ಬೆಳೆ ಹಾನಿ ವೀಕ್ಷಕಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ
ಕಾರಟಗಿ, ಕನಕಗಿರಿ, ಗಂಗಾವತಿಯಲ್ಲಿ ಇತ್ತೀಚೆಗೆ ಸುರಿದ ಮಳೆಗೆ ತಾಲೂಕಿನ ಒಟ್ಟು ೧೪೦೮.೧೫ ಹೆಕ್ಟೇರ್ ಬತ್ತದ ಬೆಳೆ ಹಾನಿಗೊಳಗಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಸಿದ್ದಾಪುರ ಹೋಬಳಿ ತುಂಗಭದ್ರಾ ನದಿ ಪಾತ್ರದ ಉಳೇನೂರು, ಉಳೇನೂರು ಕ್ಯಾಂಪ್, ಬೆನ್ನೂರು ಗ್ರಾಮದಲ್ಲಿ ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ಬತ್ತದ ಬೆಳೆಯನ್ನು ಶನಿವಾರ ಅಧಿಕಾರಿಗಳ ತಂಡದೊಂದಿಗೆ ವೀಕ್ಷಣೆ ಮಾಡಿದ ಮಾತನಾಡಿದರು. ಈಗಾಗಲೇ ಅಪಾರ ಪ್ರಮಾಣದ ಬತ್ತದ ಬೆಳೆ ಸತತ ಮಳೆಯಿಂದ ಹಾನಿಗೊಳಗಾಗಿದೆ. ಕಾರಟಗಿ ತಾಲೂಕಿನ ಪೈಕಿ ಸಿದ್ದಾಪುರ ಹೋಬಳಿಯ ಉಳೋನೂರು ಮತ್ತು ಬೆನ್ನೂರು ಗ್ರಾಮದಲ್ಲಿ ಬತ್ತದ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಶುಕ್ರವಾರ ಕಿತ್ತೂರು ಉತ್ಸವಕ್ಕೆ ತೆರಳಿದ ವೇಳೆ ಕ್ಷೇತ್ರದ ಬೆಳೆಹಾನಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ರೈತರು ಯಾವುದೇ ಕಾರಣಕ್ಕೂ ಹೆದರುವ ಅಶ್ಯಕತೆಯಿಲ್ಲ. ಕಳೆದ ಬಾರಿ ಬೆಳೆಹಾನಿ ಪರಿಹಾರ ಬಹುತೇಕ ರೈತರಿಗೆ ದೊರೆತಿಲ್ಲ ಎನ್ನುವ ಮನವಿಗಳು ರೈತರಿಂದ ತಿಳಿದು ಬಂದಿದೆ. ಅವುಗಳನ್ನು ಸಹ ಶೀಘ್ರದಲ್ಲಿ ರೈತರಿಗೆ ವಿತರಣೆ ಮಾಡುವ ಕಾರ್ಯ ನಡೆಯಲಿದೆ ಎಂದರು.ಪರಿಹಾರದ ಭರವಸೆ:
ನವೆಂಬರ್‌ನಲ್ಲಿ ಸಭೆ:
ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಈ ಕುರಿತು ಪಕ್ಕದ ಜಿಲ್ಲೆಗಳ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ರೈತರಿಗೆ ಅನುಕೂಲವಾಗಲು ಕ್ರಮವಹಿಸಲಾಗುವುದು. ಕೂಲಂಕುಶವಾಗಿ ಚರ್ಚಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರಡ್ಡಿ, ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಬೆನ್ನೂರು ಗ್ರಾಪಂ ಅಧ್ಯಕ್ಷ ಬಸಪ್ಪ, ಶರಣಪ್ಪ ಸಾಹುಕಾರ, ಶರಣೇಗೌಡ ಪೊಲೀಸ್ ಪಾಟೀಲ್, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಅಂಬಣ್ಣ ನಾಯಕ, ಕೆ. ಸಿದ್ದನಗೌಡ, ವಿರುಪಾಕ್ಷಿ ವಡ್ಡಿನ್, ಡಾ. ಕೆ.ಎನ್. ಪಾಟೀಲ್, ಬೀರಪ್ಪ, ಹನುಮಂತಪ್ಪ ಶಾಲಿಗನೂರು, ತಹಶೀಲ್ದಾರ್ ಎಂ. ಕುಮಾರಸ್ವಾಮಿ, ಕೃಷಿ ಇಲಾಖೆ ಎ.ಡಿ ಸಂತೋಷ್ ಪಟ್ಟದಕಲ್ಲು, ಕೃಷಿ ಅಧಿಕಾರಿ ಮಾರುತಿ ಸೇರಿ ಇತರರಿದ್ದರು.