ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಧೋರಣೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಬಿಜೆಪಿ ನಿಲುವುಗಳು ಜನರಿಗೆ ಅರ್ಥವಾದರೆ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ದೇಶದ ಪ್ರಥಮ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ದೇಶದ ಜನತೆಗೆ ಮನೆ ಕೊಟ್ಟರು. ಜನಪರವಾದ ನಾನಾ ಯೋಜನೆಗಳನ್ನು ಜಾರಿಗೆ ತಂದರು. ಭೂಮಿ ಹಂಚಿದರು. ಆರ್ಥಿಕ ವಿಚಾರವೇ ಬೇರೆ. ಜಾತಿ ಧರ್ಮವೇ ಬೇರೆ ವಿಚಾರ. ಆದರೆ, ಬಿಜೆಪಿಯವರು ಜಾತಿ, ಧರ್ಮ ನೋಡಿ ಎನ್ನುತ್ತಿದ್ದಾರೆ. ಇದು ಅಪಾಯಕಾರಿ ಎಂದು ಅವರು ಎಚ್ಚರಿಸಿದರು.ಇಡೀ ನಮ್ಮ ಕುಟುಂಬವೇ ಕಾಂಗ್ರೆಸ್ ಪಕ್ಷ. ನಮ್ಮ ಮನೆಗೆ ಆರ್ ಎಸ್‌ಎಸ್ ಪುಸ್ತಕ ಬರುತ್ತದೆ. ಕಾಂಗ್ರೆಸ್ ನಿಲುವುಗಳ ಬಗ್ಗೆ ಇರುವ ಒಂದೇ ಒಂದು ಪುಸ್ತಕವನ್ನು ನಾವು ಜನರಿಗೆ ಕೊಡುತ್ತಿಲ್ಲ. ಕಾಂಗ್ರೆಸ್ ಬದ್ಧತೆ, ಜನಪರವಾದ ಕೆಲಸಗಳನ್ನು ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.
ಸ್ವಾತಂತ್ರ್ಯ ಚಳವಳಿಗೆ ಗಾಂಧೀಜಿ ಪ್ರವೇಶಕ್ಕೂ ಮುನ್ನ ಹಿಂದೂ ಮಹಾಸಭಾ, ಮುಸ್ಲಿಂ ಲೀಗ್ ಸೇರಿ ಬೇರೆ ಬೇರೆ ಸಂಘಟನೆಗಳು ಬಿಡಿ ಬಿಡಿಯಾಗಿ ಹೋರಾಟ ಮಾಡುತ್ತಿದ್ದವು. ಸ್ವಾತಂತ್ರ್ಯ ಚಳವಳಿಗೆ ಎಲ್ಲಾ ಧರ್ಮ, ಜಾತಿಯ ಜನರನ್ನು ಸೇರಿಸಿದ್ದು ಗಾಂಧಿ. ಸಾರ್ವಕರ್ ಹಿಂಸೆ ಪ್ರಚೋದಿಸುತ್ತಾರೆ. ಅಹಿಂಸೆ ಆಧಾರದಿಂದಲೇ ಬೌದ್ಧ ಧರ್ಮ ಬೆಳೆಯಲಿಲ್ಲ ಎಂದು ಹೇಳಿದ್ದಾರೆ. ಆದರೆ, ಗಾಂಧೀಜಿ ಅಹಿಂಸಾ ಹೋರಾಟದಿಂದಲೇ ಭಾರತವನ್ನು ದಾಸ್ಯದಿಂದ ಬಿಡುಗಡೆ ಮಾಡಿದರು ಎಂದು ಅವರು ಹೇಳಿದರು.
ಅಂತರ್ಜಾತಿ ವಿವಾಹಗಳಾಗದೇ ಜಾತಿ ವ್ಯವಸ್ಥೆ ನಿರ್ಮೂಲನೆಯಾಗುವುದಿಲ್ಲ ಎಂದು ಗಾಂಧೀಜಿ ನಂಬಿದ್ದರು. ಆಶ್ರಮದಲ್ಲಿ ಅಂತರ್ಜಾತಿ ವಿವಾಹಕ್ಕೆ ಮಾತ್ರ ಅವಕಾಶ ನೀಡಿದರು. ಅಲ್ಲದೇ ಅಂತರ್ಜಾತಿ ವಿವಾಹಗಳಲ್ಲಿ ಮಾತ್ರ ಭಾಗವಹಿಸುವುದಾಗಿ ಘೋಷಿಸಿದ್ದರು ಎಂದರು.
ಇದೇ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಕುಮಾರ್ ಅವರು ಐದು ಮಂದಿ ಹಿರಿಯ ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ ಸಂಸ್ಥಾಪನ ದಿನದ ಅಂಗವಾಗಿ ಗೌರವಿಸಿದರು.
----
ದೇಶದಲ್ಲಿ ಓದಿದವರೇ ಹೆಚ್ಚು ಅಪಾಯಕಾರಿಯಾಗಿದ್ದಾರೆ. 3- 4 ಪದವಿ ಪಡೆದವರೂ ಮಾನವೀಯತೆ ವಿಷಯದಲ್ಲಿ ಏನೇನು ಕಲಿತಿಲ್ಲ. ಬುದ್ಧಿವಂತರೆನಿಸಿಕೊಂಡವರು ಕೂಲಿ ಕೆಲಸ ಮಾಡುವವರಿಂದ ದೇಶ ಹಾಳಾಯಿತೆಂದು ಟೀಕೆ ಮಾಡುತ್ತಾರೆ. ದೇಶದಲ್ಲಿ ಇವತ್ತಿಗೂ 40 ಕೋಟಿ ಬಡವರಿದ್ದಾರೆ. ಎಲ್ಲರಿಗೂ ಶಿಕ್ಷಣ ದೊರೆತಿದೆ. ಉದ್ಯೋಗ ಕೊಡಲು ಸಾಧ್ಯವಾಗಿಲ್ಲ. ಇದು ದೇಶದ ವಿವಿಧ ಸಮಸ್ಯೆಗಳಿಗೆ ಕಾರಣವಾಗಿದೆ.