ಕನ್ನಡಪ್ರಭ ವಾರ್ತೆ ಗುಬ್ಬಿ
ಪೌತಿ ಖಾತೆ ಆಗದೇ ಇರುವ ಬಗ್ಗೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಇ ಸ್ವತ್ತು ವಿಳಂಬ ಆಗುತ್ತಿರುವ ಬಗ್ಗೆ ದೂರು ಬಂದಿದ್ದು ಇದನ್ನು ಸರ್ಕಾರದ ಹಂತದಲ್ಲಿ ಬಗೆಹರಿಸುತ್ತದೆ. ಬೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಮತ್ತು ರೈತರು ಓಡಾಡುವ ದಾರಿಯಲ್ಲಿ ವಿದ್ಯುತ್ ತಂತಿಯು ಕೆಳಗೆ ನೇತಾಡುತ್ತಿದ್ದು ಅದನ್ನು ಸರಿ ಮಾಡಲು ಕಳ್ಳಿಪಾಳ್ಯ ಗ್ರಾಮಸ್ಥರು ಸುಮಾರು ಬಾರಿ ಬೆಸ್ಕಾಂ ಇಲಾಖೆಗೆ ಅರ್ಜಿ ನೀಡಿದ್ದರು ಸಹ ಬಗೆಹರಿಸದ ಕಾರಣ ರೈತರು ನೇರವಾಗಿ ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದಾಗ ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಬೆಸ್ಕಾಂ ಇಲಾಖೆಯ ಸಹಾಯಕ ಎಂಜಿನಿಯರ್ ಅನ್ನು ಕರೆದು ತರಾಟೆಗೆ ತೆಗೆದುಕೊಂಡು ಇಂದೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆದೇಶಿಸಿದರು.
ಸಾತೇನಹಳ್ಳಿ ಗೇಟ್ ಹತ್ತಿರ ಇರುವ ಅಲೆಮಾರಿ ಜನಾಂಗದ ಕೆಲವರಿಗೆ ಹಕ್ಕುಪತ್ರ ನೀಡುವಲ್ಲಿ ಸ್ವಲ್ಪ ವಿಳಂಬವಾಗಿದ್ದು ಕೂಡಲೇ ತ್ವರಿತವಾಗಿ ಸರಿಪಡಿಸಲು ಸೂಚಿಸಿದ್ದು. ರೇಷನ್ ಕಾರ್ಡ್ ವಿಚಾರದಲ್ಲಿ ಕೆಲವರಿಗೆ ಆರು ತಿಂಗಳಿನಿಂದ ರೇಷನ್ ಬರುತ್ತಿಲ್ಲ ಎಂದು ಒಬ್ಬ ಮಹಿಳೆ ಜಿಲ್ಲಾಧಿಕಾರಿಯ ಮುಂದೆ ಬಂದು ಕಣ್ಣೀರು ಇಟ್ಟಾಗ ಅದಕ್ಕೆ ಸ್ಥಳದಲ್ಲೇ ಇದ್ದ ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ತಿಳಿಸಿ ಸ್ಥಳದಲ್ಲಿಯೇ ಪಡಿತರ ಚೀಟಿ ನೀಡುವ ವ್ಯವಸ್ಥೆ ಮಾಡಿದರು. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾಣೆಯಾಗಿದ್ದು ತಿದ್ದುಪಡಿ ಆಗದೆ ಇರುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ದೂರು ನೀಡಿದಾಗ ಅದಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಅನ್ನು ಸ್ಥಳದಲ್ಲೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ ಸ್ಥಳದಲ್ಲಿಯೇ ನೀಡಿದರು. ಪಿಎಂ ಕಿಸಾನ್ ಯೋಜನೆಯಡಿ ಆರು ತಿಂಗಳಿನಿಂದ ಹಣ ಬಾರದೆ ಇರುವ ಬಗ್ಗೆ ರೈತರಿಂದ ದೂರು ಬಂದಿದ್ದು ಪರಿಶೀಲಿಸಲು ಸೂಚಿಸಲಾಯಿತು. ಜಿಲ್ಲಾ ಉಸ್ತುವಾರಿಯ ಸಚಿವರ ಆದೇಶದಂತೆ ಸರ್ಕಾರದ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲೂ ಜನ ಸಂಪರ್ಕ ಸಭೆಯನ್ನು ಮಾಡಲಾಗುತ್ತದೆ. ಪ್ರಥಮವಾಗಿ ಗುಬ್ಬಿಯಲ್ಲಿ ಮಾಡಲಾಗಿದೆ. ಇಲ್ಲಿ ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗಿದೆ. ಸುಮಾರು ಅರ್ಜಿಗಳಿಗೆ ಗಡುವು ನೀಡಲಾಗಿದೆ. ಉಳಿದ ಅರ್ಜಿಗಳನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ವರ್ಗಾಯಿಸಿ ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಹಾರ ಶಾಖೆ ಜಂಟಿ ನಿರ್ದೇಶಕಿ ಸೌಮ್ಯ, ತಹಸೀಲ್ದಾರ್ ಆರತಿ ಬಿ. ತಾಪಂ ಇಒ ರಂಗನಾಥ್, ಡಾ. ಬಿಂದು ಮಾಧವ್, ಡಾ. ಕೇಶವ್‌ರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವೀಣಾ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುಳಾದೇವಿ, ತಾಲೂಕು ಮಟ್ಟದ ಅಧಿಕಾರಿಗಳು, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.