-ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ
ಕನ್ನಡಪ್ರಭ ವಾರ್ತೆ, ಹುಮನಾಬಾದ್ಹುಮನಾಬಾದ ವಿಭಾಗದ 7 ಪೊಲೀಸ್ ಠಾಣೆಯ 18 ಅಪರಾಧಗಳನ್ನು ಪತ್ತೆ ಹಚ್ಚಿ 24 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಹುಮನಾಬಾದ್ ಪೊಲೀಸ್ ಉಪಾಧೀಕ್ಷಕ ಜೆಎಸ್ ನ್ಯಾಮೇಗೌಡ ಅವರ ಮಾರ್ಗದರ್ಶನದಲ್ಲಿ ಠಾಣೆಯ ವ್ಯಾಪ್ತಿಯ 17 ಜಾನುವಾರು ಕಳ್ಳತನ, ಒಂದು ದರೋಡೆ ಅಪರಾಧದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಿದ್ದಾರೆ.ಕಳೆದ ಒಂದು ವರ್ಷದಿಂದ ಹೊಲಗಳಲ್ಲಿ ಕಟ್ಟಿರುವ ಜಾನುವಾರಗಳನ್ನು ಕಳುವು ಮಾಡಿ ಅವುಗಳನ್ನು ಕಸಾಯಿ ಖಾನೆಗೆ ಮಾರುತ್ತಿದ್ದ ಹರ್ಯಾಣಾ, ರಾಜಸ್ಥಾನ, ಕಲಬುರಗಿ ಜಿಲ್ಲೆಯ ಮೂಲದ ಆರೋಪಿಗಳ ಪ್ರಕರಣಗಳನ್ನು ಭೇದಿಸಿದ್ದಾರೆ.
ಇದಲ್ಲದೇ ಸೆ. 26ರಂದು ಬಸವಕಲ್ಯಾಣದ ನಜಿಮೋದ್ದಿನ್ ರಬ್ಬಾನಿ ನಾಯಕೊಡೆ ಅವರಿಗೆ ಸೇರಿದ ಮದಿನಾ ಜುವೆಲರ್ಸ್ ಮಾಲೀಕನ ದ್ವೀಚಕ್ರ ವಾಹನ ಅಡ್ಡಗಟ್ಟಿ 2.82ಲಕ್ಷ ರು. ಮೊತ್ತದ 3.6 ತೊಲೆಯ ಬಂಗಾರದ ಲಾಂಗ್ ಹಾರ, 17.8 ಸಾವಿರ ಬೆಲೆಯ 17 ತೊಲೆಯ ಬೆಳ್ಳಿಯ ಚೈನ್, 2.8ಲಕ್ಷ ರು. ನಗದು ಸೇರಿ ಒಟ್ಟು 5.86 ಲಕ್ಷ ರು. ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದೇವೆ ಎಂದು ಮೇಘಣ್ಣನವರ್ ಮಾಹಿತಿ ನೀಡಿದರು.ಹುಮನಾಬಾದ್ ಪೊಲೀಸ್ ಉಪಾಧೀಕ್ಷ ಜೆಎಸ್ ನ್ಯಾಮೇಗೌಡ ಮಾತನಾಡಿ, ರೈತರು ತಮ್ಮ ಹೊಲದಲ್ಲಿ ರಾತ್ರಿ ಸಂದರ್ಭದಲ್ಲಿ ಇರದೆ ಇದ್ದಲ್ಲಿ ತಮ್ಮ ಜಮೀನಿನಲ್ಲಿ ಜಾನುವಾರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದರಲ್ಲದೆ ಜೊತೆಗೆ ನ್ಯಾಯಾಲಯ ಸೂಚನೆಯ ಮೇರೆಗೆ ಕಳ್ಳತನದಿಂದ ಮಾರಾಟ ಮಾಡಿರುವ ಕರುಗಳ ಮೌಲ್ಯದ ನಗದನ್ನು ಪೊಲೀಸ್ ಠಾಣೆಯಲ್ಲಿ ರೈತರಿಗೆ ನೀಡಲಾಯಿತು.
ಬೀದರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ ಮಾರ್ಗದರ್ಶನ, ಹುಮನಾಬಾದ್ ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್, ಕೃಷ್ಣಕುಮಾರ ಪಾಟೀಲ್, ಅಲಿಸಾಬ್ ನೇತೃತ್ವದಲ್ಲಿ ಪಿಎಸ್‌ಐ ವಿಜಯಕುಮಾರ ನಾಯಕ, ಸುರೇಶಕುಮಾರ, ಬಾಷುಮಿಯಾ, ಅಂಬ್ರೇಶ, ನಾಗೇಂದ್ರ, ಮಹೇಂದ್ರಕುಮಾರ, ಸಿಬ್ಬಂದಿ ಶಿವಶರಣ, ಬಸವರೆಡ್ಡಿ, ಚನ್ನಬಸಪ್ಪ, ರಮೇಶ, ಸೂರ್ಯಕಾಂತ, ಗಂಗಾಧರ, ಉಮೇಶ, ಪ್ರತಾಪರೆಡ್ಡಿ, ನಾಮಾನಂದ, ಜನರಾಜ, ವಿಜಯಕುಮಾರ, ಫ್ರಾನ್ಸಿಸ್, ಸೀಮನ್, ವಿನೋದ, ಗೌಸ್, ನವೀನ್, ಗಂಗಾಧರ, ಇರ್ಫಾನ್, ಬಾಲಾಜಿ ಅವರುಗಳ ತಂಡ ರಚಿಸಿ ಜಂಟಿ ಕಾರ್ಯಚರಣೆ ನಡೆಸಿ 5 ಜನ ಆರೋಪಿತರು ಹಾಗೂ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ಚಾಕು ಹಾಗೂ ಕಾರು ಜಪ್ತಿಪಡಿಸಿಕೊಂಡಿದ್ದಾರೆ ಎಂದು ಮೇಘಣ್ಣನವರ್ ತಿಳಿಸಿದರು.----
ಪೋಟೋ:ಫೈಲ್ 3ಬಿಡಿ2