12 ವರ್ಷಗಳ ಪ್ರೀತಿ: ಗೆಳೆಯನ ವರಿಸಿದ ಚೈತ್ರಾ ಕುಂದಾಪುರ

KannadaprabhaNewsNetwork |  
Published : May 10, 2025, 01:01 AM IST
9ಚೈತ್ರ | Kannada Prabha

ಸಾರಾಂಶ

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ 12 ವರ್ಷ ಪ್ರೀತಿಸಿದ ಗೆಳೆಯನ ಕೈ ಹಿಡಿದಿದ್ದಾರೆ. ಶುಕ್ರವಾರ ಕುಂದಾಪುರದ ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚೈತ್ರ ಮತ್ತು ಆಕೆಯ ಗೆಳೆಯ ಶ್ರೀಕಾಂತ್ ಕಶ್ಯಪ್ ಸಪ್ತಪದಿ ತುಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ 12 ವರ್ಷ ಪ್ರೀತಿಸಿದ ಗೆಳೆಯನ ಕೈ ಹಿಡಿದಿದ್ದಾರೆ. ಶುಕ್ರವಾರ ಕುಂದಾಪುರದ ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚೈತ್ರ ಮತ್ತು ಆಕೆಯ ಗೆಳೆಯ ಶ್ರೀಕಾಂತ್ ಕಶ್ಯಪ್ ಸಪ್ತಪದಿ ತುಳಿದರು.ಬಿಗ್‌ಬಾಸ್‌ನ ಇತರ ಸ್ಪರ್ಧಿಗಳಾದ ರಜತ್, ಗೊಲ್ಡ್ ಸುರೇಶ್, ಧನರಾಜ್ ಭಾಗಿಗಳಾಗಿ ಮದುವೆಯ ಸಂಭ್ರಮ ಹೆಚ್ಚಿಸಿದರು.ಚೈತ್ರಾ ಕಾಲೇಜಿನಲ್ಲಿ ಓದುತಿದ್ದಾಗ ಜಗಳವೊಂದರಿಂದ ಶ್ರೀಕಾಂತ್ ನ ಪರಿಚಯವಾಗಿ ಗಳೆತನಕ್ಕೆ ತಿರುಗಿ ಇದೀಗ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಆ್ಯನಿಮೇಶನ್ ತಂತ್ರಜ್ಞರಾಗಿರುವ ಶ್ರೀಕಾಂತ್ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯವನ್ನೂ ಮಾಡುತ್ತಾರೆ........ಸಂಸ್ಕೃತಿ ಉಳಿಸಿ, ಸಂಸ್ಕಾರ ಬೆಳೆಸುವ ಯಕ್ಷಗಾನ: ಬಾಳೆಕುದ್ರು ಶ್ರೀ

ಯಕ್ಷಗಾನ ಒಂದು ಆರಾಧನಾ ಕಲೆ. ಇದರ ಮುಖ್ಯ ಆಶಯ ಸಂಸ್ಕೃತಿ ಉಳಿಸುವುದು, ಸಂಸ್ಕಾರ ಬೆಳೆಸುವುದು. ಪ್ರದರ್ಶನಗಳಿಂದ ಧರ್ಮ ಪ್ರಚಾರವಾಗುತ್ತದೆ, ಭಾರತೀಯ ಸಂಸ್ಕೃತಿ ಉಳಿಯುವಲ್ಲಿ ಸಹಕರಿಸಿ ಜನಮಾನಸದ ಒಳಗೆ ಪುರಾಣಗಳ ಆಶಯ ಗಟ್ಟಿ ಮಾಡುತ್ತದೆ ಎಂದು ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಆಯೋಜಿಸಿದ್ದ ೨೦ ದಿವಸಗಳ ‘ನಲಿ ಕುಣಿ’ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಹದಂಡನೆಯ ಕಲೆ ಭಗವಂತನಿಗೆ ಪ್ರಿಯವಾದದ್ದು. ಕಲೆಯಿಂದ ಸಂಸ್ಕೃತಿಯ ಉದ್ಧಾರವಾಗಬೇಕು. ಮನಸ್ಸು ವಿಕಾಸವಾಗಬೇಕು. ಆದರೂ ಯಕ್ಷಗಾನ ಇತ್ತೀಚಿಗೆ ಭಕ್ತಿ ಹೀನವಾದ, ಲೌಕಿಕ ಪ್ರಸಂಗಗಳ, ಶಾಸ್ತ್ರ ವಿರುದ್ಧ ಸಂಭಾಷಣೆಗಳ, ಮನೋವಿಕಾರತೆ ಹೊಂದಿರುವುದನ್ನು ಗಮನಿಸುತ್ತಿದ್ದೇವೆ. ಹಾಗಾಗಬಾರದು ಎಂದು ಅವರು ಆಶಿಸಿದರು.ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಲೆಕ್ಕಪತ್ರ ಪರಿಶೋಧಕ ಜತೀಂದ್ರ ಮರವಂತೆ ಉಪಸ್ಥಿತರಿದ್ದರು. 20 ದಿವಸಗಳ ಶಿಬಿರದ ಪ್ರಾಚಾರ್ಯರನ್ನು ಮತ್ತು ಶಿಕ್ಷಕರನ್ನು ಶ್ರೀಗಳು ಗೌರವಿಸಿದರು. ಆರ್ಥಿಕವಾಗಿ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಯಕ್ಷಗಾನ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ