46ನೇ ನೇತ್ರ ಶಿಬಿರ: 135 ಜನರಿಂದ ಕಣ್ಣಿನ ಪರೀಕ್ಷೆ

KannadaprabhaNewsNetwork |  
Published : Apr 13, 2026, 01:15 AM IST
12ಕೆಜಿಎಲ್89ಕೊಳ್ಳೇಗಾಲದಲ್ಲಿ ಅಯೋಜಿಸಲಾಗಿದ್ದ ನೇತ್ರ ನಿರಂತರ ಕಣ್ಣಿನತಪಾಸಣಾ ಶಿಬಿರದಲ್ಲಿ ಬೆಂಗಳೂರು ಎಸಿಪಿ ಹೆಚ್ ಕೆ ಮಹಾನಂದ ಪಾಲ್ಗೊಂಡರು. ರಾಜೇಶ್, ಹಷ೯, ಚೇತನ್ ಇನ್ನಿತರಿದ್ದರು. | Kannada Prabha

ಸಾರಾಂಶ

ಪಟ್ಟಣದ ವಿಶ್ವಚೇತನ ಸಮೂಹ ಸಂಸ್ಥೆಯಲ್ಲಿ ಭಾನುವಾರ ಎಚ್‌ಕೆ ಟ್ರಸ್ಟ್‌ನಿಂದ ಆಯೋಜಿಸಲಾಗಿದ್ದ 46ನೇ ನೇತ್ರ ನಿರಂತರ ಕಣ್ಣಿನ ತಪಾಸಣಾ ಶಿಬಿರದಲ್ಲಿ 135 ಮಂದಿ ತಪಾಸಣೆ ಮಾಡಿಸಿಕೊಂಡರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ವಿಶ್ವಚೇತನ ಸಮೂಹ ಸಂಸ್ಥೆಯಲ್ಲಿ ಭಾನುವಾರ ಎಚ್‌ಕೆ ಟ್ರಸ್ಟ್‌ನಿಂದ ಆಯೋಜಿಸಲಾಗಿದ್ದ 46ನೇ ನೇತ್ರ ನಿರಂತರ ಕಣ್ಣಿನ ತಪಾಸಣಾ ಶಿಬಿರದಲ್ಲಿ 135 ಮಂದಿ ತಪಾಸಣೆ ಮಾಡಿಸಿಕೊಂಡರು.

ವಿವಿಧ ನ್ಯೂನತೆ ಕಂಡು ಬಂದ ಹಿನ್ನೆಲೆ 89 ಜನರನ್ನು ಶಸ್ತ್ರ ಚಿಕಿತ್ಸೆಗಾಗಿ ಮೈಸೂರಿನ ಅರವಿಂದ ಆಸ್ಪತ್ರೆಗೆ ಕಳುಹಿಸಲಾಯಿತು.ಶಿಬಿರದಲ್ಲಿ ಪಾಲ್ಗೊಂಡ ಎಸಿಪಿ ಮಹಾನಂದ ಮಾತನಾಡಿ, ಎಚ್. ಕೃಷ್ಣಸ್ವಾಮಿ ಮೆಮೋರಿಯಲ್‌ ಚಾರಿಟೇಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳು, ರೋಟರಿ ಮಿಡ್-ಟೌನ್, ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆರವರ ಸಹಯೋಗದೊಂದಿಗೆ ಸತತ 46ನೇ ತಿಂಗಳ ನೇತ್ರ ನಿರಂತರ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಇಲ್ಲಿ ತನಕ 5130 ಮಂದಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ 3113 ಮಂದಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಸಿಬ್ಬಂದಿ, ವೈದ್ಯರು ಸೇರಿ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

ಈ ವೇಳೆ ಸಂಸ್ಥೆಯ ಸಂಯೋಜಕ ರಾಜೇಶ್, ಜಗದೀಶ್, ನಗರಸಭೆ ಮಾಜಿ ಅಧ್ಯಕ್ಷೆ ರೇಖಾ ರಮೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ಜಿ.ಹರ್ಷ, ರೋ, ಗಿರೀಶ್ ಜಡೆ ಮುಖಂಡರುಗಳಾದ ನಾಗರಾಜು ಅರವಿಂದ ಕಣ್ಣಿನ ಆಸ್ಪತ್ರೆಯ ಡಾ. ಸುಬ್ಬಲಕ್ಷ್ಮಿ, ಡಾ. ಸುಜಾತ, ಡಾ. ಮೇನಕ, ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕ ವಿಜಯ್ ಕುಮಾರ್‌, ವಿಶ್ವಚೇತನ ಸಂಸ್ಥೆಯ ವ್ಯವಸ್ಥಾಪಕ ರವಿತೇಜ, ಸಿಬ್ಬಂದಿಗಳಾದ ಚೇತನ್ ರಾಜ್, ಲಕ್ಷ್ಮಣ್ ಶೆಟ್ಟಿ, ಸಿದ್ಧಾರ್ಥ ಇನ್ನಿತರಿದ್ದರು.

---

12ಕೆಜಿಎಲ್89

ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ನೇತ್ರ ನಿರಂತರ ಕಣ್ಣಿನ ತಪಾಸಣಾ ಶಿಬಿರದಲ್ಲಿ ಬೆಂಗಳೂರು ಎಸಿಪಿ ಎಚ್‌.ಕೆ ಮಹಾನಂದ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಚಂಡಿಕಾ ಹೋಮ
ಭಾರತದ ನರ್ಸಿಂಗ್‌ಗೆ ವಿಶ್ವಾದ್ಯಂತ ಬೇಡಿಕೆ: ದಿನೇಶ್‌