ನಾಪೋಕ್ಲು ; ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ 158ನೇ ಹುಟ್ಟು ಹಬ್ಬವನ್ನು ಪೊಂಬೊಳ್ಚ ಕೂಟದಿಂದ ಆಚರಿಸಲಾಯಿತು.ಕಿರುಂದಾಂಡು ಗ್ರಾಮದ ಕವಿ ಜನಿಸಿದ ಮನೆಯಲ್ಲಿ ಅಪ್ಪಚ್ಚ ಕವಿ ಬಗ್ಗೆ ಪೊಂಬೊಳ್ಚ ಕೂಟದ ಸದಸ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕವನ ವಾಚನ ಮಾಡುವ ಮೂಲಕ ಅಪ್ಪನೆರವಂಡ ಕುಟುಂಬಸ್ಥರೊಂದಿಗೆ ಆಚರಿಸಲಾಯಿತು. ಪೊಂಬೊಳ್ಚ ಕೂಟದ ಅಧ್ಯಕ್ಷ ಚಂಗೇಟಿರ ಸೋಮಣ್ಣ, ಸ್ಥಾಪಕ ಕೋಟೆರ ಪೂಣಚ್ಚ, ಉಪಾಧ್ಯಕ್ಷೆ ಮುಡ್ಯೋಳಂಡ ಧರಣಿ ಜಗದೀಶ್, ಕಾರ್ಯದರ್ಶಿ ಜಮ್ಮಡ ಮೋನ ಭೀಮಯ್ಯ, ಖಜಾಂಚಿ ಶಿವಚಾಳಿಯಂಡ ರೋಹಿಣಿ ಬೋಪಣ್ಣ, ಸಹಕಾರ್ಯದರ್ಶಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ ಸೇರಿದಂತೆ ಪೊಂಬೊಳ್ಚ ಕೂಟದ ಸದಸ್ಯರು ಮತ್ತು ಅಪ್ಪನೆರವಂಡ ಕುಟುಂಬಸ್ಥರು ಹಾಜರಿದ್ದರು. ಕೂಟದ ಕವಿಗಳು ತಮ್ಮ ಕವನ ವಾಚಿಸಿದರು. ಪೊಂಬೊಳ್ಚ ಕೂಟದ ವತಿಯಿಂದ ತೂಕ್ ಬೊಳಕನ್ನು ಅಪ್ಪನೆರವಂಡ ಕುಟುಂಬಕ್ಕೆ ಕೊಡುಗೆಯಾಗಿ ನೀಡಲಾಯಿತು