ಆಮ್ಲಜನಕ ಕೊರತೆಯಿಂದ ಪ್ರತಿ ವರ್ಷ 12 ಲಕ್ಷ ಜನ ಸಾವು: ಪರಿಸರವಾದಿ ಪಿ.ವಿ. ಹಿರೇಮಠ ಕಳವಳ

KannadaprabhaNewsNetwork |  
Published : Nov 16, 2026, 02:00 AM IST
ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ನಾಡಹಬ್ಬದ 11ನೇ ದಿನದಲ್ಲಿ ಪರಿಸರ ಕ್ಷೇತ್ರದಲ್ಲಿ ಅನುಪಮ ಸೇವೆಗಾಗಿ ಪಿ.ವಿ. ಹಿರೇಮಠ ಅವರನ್ನು ಸನ್ಮಾನ ಮಾಡಲಾಯಿತು. | Kannada Prabha

ಸಾರಾಂಶ

ಪ್ರತಿವರ್ಷ ಆಮ್ಲಜನಕ ಕೊರತೆಯಿಂದ ಹನ್ನೆರಡು ಲಕ್ಷ ಜನರು ಜಗತ್ತಿನಾದ್ಯಂತ ಸಾಯುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಅಭಾವದಿಂದ ಏಳೂವರೆ ಲಕ್ಷ ಜನ ಅಸುನೀಗುತ್ತಿದ್ದಾರೆ.

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕರ್ನಾಟಕ ರಾಜ್ಯೋತ್ಸವ-ನಾಡಹಬ್ಬ

ಕನ್ನಡಪ್ರಭ ವಾರ್ತೆ ಧಾರವಾಡ

ಪ್ರತಿವರ್ಷ ಆಮ್ಲಜನಕ ಕೊರತೆಯಿಂದ ಹನ್ನೆರಡು ಲಕ್ಷ ಜನರು ಜಗತ್ತಿನಾದ್ಯಂತ ಸಾಯುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಅಭಾವದಿಂದ ಏಳೂವರೆ ಲಕ್ಷ ಜನ ಅಸುನೀಗುತ್ತಿದ್ದಾರೆ. ಶುದ್ಧ ಆಹಾರ, ನೀರು, ವಸತಿ ಮೂಲಭೂತ ಸೌಕರ್ಯಗಳು ಸಂವಿಧಾನದ ಹಕ್ಕುಗಳಾಗಿದ್ದು, ಅವು ಸಹ ಸಿಗದಾಗುತ್ತಿವೆ ಎಂದು ಪರಿಸರವಾದಿ ಪಿ.ವಿ. ಹಿರೇಮಠ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ನಾಡಹಬ್ಬದ 11ನೇ ದಿನದಲ್ಲಿ ಪರಿಸರ ಕ್ಷೇತ್ರದಲ್ಲಿ ಅನುಪಮ ಸೇವೆಗಾಗಿ ಸನ್ಮಾನ ಸ್ವೀಕರಿಸಿದರು. ದೇಶದಲ್ಲಿ ಕೋವಿಡ್‌ ಸಮಯದಲ್ಲಿ ಸುಮಾರು ಐದಾರು ಲಕ್ಷ ಜನ ಬಡವ ಬಲ್ಲಿದ ಎನ್ನದೆ ಅಸುನೀಗಿದರು. ಆದರೂ ಎಚ್ಚೆತ್ತುಕೊಂಡಿಲ್ಲ. ಮನುಷ್ಯನ ದುರಾಸೆಯಿಂದ ವಿವಿಧ ಮೂಲದ ಪರಿಸರ ನಾಶದಿಂದ ಪ್ರತಿವರ್ಷ ಇಪ್ಪತ್ತು ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ಇದಕ್ಕೆ ಹೊಣೆ ಯಾರು? ಭೂಮಿಯ ಮೇಲೆ ಎಲ್ಲ ಜೀವ ಸಂಕುಲ ಬದುಕಬೇಕು. ಪರಿಶುದ್ಧವಾದ ವಾತಾವರಣ ಕೊಡದೇ ಇರುವ ದುಸ್ಥಿತಿಯಲ್ಲಿದ್ದೇವೆ. ಇಂಥ ಸ್ಥಿತಿ ತಂದುಕೊಂಡ ನಾವು ಪ್ರಜ್ಞಾವಂತ ನಾಗರಿಕರೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳಬೇಕು ಎಂದರು.

ಭವಿಷ್ಯದ ದೃಷ್ಟಿಯಿಂದ ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀತಿ ಆಯೋಗದ ಧೋರಣೆಗಳನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ಕುರಿತು ಸರ್ಕಾರವಲ್ಲದೇ, ಸಂಘ, ಸಂಸ್ಥೆಗಳ ಹಾಗೂ ನಾಗರಿಕರ ಸಾಮಾಜಿಕ ಜವಾಬ್ದಾರಿ ಹಾಗೂ ಸಹಭಾಗಿತ್ವದ ಅವಶ್ಯಕತೆ ಇದೆ ಎಂದು ಎಚ್ಚರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕ.ವಿ.ವ. ಸಂಘವು ಕರ್ನಾಟಕ ಏಕೀಕರಣ, ಗೋಕಾಕ ಚಳವಳಿ ಮುಂತಾದ ಹಲವಾರು ಚಳವಳಿ, ಹೋರಾಟಗಳನ್ನು ಹುಟ್ಟುಹಾಕಿ ಯಶಸ್ವಿಗೊಳಿಸಿ, ನಾಡು, ನುಡಿ, ಸಾಹಿತ್ಯ, ಸಂಗೀತ ನೆಲ, ಜಲಗಳ ಕುರಿತು ನಿರಂತರ ಜಾಗೃತಿ ಮೂಡಿಸುವಲ್ಲಿ ಅನುಪಮ ಕಾರ್ಯ ಮಾಡುತ್ತಿದೆ ಎಂದರು.

ಆರಂಭದಲ್ಲಿ ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ವಚನ ಸಂಗೀತ, ಶಾಂತಾ ಹೂಗಾರ ಇವರಿಂದ ಸೋಬಾನಪದ ಹಾಗೂ ಕೊಣ್ಣೂರಿನ ಐ.ಆರ್. ಬಾಳಪ್ಪನವರ ಮತ್ತು ತಂಡದಿಂದ ಜಾನಪದ ಹಾಡುಗಳು ನಡೆದವು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ಭಿನ್ನವತ್ತಳೆ ಫಲಕ ವಾಚಿಸಿದರು. ಸತೀಶ ತುರಮರಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ