ಮೂರುವರೆ ವರ್ಷದಲ್ಲಿ ಕಾಫಿನಾಡಿನಲ್ಲಿ 175 ರೈತರ ಆತ್ಮಹತ್ಯೆ

KannadaprabhaNewsNetwork |  
Published : Oct 13, 2026, 01:15 AM IST
ಫೋಟೋ- ನಮೋಶ | Kannada Prabha

ಸಾರಾಂಶ

ಚಿಕ್ಕಮಗಳೂರುಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿ ಪಡೆದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರ ಬದುಕು ಮಾತ್ರ ಕಣ್ಣೀರಿನ ಕಥೆಯಾಗಿದೆ. ಬರ, ಮಳೆ ಕೊರತೆ, ಬೆಳೆ ನಷ್ಟ ಹಾಗೂ ಸಾಲದ ಹೊರೆ ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದ್ದು 2023ರಿಂದ ಈವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 175 ರೈತರು ಆತ್ಮಹತ್ಯೆ ಶರಣಾಗಿದ್ದಾರೆ.

- ಬರ, ಮಳೆ ಕೊರತೆ, ಬೆಳೆ ನಷ್ಟ ಹಾಗೂ ಸಾಲದ ಹೊರೆಯೇ ಕಾರಣ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿ ಪಡೆದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರ ಬದುಕು ಮಾತ್ರ ಕಣ್ಣೀರಿನ ಕಥೆಯಾಗಿದೆ. ಬರ, ಮಳೆ ಕೊರತೆ, ಬೆಳೆ ನಷ್ಟ ಹಾಗೂ ಸಾಲದ ಹೊರೆ ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದ್ದು 2023ರಿಂದ ಈವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 175 ರೈತರು ಆತ್ಮಹತ್ಯೆ ಶರಣಾಗಿದ್ದಾರೆ.

ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ರೈತರ ಕುಟುಂಬಗಳು ಒಂದೆಡೆ ಆಧಾರಸ್ತಂಭವನ್ನು ಕಳೆದುಕೊಂಡ ನೋವಿ ನಲ್ಲಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಾಯುವ ಸ್ಥಿತಿಯಿಂದ ನಲುಗಿವೆ.

ಜಿಲ್ಲೆಯ ಕಡೂರು ತಾಲೂಕಿನಲ್ಲಿ ಕಳೆದ ಅ. 6ರಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕೃಷಿ ಸಂಕಷ್ಟದ ಗಂಭೀರತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಬರ ಹಾಗೂ ಮಳೆ ಕೊರತೆಯಿಂದ ಬೆಳೆ ಕೈಕೊಟ್ಟ ಪರಿಣಾಮ ಸಾಲದ ಹೊರೆ ಹೆಚ್ಚಾಗಿ ಅದನ್ನು ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

47 ರೈತ ಕುಟುಂಬಗಳಿಗೆ ಪರಿಹಾರ ಮರೀಚಿಕೆ!

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 175 ರೈತರ ಪೈಕಿ 122 ಕುಟುಂಬಗಳಿಗೆ ಮಾತ್ರ ಪರಿಹಾರ ದೊರೆತಿದೆ. ಉಳಿದ 47 ಕುಟುಂಬಗಳು ಸರ್ಕಾರದ ನೆರವಿನಿಂದ ವಂಚಿತವಾಗಿವೆ.

ಸಾಲಬಾಧೆಯಿಂದ ರೈತರು ಮೃತಪಟ್ಟಿರುವುದಕ್ಕೆ ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಈ ಕುಟುಂಬಗಳಿಗೆ ಪರಿಹಾರ ನಿರಾಕರಿಸಲಾಗಿದೆ. ಕುಟುಂಬದ ದುಡಿಮೆ ಆಧಾರವಾಗಿದ್ದ ರೈತನನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪರಿಹಾರವೂ ದೊರೆಯದಿರುವುದು ಆತಂಕಕಾರಿ ಬೆಳವಣಿಗೆ. ರೈತರ ಸಾವಿನ ನಂತರ ಕುಟುಂಬಗಳಿಗೆ ಆಸರೆಯಾಗಬೇಕಾದ ಪರಿಹಾರ ವ್ಯವಸ್ಥೆಯಲ್ಲೇ ದಾಖಲೆಗಳ ಕೊರತೆ ಅಡ್ಡಿಯಾಗಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಆತಂಕ

ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 80 ರೈತರು, 2024-25ನೇ ಸಾಲಿನಲ್ಲಿ 37, 2025-26ನೇ ಸಾಲಿನಲ್ಲಿ 48 ಹಾಗೂ ಪ್ರಸಕ್ತ 2026-27ನೇ ಸಾಲಿನ ಏಪ್ರಿಲ್‌ನಿಂದ ಈವರೆಗೆ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2025-26ನೇ ಸಾಲಿನಲ್ಲಿ 4 ಹಾಗೂ ಪ್ರಸಕ್ತ ಸಾಲಿನಲ್ಲಿ ಆರು ರೈತರ ಕುಟುಂಬಗಳಿಗೆ ಮಾತ್ರ ಪರಿಹಾರ ಮಂಜೂರಾಗಿದ್ದು, ಹಣಬಿಡುಗಡೆಯಷ್ಟೇ ಬಾಕಿ ಇದೆ.

---ಬಾಕ್ಸ್‌---ಚಿಕ್ಕಮಗಳೂರು ಮತ್ತು ಕಡೂರಲ್ಲಿ ಹೆಚ್ಚು ಆತ್ಮಹತ್ಯೆ

ತೀವ್ರ ಬರ ಪೀಡಿತ ತಾಲೂಕು ಕಡೂರು ಹಾಗೂ ಕಡೂರಿಕಿಗೆ ಹೊಂದಿಕೊಂಡಿರುವ ಚಿಕ್ಕಮಗಳೂರು ತಾಲೂಕಿನಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. 2023-24 ರಿಂದ ಈವರೆಗೆ ಚಿಕ್ಕಮಗಳೂರು ತಾಲೂಕಿನಲ್ಲಿ 44, ಕಡೂರು ತಾಲೂಕಿನಲ್ಲಿ 58 ಮಂದಿ ಆತ್ಮಹತ್ಯೆ ಹಾದಿ ಹಿಡಿದಿದ್ದರೆ. ಉಳಿದ ಆರು ತಾಲೂಕಿನಲ್ಲಿ ಒಟ್ಟು 73 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

-- ಬಾಕ್ಸ್‌ --

ರೈತರ ಆತ್ಮಹತ್ಯೆ ವಿವರ

ವರ್ಷಆತ್ಮಹತ್ಯೆ ಸಂಖ್ಯೆಪರಿಹಾರತಿರಸ್ಕಾರಪರಿಹಾರ ಪಾವತಿ ಬಾಕಿ

2023-248064160

2024-25372890

2025-264828204

2026-2710226

ಒಟ್ಟು1751224710---ಕೋಟ್‌---ರಾಜ್ಯ ಸರ್ಕಾರ ಸಾಕಷ್ಟು ಯೋಜನೆ, ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು ನೀಡುತ್ತಿದೆ. ರೈತನ ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆ ಹಾಗೂ ಸಮಾಜ ಅವನಿಗೆ ಬೆಂಬಲ ನೀಡಲಿದೆ. ಹೀಗಾಗಿ, ರೈತರು, ಆತ್ಮಸ್ಥೈರ್ಯ ಕಳೆದು ಕೊಳ್ಳಬಾರದು. ಇನ್ನೂ ಪರಿಹಾರ ತಿರಸ್ಕೃತ ಪ್ರಕರಣಗಳನ್ನು ಜಿಲ್ಲಾ ಮಟ್ಟದ ಎಸಿ ಅಧ್ಯಕ್ಷತೆ ಸಮಿತಿಯಲ್ಲಿ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗಿರುತ್ತದೆ.

ಡಾ.ಎಂ.ತಿರುಮಲೇಶ್‌, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಚಿಕ್ಕಮಗಳೂರು

--- ಕೋಟ್‌---

ಬರ ಪರಿಸ್ಥಿತಿರುವುದರಿಂದ ಬ್ಯಾಂಕ್‌ ಸೇರಿದಂತೆ ಯಾವುದೇ ಸಂಸ್ಥೆಗಳು ರೈತರಿಗೆ ಸಾಲ ಮತ್ತು ಬಡ್ಡಿ ಮರು ಪಾವತಿಗೆ ಒತ್ತಡ ಹಾಕಬಾರದು. ರೈತರು ಸಹ ಧೃತಿಗೆಡಬಾರದು. ಆತ್ಮಹತ್ಯೆಯಿಂದ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದೆ. ಆತ್ಮಹತ್ಯೆ ಪರಿಹಾರವಲ್ಲ. ಇನ್ನೂ ಕಡೂರು ತಾಲೂಕಿಗೆ ಹಿಂದೆ ಯಾವುದೇ ನೀರಾವರಿ ಯೋಜನೆ ಕೈಗೊಳ್ಳದಿರುವುದು ರೈತರ ಇಂದಿನ ಸಂಕಷ್ಟಕ್ಕೆ ಕಾರಣ. ಇದೀಗ ಕಾಂಗ್ರೆಸ್‌ ಸರ್ಕಾರ ಕಡೂರಿಗೆ ಹೆಚ್ಚಿನ ಪ್ರಮಾಣದ ಅನುದಾನ ನೀಡಿ, ಭದ್ರಾ ಮೇಲ್ಡಂಡೆ ಯೋಜನೆ, ಕೆರೆಗಳನ್ನು ತುಂಬಿಸುವ ಯೋಜನೆ ಕೈಗೊಂಡಿದೆ. ಎಲ್ಲವೂ ಪೂರ್ಣಗೊಂಡರೆ ಒಂದಿಷ್ಟು ಆಶಾದಾಯಕ ವಾತಾವರಣ ನಿರ್ಮಾಣ ಆಗಲಿದೆ.

- ಕೆ.ಎಸ್‌.ಆನಂದ್‌, ಶಾಸಕ, ಕಡೂರು ಫೋಟೋ

(ರೈತ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಾಂದರ್ಭಿಕ ಫೋಟೋ ಬಳಸಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಬಳ್ಳಾಪುರ: ಐತಿಹಾಸಿಕ ವೀರಗಲ್ಲುಗಳ ಸಂರಕ್ಷಣೆ
ಮಕ್ಕಳಲ್ಲಿ ದೈವತ್ವ ಕಾಣುವುದು ಜೀವನದ ಭಾಗ್ಯ