ಡಿ. ಬನುಮಯ್ಯ ಯುವ ಬ್ರಿಗೇಡ್ ವತಿಯಿಂದ ಬನುಮಯ್ಯ ದಿನಾಚರಣೆ

KannadaprabhaNewsNetwork |  
Published : Jul 06, 2026, 01:15 AM IST
3 | Kannada Prabha

ಸಾರಾಂಶ

ವಿಶೇಷವಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಬಿ. ಮೇಘನಾ ಎಂಬ ವಿದ್ಯಾರ್ಥಿನಿಯನ್ನು ಶಾಸಕರು ಸನ್ಮಾನಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ಧರ್ಮ ಪ್ರಕಾಶ್ ರಾವ್ ಬಹದ್ದೂರ್ ಡಿ. ಬನುಮಯ್ಯ ಅವರ 166ನೇ ಜಯಂತಿ ಅಂಗವಾಗಿ ಭಾನುವಾರ ಬನುಮಯ್ಯ ಕಾಲೇಜಿನ ಆವರಣದಲ್ಲಿನ ಬನುಮಯ್ಯನವರ ಪುತ್ಥಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ಅವರು ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಬಿ. ಮೇಘನಾ ಎಂಬ ವಿದ್ಯಾರ್ಥಿನಿಯನ್ನು ಶಾಸಕರು ಸನ್ಮಾನಿಸಿದರು ಹಾಗೂ ಎಂ. ತೇಜಸ್, ಆರ್‌. ಧೃತಿ, ಎಲ್. ಲತಾ, ಬಿ. ರಕ್ಷಿತಾ, ಬಿ. ಮೇಘನಾ, ಅವರನ್ನೂ ಸನ್ಮಾನಿಸಲಾಯಿತು.

ನಂತರ ನಡೆದ ಉಚಿತ ಆರೋಗ್ಯ ತಪಾಸಣೆಯಲ್ಲಿ ಶಾಸಕರು ತಮ್ಮ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಲು ಮನವಿ ಮಾಡಿದರು.

ಈ ವೇಳೆ ಬನುಮಯ್ಯ ಸಂಸ್ಥೆ ಅಧ್ಯಕ್ಷ ಡಾ.ವಿ.ಬಿ. ಜಯದೇವ್. ಬಿಜೆಪಿ ಮುಖಂಡರಾದ ಶುಶ್ರುತ್ ಗೌಡ. ಎನ್. ಪ್ರದೀಪ್ ಕುಮಾರ್. ವಿ. ರವಿ. ದೀಪಕ್. ದಿನೇಶ್. ಚಿದಾನಂದ ಹಾಗೂ ಮುಖಂಡರಾದ ಗೋಕುಲ್ ಗೋವರ್ಧನ್. ರವಿಶಂಕರ್. ಎಂ. ಮಂಜು, ಎಸ್.ಎನ್. ರಾಜೇಶ್. ಶಿವಣ್ಣ, ಶಶಿಧರ್, ದಾಮೋದರ್, ರಾಕೇಶ್‌ಭಟ್‌, ಪ್ರತೀಕ್, ವಿನೋದ್ ರಾಜೇ ಅರಸ್, ಬಾಬು ರಂಗನಾಥ್, ನಿಶಾಂತ್ ಪಾಲ್, ಮಹಿಳೆಯರಾದ ಕೋಮಲಾ, ದೀಪಾ, ಶ್ರುತಿ, ಲಕ್ಷ್ಮೀ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಹಕ ಸ್ನೇಹಿ ಸೇವೆಯೇ ಎಸ್‌ಬಿಐ ಯಶಸ್ಸಿನ ಗುಟ್ಟು
ಶೂ ವಿತರಣೆಯ ಹೊಣೆ ಶಿಕ್ಷಕರಿಗೆ ಬೇಡ