13ರಿಂದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯಸ್ಮರಣೆ

KannadaprabhaNewsNetwork | Published : Mar 9, 2024 1:36 AM

ಸಾರಾಂಶ

ಮಾ.13ರಿಂದ ತೋಂಟದಾರ್ಯ ಮಠದ ಲಿಂ. ಶ್ರೀ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮರಣೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಸಿಂದಗಿ ಸಿರಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 44ನೇ ಪುಣ್ಯಸ್ಮರಣೋತ್ಸವ ಹಾಗೂ ಗದಗಿನ ತೋಂಟದಾರ್ಯ ಮಠದ ಲಿಂ. ಶ್ರೀ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ 6ನೇ ಗುರು ಸ್ಮರಣೆ ಕಾರ್ಯಕ್ರಮವು ಮಾ.13 ರಿಂದ ಮಾ.19 ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಸಿಂದಗಿಯ ಹಿರಿಯಮಠದಲ್ಲಿ ಜರುಗಲಿದೆ ಎಂದು ಶ್ರೀಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯರು ತಿಳಿಸಿದರು.

ಮಾ.13 ರಂದು ಕನ್ನೋಳ್ಳಿಯ ಹಿರೇಮಠದ ಶತಾಯುಷಿ ಲಿಂ. ಪೂಜ್ಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ವೇದಿಕೆಯಲ್ಲಿ ಸಂಜೆ 7 ಗಂಟೆಗೆ ಸ್ಮರಣೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕನ್ನೋಳ್ಳಿಯ ಹಿರೇಮಠದ ಶ್ರೀ ಸಿದ್ದಲಿಂಗ ಶೀವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಸ್ಥಳೀಯ ಭೀಮಾಶಂಕರ ಮಠದ ಶ್ರೀ ಸದ್ಗುರು ದತ್ತಯೋಗೀಶ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾ.14 ರಂದು ಆಲಮೇಲದ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಾನಿಧ್ಯದಲ್ಲಿ ಮಹಿಳಾ ವಿಚಾರ ಗೋಷ್ಠಿ ನಡೆಯಲಿದೆ. ಮಾ.15 ಕ್ಕೆ ಯಂಕಂಚಿ ಕುಂಟೋಜಿ ಹಿರೇಮಠದ ಶ್ರೀ ಅಭಿನವ ರುದ್ರಮನಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಲಿಂ ಶಾಂತವೀರ ಪಟ್ಟಾಧ್ಯಕ್ಷರ ಕುರಿತಾದ ಯುವ ಬರಹಗಾರ ರೇಣುಕಾಚಾರ್ಯ ಹಿರೇಮಠ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಸಿಂದಗಿಯ ಶ್ರೀರಕ್ಷೆ ಭಕ್ತಿ ಗೀತೆಯ ಲೋಕಾರ್ಪಣೆಗೊಳ್ಳಲಿದೆ. ಅಂತರಾಷ್ಟ್ರೀಯ ಹಿಂದೂಸ್ತಾನಿ ಗಾಯಕ ಪಂ.ಶರಣ್ ಚೌಧರಿ ಮತ್ತು ಖ್ಯಾತ ತಬಲಾವಾದಕ ಪಂ.ರಾಘವೇಂದ್ರ ಜೋಶಿ ಅವರಿಂದ ವಚನ ಗಾಯನ ನಡೆಯಲಿದೆ. ಮಾ.16 ರಂದು ಕೊಣ್ಣೂರಿನ ಹೊರಗಿನ ಕಲ್ಯಾಣ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮ ಜರುಗಲಿದೆ. ಮಾ.17 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ಸ್ಥಳೀಯ ಮನಗೂಳಿ ಆಸ್ಪತ್ರೆ ಮತ್ತು ವಿಜಯಪುರದ ತಜ್ಞ ವೈದ್ಯರ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಷಣೆ ಶಿಬಿರವು ಮನಗೂಳಿ ಆಸ್ಪತ್ರೆಯ ವೈದ್ಯ ಡಾ.ಶಾಂತವೀರ ಮನಗೂಳಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಅಂದು ಸಂಜೆ 7 ಗಂಟೆಗೆ ಅಫಜಲಪೂರದ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಸಾನಿಧ್ಯದಲ್ಲಿ ಬಿಕೆ ಗ್ರಾಮದ ಲಕ್ಷ್ಮೀಬಾಯಿ ಪಂಚಯ್ಯ ಹಿರೇಮಠ ಅವರಿಗೆ ಶಾಂತ ಸಿರಿ ಪ್ರಶಸ್ತಿ ಪ್ರದಾನವಾಗಲಿದೆ. ಮಾ.18 ರಂದು ಸಂಜೆ 7 ಗಂಟೆಗೆ ನೆಲೋಗಿಯ ಶ್ರೀ ಶಿವಾನಂದೇಶ್ವರ ವಿರಕ್ತಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಗದಗಿನ ಲಿಂ ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಗುರುಸ್ಮರಣೆ ನಡೆಯಲಿದೆ. ಮಾ.19 ರಂದು ಬೆಳಗ್ಗೆ 8 ಗಂಟೆಗೆ ಲಿಂ. ಶಾಂತವೀರ ಪಟ್ಟಾಧ್ಯಕ್ಷರ ಬೆಳ್ಳಿ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.

Share this article