ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಹರಪನಹಳ್ಳಿ ಕಿರಿಯ ಹಾಗೂ ಹಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದಲಾಗಿದ್ದ ರಾಷ್ಟೀಯ ಲೋಕ ಆದಾಲತ್‌ನಲ್ಲಿ ಒಟ್ಟು 1749 ಪ್ರಕರಣ ಕೈಗೆತ್ತಿಕೊಂಡು 1444 ಪ್ರಕರಣಗಳನ್ನು ನ್ಯಾಯಾಧೀಶರಾದ ಉಷಾರಾಣಿ ಆರ್. ಹಾಗೂ ಮನುಶರ್ಮ ಎಸ್.ಪಿ. ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.ಪಟ್ಟಣದ ಉಭಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಅಪರಾಧಿಕ ಪ್ರಕರಣ, ಮೋಟಾರು ವಾಹನ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಒಳಗೊಂಡಂತೆ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಉಷಾರಾಣಿ ಆರ್. ನ್ಯಾಯಾಲಯದಲ್ಲಿ ಒಟ್ಟು 845 ಪ್ರಕರಣಗಳ ಪೈಕಿ 679 ಪ್ರಕಣಗಳನ್ನು ಇತ್ಯರ್ಥ ಪಡಿಸಿದರು.
ವ್ಯಾಜ್ಯ ಪೂರ್ವದಲ್ಲಿ ಒಟ್ಟು 799 ಪ್ರಕರಣಗಳ ಪೈಕಿ 391 ಪ್ರಕರಣಗಳು ಇತ್ಯರ್ಥಗೊಂಡಿವೆ.ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮನುಶರ್ಮ ಎಸ್.ಪಿ. ನ್ಯಾಯಾಲಯದಲ್ಲಿ ಒಟ್ಟು 904 ಪ್ರಕರಣಗಳ ಪೈಕಿ 765 ಪ್ರಕಣಗಳನ್ನು ಇತ್ಯರ್ಥಪಡಿಸಿದರು.
ವ್ಯಾಜ್ಯಪೂರ್ವದ ಒಟ್ಟು 462 ಪ್ರಕರಣಗಳ ಪೈಕಿ 329 ಪ್ರಕರಣಗಳು ಇತ್ಯರ್ಥಗೊಂಡಿವೆ. ಉಭಯ ನ್ಯಾಯಾಲಯದಲ್ಲಿ ಒಟ್ಟು 1444 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿ ಕಕ್ಷಿದಾರರನ್ನು ಮನವೊಲಿಸುವಲ್ಲಿ ಉಭಯ ನ್ಯಾಯಾಧೀಶರು ಮತ್ತು ವಕೀಲರು ಯಶಸ್ವಿಯಾಗಿದ್ದಾರೆ.ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್, ಉಪಾಧ್ಯಕ್ಷ ಎಸ್.ಮಂಜುನಾಥ ಬಾಗಳಿ, ಕಾರ್ಯದರ್ಶಿ ಎಂ.ಎನ್. ಮಲ್ಲಪ್ಪ, ಖಜಾಂಚಿ ನಿಂಗನಗೌಡ, ಹಿರಿಯ ವಕೀಲರಾದ ಬಿ.ರೇವನಗೌಡ, ರಾಮನಗೌಡ ಪಾಟೀಲ್, ಕೆ.ಬಸವರಾಜ, ವಿ.ಜಿ. ಪ್ರಕಾಶಗೌಡ, ಹನುಮಂತಪ್ಪ, ಮೃತ್ಯುಂಜಯ, ಹೂಲೇಪ್ಪ, ಸರ್ಕಾರಿ ಅಭಿಯೋಜಕರಾದ ಮಿನಾಕ್ಷಿ ಎನ್., ನಿರ್ಮಲ, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಕೀಲರು, ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೋಟ್ರೇಶ್, ಬಸವರಾಜ್ ಹಾಗೂ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಇತರರು ಇದ್ದರು.