ಎಂಟು ತಿಂಗಳಲ್ಲಿ ಜಿಲ್ಲೆಗೆ 1200 ಕೋಟಿ ರು. ಅನುದಾನ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Mar 03, 2024, 01:32 AM IST
ಆಕರ್ಷಣೀಯವಾಗಿ ಮೂಡಿಬಂದ ಗಂಗಾರತಿ | Kannada Prabha

ಸಾರಾಂಶ

ಕೆಲವರು ಜಿಲ್ಲೆಯ ಅಭಿವೃದ್ಧಿಗೆ ಎಂಟು ಸಾವಿರ ಕೋಟಿ ರೂ ಕೊಟ್ಟಿದ್ದೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದ್ದರು. ಆದರೆ ನಾವು ಅನುದಾನ ತಂದು ಜಿಲ್ಲೆಯ ಅಭಿವೃದ್ದಿ ಮಾಡುತ್ತಿದ್ದೇವೆ. ಇನ್ನೆರಡು ವರ್ಷದಲ್ಲಿ 500 ಕೋಟಿ ರು. ವೆಚ್ಚದಲ್ಲಿ ಹೊಸ ಮೈಶುಗರ್ ಕಾರ್ಖಾನೆಯನ್ನು ಪ್ರಾರಂಭ ಮಾಡಿಯೇ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ 1200 ಕೋಟಿ ರು. ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಿ ನಿಂತಿದೆ ಎಂದು ಶಾಸಕ ಪಿ. ರವಿಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಮೊದಲ ಬಾರಿಗೆ ತಾಲೂಕಿನ ಬೂದನೂರು ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವರು ಜಿಲ್ಲೆಯ ಅಭಿವೃದ್ಧಿಗೆ ಎಂಟು ಸಾವಿರ ಕೋಟಿ ರೂ ಕೊಟ್ಟಿದ್ದೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದ್ದರು. ಆದರೆ ನಾವು ಅನುದಾನ ತಂದು ಜಿಲ್ಲೆಯ ಅಭಿವೃದ್ದಿ ಮಾಡುತ್ತಿದ್ದೇವೆ. ಇನ್ನೆರಡು ವರ್ಷದಲ್ಲಿ 500 ಕೋಟಿ ರೂ ವೆಚ್ಚದಲ್ಲಿ ಹೊಸ ಮೈಶುಗರ್ ಕಾರ್ಖಾನೆಯನ್ನು ಪ್ರಾರಂಭ ಮಾಡಿಯೇ ಮಾಡುತ್ತೇವೆ ಎಂದರು.

ಮಂಡ್ಯ ನಗರದ ಅಮರಾವತಿ ಹೋಟೆಲ್ ನಿಂದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ವರೆಗಿನ ರಸ್ತೆ ಅಭಿವೃದ್ದಿಗೆ 33 ಕೋಟಿ ರೂ. ಮಂಜೂರಾಗಿದ್ದು ಇನ್ನೆರಡು ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೇರಳದಲ್ಲಿರುವ ಶ್ರೀ ಅನಂತ ಪದ್ಮನಾಭ ದೇವಾಲಯ ಬಿಟ್ಟರೆ ಬೂದನೂರಿನಲ್ಲಿ ಶ್ರೀ ಅನಂತ ಪದ್ಮನಾಭ ದೇವಾಲವಿರುವುದನ್ನು ಕಾಣಬಹುದು. ಅದೇ ರೀತಿ ಶ್ರೀ ಕಾಶಿ ವಿಶ್ವಾನಾಥ ದೇವಾಲಯವನ್ನು ಒಂದೇ ಊರಿನಲ್ಲಿ ನೋಡಬಹುದು. ಐಯಿಹಾಸಿಕ ದೇವಾಲಯಗಳನ್ನು ಒಳಗೊಂಡಿದ್ದರೂ ಬೂದನೂರು ಪ್ರವಾಸಿ ತಾಣವಾಗಿ ಅಭಿವೃದ್ದಿ ಕಾಣದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಬೂದನೂರು ಉತ್ಸವ ಆಯೋಜಿಸಿರುವುದಾಗಿ ತಿಳಿಸಿದರು.

ಬೂದನೂರು ಇಂದು ಇತಿಹಾಸ ಪುಟ ಸೇರಿದೆ.‌ಇನ್ನು ಮುಂದೆ ಪ್ರತಿ ವರ್ಷ ಬೂದನೂರು ಉತ್ಸವ ನಡೆಯಲಿದೆ ಎಂದರು.

ಆಕರ್ಷಣೀಯವಾಗಿ ಮೂಡಿಬಂದ ಗಂಗಾರತಿಕನ್ನಡಪ್ರಭ ವಾರ್ತೆ ಮಂಡ್ಯಬೂದನೂರು ಉತ್ಸವದ ಅಂಗವಾಗಿ ಆಯೋಜಿಸಿದ್ದ ಗಂಗಾರತಿ ಕಾರ್ಯಕ್ರಮ ಆಕರ್ಷಣೀಯವಾಗಿ ಮೂಡಿಬಂದು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.ಕಾಶಿಯಲ್ಲಿ ಗಂಗಾರತಿ ಮಾಡುವ ತಂಡವನ್ನು ಕರೆಸಿ ಗಂಗಾರತಿ ನಡೆಸಲಾಯಿತು. ಸುಮಾರು 30 ನಿಮಿಷಗಳ ಕಾಲ ವರ್ಣರಂಜಿತ ದೀಪಗಳ ಬೆಳಕಿನಲ್ಲಿ ನಡೆದ ಗಂಗಾರತಿ ಎಲ್ಲರಲ್ಲೂ ದೈವಿಕ ಭಾವನೆ ಸೃಷ್ಟಿಯಾಗುವಂತೆ ಮಾಡಿತು.ಸಾಂಪ್ರದಾಯಿಕ ಉಡುಗೆ ತೊಟ್ಟ15 ಮಂದಿಯ ತಂಡ ದೀಪಗಳನ್ನು ಹಿಡಿದು ಬೆಳಗಿದ ರೀತಿ ಮೋಹಕವಾಗಿತ್ತು. ಧೂಪವನ್ನು ಹರಡಿ ವೇದಿಕೆಯಲ್ಲಿ ಗಂಗಾರತಿ ಆಕರ್ಷಣೆಯನ್ನು ಹೆಚ್ಚಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ