ಹೆಣದ ಮೇಲೆ ರಾಜಕೀಯ ಮಾಡುವ ಬಿಜೆಪಿಗರು

KannadaprabhaNewsNetwork |  
Published : Jun 11, 2025, 12:17 PM ISTUpdated : Jun 11, 2025, 12:18 PM IST
39 | Kannada Prabha

ಸಾರಾಂಶ

ಮಹಾ ಕುಂಭಮೇಳದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಈವರೆಗೂ ಪರಿಹಾರ ಕೊಟ್ಟಿಲ್ಲ,

ಕನ್ನಡಪ್ರಭ ವಾರ್ತೆ ಮೈಸೂರುಹೆಣದ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಗರು ಈಗ ಪ್ರಧಾನಿ ಮೋದಿ, ರೈಲ್ವೆ ಸಚಿವರ ರಾಜೀನಾಮೆ ಕೇಳಲಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.ಬೆಂಗಳೂರಿನ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಥಾಣೆಯಲ್ಲಿ ರೈಲಿನಿಂದ ಐವರು ಬಿದ್ದು ಸಾವನ್ನಪ್ಪಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಆಡಳಿತ ವಿರುದ್ಧ ಮಹಾರಾಷ್ಟ್ರ ಸರ್ಕಾರವಾಗಲಿ, ರೈಲ್ವೆ ಸಚಿವರಾಗಲಿ ರಾಜೀನಾಮೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.ಮಹಾ ಕುಂಭಮೇಳದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಈವರೆಗೂ ಪರಿಹಾರ ಕೊಟ್ಟಿಲ್ಲ, ಅಲಹಾಬಾದ್‌ಹೈಕೋರ್ಟ್‌ಕೂಡ ಇದಕ್ಕೆ ಛೀಮಾರಿ ಹಾಕಿದೆ. ಇದರ ನೈತಿಕ ಹೊಣೆ ಹೊತ್ತು ಮೋದಿ ರಾಜೀನಾಮೆ ಕೊಡ್ತಾರಾ? ಪಹಲ್ಗಾಮ್‌ದಾಳಿಯಲ್ಲಿ ಮೃತಪಟ್ಟಿದ್ದಕ್ಕೆ ಆಪರೇಷ್‌ಸಿಂದೂರ ಆಯ್ತು, ಆದರೆ ಸಂತ್ರಸ್ತರಿಗೆ ಏನು ಪರಿಹಾರ ಕೊಟ್ಟಿದ್ದಾರೆ? ಆದರೆ ಸಿದ್ದರಾಮಯ್ಯ ಸರ್ಕಾರ ಘಟನೆ ನಡೆದ ಒಂದು ವಾರದೊಳಗೆ ಸಂತ್ರಸ್ತರ ಮನೆ ಬಾಗಿಲಿಗೆ ಪರಿಹಾರ ತಲುಪಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯರ ರಾಜೀನಾಮೆ ಕೇಳುವ ಬಿಜೆಪಿ ನಾಯಕರು ಕೇಂದ್ರದ ವೈಫಲ್ಯಗಳನ್ನೇಕೆ ಮುಚ್ಚಿಕೊಳ್ಳುತ್ತಿದ್ದೀರಿ? ಮೊದಲು ಮೋದಿ ರಾಜೀನಾಮೆ ಕೇಳಲಿ ಎಂದು ತಿರುಗೇಟು ನೀಡಿದ್ದಾರೆ.ಇನ್ನೂ ಮಾಜಿ ಸಂಸದ ಪ್ರತಾಪ್‌ಸಿಂಹ ಅವರು ಪ್ರತಿ ಬಾರಿ ಮಾತನಾಡುವಾಗಲೂ ಹಿಂದೂ ಮುಸ್ಲಿಮರ ನಡುವೆ ಒಡಕುಂಟು ಮಾಡುವಂತೆ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ರಾಜ್ಯದ ಸೌಹಾರ್ದತೆಯನ್ನು ಹಾಳುಗೆಡವುವ ಪ್ರಯತ್ನ ಮಾಡ್ತಿದ್ದಾರೆ. ನಿರ್ಗಮಿತ ಪೊಲೀಸ್‌ಆಯುಕ್ತ ಬಿ. ದಯಾನಂದ್‌ಅವರನ್ನ ವಾಲ್ಮೀಕಿ ಸಮುದಾಯದವರು ಅಂತ ಅವರ ವ್ಯಕ್ತಿತ್ವವನ್ನು ಕೀಳಾಗಿ ಬಿಂಬಿಸುವಂತೆ ಮಾಡಿದ್ದಾರೆ. ಒಬ್ಬ ಅಧಿಕಾರಿಗೆ ಕರ್ತವ್ಯ ಮುಖ್ಯವೇ ಹೊರತು ಜಾತಿ ಮುಖ್ಯವಲ್ಲ. ಜಾತಿಯನ್ನು ಒತ್ತಿ ಹೇಳುವ ಮೂಲಕ ಪ್ರತಾಪ್‌ಸಿಂಹ ಅವರನ್ನೂ ಜಾತಿಯಿಂದ ಅಳೆದಿರುವುದು ಅಕ್ಷಮ್ಯ ಎಂದು ಖಂಡಿಸಿದ್ದಾರೆ.ಸಿದ್ದರಾಮಯ್ಯರನ್ನ ಬೀಗರೂಟಕ್ಕೆ ಹೋಗ್ತಾರೆ, ಮೊಮ್ಮಗನನ್ನ ಕರೆದುಕೊಂಡು ಪೋಟೋಗ್ರಾಫ್‌ತೆಗೆದುಕೊಳ್ಳೊಕೆ ಹೋಗ್ತಾರೆ ಅಂತಾರೆ. ಇವರು ತಮ್ಮ ಪತ್ನಿ, ಮಗಳನ್ನ ಪ್ರಧಾನಿ ಮೋದಿ ಅವರ ಬಳಿ ಕರೆದೊಯ್ದು ಫೋಟೋ ಕ್ಲಿಕ್ಕಿಸಿಕೊಳ್ಳಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.-----------------eom/mys/shekar/

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ