ಇಂಡಿಯಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನ 11ನೇ ಶಾಖೆ ಆರಂಭ

KannadaprabhaNewsNetwork |  
Published : Nov 13, 2024, 12:50 AM ISTUpdated : Nov 13, 2024, 12:51 AM IST
ಇಂಡಿಯಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ 11ನೇ ಶಾಖೆ ಆರಂಭ | Kannada Prabha

ಸಾರಾಂಶ

ಇಂಡಿ ಪಟ್ಟಣದಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನ 11ನೇ ಶಾಖೆಯನ್ನು ಸಂಸ್ಥಾಪಕ ಅಧ್ಯಕ್ಷೆ ಡಾ.ಮಲ್ಲಮ್ಮ ಯಾಳವಾರ ನೇತೃತ್ವದಲ್ಲಿ, ಶಿರಶ್ಯಾಡ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ, ಕಾಂಗ್ರೆಸ್ ಯುವ ಮುಖಂಡ ವಿಠಲಗೌಡ ಪಾಟೀಲ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಇಂಡಿ ಪಟ್ಟಣದಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನ 11ನೇ ಶಾಖೆಯನ್ನು ಸಂಸ್ಥಾಪಕ ಅಧ್ಯಕ್ಷೆ ಡಾ.ಮಲ್ಲಮ್ಮ ಯಾಳವಾರ ನೇತೃತ್ವದಲ್ಲಿ, ಶಿರಶ್ಯಾಡ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ, ಕಾಂಗ್ರೆಸ್ ಯುವ ಮುಖಂಡ ವಿಠಲಗೌಡ ಪಾಟೀಲ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಡಾ.ಭಾರತಿ ಗಜಾಕೋಶ, ಅತಿಥಿಗಳಾಗಿ ಸಹಾಯಕ ನಿಬಂಧಕ ಕನಕಪ್ಪ ವಡ್ಡರ, ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಅಶೋಕ ಪಾಟೀಲ, ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್‌.ಪಾಟೀಲ ಬಳ್ಳೊಳ್ಳಿ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶೇಖರ ನಾಯಕ ಭಾಗವಹಿಸಿದ್ದರು. ಇದೇ ವೇಳೆ 30 ವರ್ಷಗಳಿಂದ ಬ್ಯಾಂಕಿನೊಂದಿಗೆ ನಿರಂತರ ವ್ಯವಹಾರ ಹೊಂದಿದ್ದ ಬ್ಯಾಂಕಿನ ಅತ್ಯತ್ತಮ ಗ್ರಾಹಕರಿಗೆ ಸನ್ಮಾನಿಸಲಾಯಿತು. ಜಮಖಂಡಿ ಶಾಖೆ ವ್ಯವಸ್ಥಾಪಕಿ ಪ್ರಭಾವತಿ ಪಾಟೀಲ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕಿ ಲಕ್ಷ್ಮೀ ಬಳಗೊಂಡ ಪ್ರಾಸ್ತಾವಿಕವಾಗಿ ನುಡಿದರು. ಪ್ರಧಾನ ಶಾಖೆಯ ವ್ಯವಸ್ಥಾಪಕಿ ಮೈತ್ರಾ ಬಾಗೇವಾಡಿ ನಿರೂಪಿಸಿದರು. ರಾಜೇಶ್ವರಿ ಬಿರಾದಾರ ವಂದಿಸಿದರು.ಮಲ್ಲಮ್ಮ ಯಾಳವಾರ ನಾಯಕತ್ವ ಹಾಗೂ ಸಿಬ್ಬಂದಿ ಪರಿಶ್ರಮದಿಂದ ನೂರು ಶಾಖೆಯನ್ನು ಪ್ರಾರಂಭಿಸಬಹುದು. ಮಲ್ಲಮ್ಮ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕು ಉತ್ತರೂತ್ತರವಾಗಿ ಅಭಿವೃದ್ಧಿ ಹೊಂದಲಿ. ಬ್ಯಾಂಕ್‌ನ 1ನೇ ಶಾಖೆಯು ಶ್ರೀ ಸಿದ್ದೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿದ್ದು, 11ನೇ ಶಾಖೆಯು ನಮ್ಮ ಅಮೃತ ಹಸ್ತದಿಂದ ನೆರವೇರಿದೆ.

-ಅಭಿನವ ಮುರುಗೇಂದ್ರ ಶಿವಾಚಾರ್ಯ ಸ್ವಾಮಿ, ಶಿರಶ್ಯಾಡ ಹಿರೇಮಠ.

ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಮನ್ವಯ ಚೆನ್ನಾಗಿದ್ದು, ಬ್ಯಾಂಕ್‌ ಅಭಿವೃದ್ಧಿ ಪಥದಲ್ಲಿ ಸಾಗಲು ಕಾರಣವಾಗಿದೆ. 30 ವರ್ಷಗಳ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ ಈ ಅಭಿವೃದ್ಧಿಗೆ ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರ ಸಹಕಾರ ಮುಖ್ಯವಾಗಿದೆ.

-ಡಾ.ಮಲ್ಲಮ್ಮ ಯಾಳವಾರ, ಅಧ್ಯಕ್ಷೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!