸನ್ಮಾನ

  ಬೆಳಗಾವಿ : ಜಿಲ್ಲಾ ಕ್ರೀಡಾಂಗಣದಲ್ಲಿ ನ.1ರಂದು ಬೆಳಗ್ಗೆ 9.30ಕ್ಕೆ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕನ್ನಡಪ್ರಭ ದಿನಪತ್ರಿಕೆಯ ಹಿರಿಯ ಉಪ ಸಂಪಾದಕ ಸದಾನಂದ ಮಜತಿ, ಸುವರ್ಣ ನ್ಯೂಸ್‌ನ ಜಿಲ್ಲಾ ಹಿರಿಯ ವರದಿಗಾರ ಅನಿಲ್ ಕಾಜಗಾರ ಸೇರಿದಂತೆ ಜಿಲ್ಲೆಯ 11 ಜನ ಮಾಧ್ಯಮ ಪ್ರತಿನಿಧಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲು ನಿರ್ಧರಿಸಲಾಗಿದೆ.

ಸದಾನಂದ ಮಜತಿಗೆ ರಾಜ್ಯೋತ್ಸವದ ಗೌರವ

ಕನ್ನಡಪ್ರಭದ ಹಿರಿಯ ಉಪಸಂಪಾದಕ ಸದಾನಂದ ಮಜತಿ ಅವರು ಎರಡೂವರೆ ದಶಕಗಳಿಂದ ಸ್ಥಳೀಯ ಪತ್ರಿಕೆಗಳು ಸೇರಿದಂತೆ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಮಾಧ್ಯಮ ರಂಗದಲ್ಲಿ ಸಲ್ಲಿಸಿದ ಅವರ ಸೇವೆ ಪರಿಗಣಿಸಿ ಜಿಲ್ಲಾಮಟ್ಟದ ರಾಜ್ಯೋತ್ಸವದ ಗೌರವಕ್ಕೆ ಪರಿಗಣಿಸಿಲಾಗಿದೆ.

ಅನಿಲ್ ಕಾಜಗಾರಗೆ ರಾಜ್ಯೋತ್ಸವದ ಗೌರವ

ಸುವರ್ಣ ನ್ಯೂಸ್‌ನ ಜಿಲ್ಲಾ ಹಿರಿಯ ವರದಿಗಾರ ಅನಿಲ್ ಕಾಜಗಾರ ಅವರು ರಾಜ್ಯಮಟ್ಟದ ಪ್ರತಿಷ್ಠಿತ ಪತ್ರಿಕೆಗಳು ಸೇರಿದಂತೆ ದೃಶ್ಯ ಮಾಧ್ಯಮದಲ್ಲಿ ಸುಮಾರು ಒಂದುವರೆ ದಶಕಗಳ ಕಾಲ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಗೌರವ ಸನ್ಮಾನ ಮಾಡಲಾಗುತ್ತಿದೆ. ಹಾಗೆಯೇ ಜಿಲ್ಲೆಯ ವಿಜಯವಾಣಿ ಜಿಲ್ಲಾ ವರದಿಗಾರ ಮಂಜುನಾಥ ಕೋಳಿಗುಡ್ಡ, ಕೆ.ಪಿ.ಎನ್ ಸಂಸ್ಥೆಯ ಛಾಯಾಗ್ರಾಹಕ ವೀರನಗೌಡ ಇನಾಮತಿ, ಟಿವಿ 9 ಜಿಲ್ಲಾ ವರದಿಗಾರ ಸಹದೇವ ಮಾನೆ, ಟಿವಿ 9 ಕ್ಯಾಮರಾಮನ್ ಪ್ರವೀಣ ಶಿಂಧೆ, ಟಿವಿ 5 ಕ್ಯಾಮರಾಮನ್ ರವಿ ಭೋವಿ, ಲೋಕಕ್ರಾಂತಿ ದಿನಪತ್ರಿಕೆಯ ಸಂಪಾದಕ ಹಿರೋಜಿ ಮಾವರಕರ, ಸಂಯುಕ್ತ ಕರ್ನಾಟಕದ ಚಿಕ್ಕೋಡಿ ವರದಿಗಾರ ಸಂಜೀವ ಕಾಂಬಳೆ, ವಿಜಯಕರ್ನಾಟಕದ ನಿಪ್ಪಾಣಿ ವರದಿಗಾರ ಗಜಾನನ ರಾಮನಕಟ್ಟಿ, ಪತ್ರಿಕಾ ಹಿರಿಯ ವಿತರಕರಾದ ಶಂಕರ ಸುತಗಟ್ಟಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಗಣ್ಯರು ಸನ್ಮಾನಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ