ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗಿ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಸದ್ಯ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚಿನ ಪಾದಚಾರಿ ಮೇಲ್ಸೇತುವೆಗಳಿವೆ. ಅವುಗಳ ಜತೆಗೆ ಇದೀಗ ಪಾದಚಾರಿಗಳು ಹೆಚ್ಚಾಗಿ ಓಡಾಡುವ ಮತ್ತು ಸಂಚಾರ ದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಬೇಡಿಕೆಗನುಗುಣವಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಧರಿಸಿದೆ. ಅದಕ್ಕಾಗಿ 11 ಮಾರ್ಗ ಮತ್ತು ಸ್ಥಳದ ಪಟ್ಟಿ ಮಾಡಲಾಗಿದ್ದು, ಅಲ್ಲಿ ಪಾದಚಾರಿ ಮೇಲ್ಸೇತುವೆಯ ಅವಶ್ಯಕತೆ ಇದೆಯೇ ಮತ್ತು ಅಲ್ಲಿ ನಿರ್ಮಾಣ ಸಾಧ್ಯವೇ ಎಂಬ ಬಗ್ಗೆ ಖಾಸಗಿ ಸಂಸ್ಥೆಯಿಂದ ವರದಿ ತರಿಸಿಕೊಳ್ಳಲಾಗುತ್ತಿದೆ. ಆ ವರದಿ ಆಧರಿಸಿ ಬಿಬಿಎಂಪಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಿದೆ.ಯಾವೆಲ್ಲ ಮಾರ್ಗಗಳಲ್ಲಿ ಸ್ಕೈವಾಕ್
1. ಟ್ಯಾಂಕ್ ಬಂಡ್ ರಸ್ತೆ2. ಹೊರವರ್ತುಲ ರಸ್ತೆಯ ಚೌಡೇಶ್ವರಿ ಕೆಳಸೇತುವೆಯಿಂದ ಸುಮನಹಳ್ಳಿ ಕೆಳಸೇತುವರೆಗೆ
4. ತುಮಕೂರು ರಸ್ತೆಯ ಆರ್‌ಎಂಸಿ ಯಾರ್ಡ್‌ನಿಂದ ಎಂಇಐ ಜಂಕ್ಷನ್‌ವರೆಗೆ
6. ಹೊರವರ್ತುಲ ರಸ್ತೆಯ ಬಾಗ್ಮಾನೆ ಟೆಕ್‌ಪಾರ್ಕ್ ಬಳಿ
8. ಹಳೇ ಮದ್ರಾಸ್ ರಸ್ತೆ
10. ಮೈಸೂರು ರಸ್ತೆಯ ಬಿಎಚ್‌ಇಎಲ್ ಬಳಿ