- 5 ಸಾವಿರ ಜನ ಸೇರುವ ನಿರೀಕ್ಷೆ: ಕುರುಬ ಸಮಾಜ ಅಧ್ಯಕ್ಷ ಶಿವಪ್ಪ- - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ದಿನ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ ಸಹೋದರ ಸಮಾಜಗಳ ಬಾಂಧವರು ಆಗಮಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಾಲಯದಲ್ಲಿ ಶ್ರೀ ಕನಕ ದಾಸರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಅಲಂಕೃತ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ಕಾರ್ಯಕ್ರಮ ನಡೆಯುವ ಸ್ಥಳವಾದ ತಾಲೂಕು ಕಚೇರಿವರೆಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದರು.
ತಾಲೂಕಿನಲ್ಲಿ 25ರಿಂದ 30 ಸಾವಿರದಷ್ಟು ಕುರುಬ ಜನಾಂಗದವರಿದ್ದಾರೆ. ಆ ದಿನ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಸಹೋದರ ಸಮಾಜ ಬಾಂಧವರು ಸೇರಿದಂತೆ ಸುಮಾರು 4ರಿಂದ 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸರ್ಕಾರದ ನಿಯಮಾವಳಿ ಪ್ರಕಾರ ಅತಿಥಿಗಳನ್ನು ಆಹ್ವಾನಿಸಲಾಗುವುದು ಎಂದು ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿವರಿಸಿದರು.ಮುಖಂಡರಾದ ಕರಡೇರ್ ರಾಜಣ್ಣ, ಎ.ಸಿ.ಚಂದ್ರು, ಸಂತೆಬೆನ್ನೂರು ಬಸವರಾಜ್, ನಗರ ಘಟಕದ ಅಧ್ಯಕ್ಷ ಕೆ.ಆರ್.ಗೋಪಿ, ಶಿವರುದ್ರಪ್ಪ, ಪುರಸಭಾ ಸದಸ್ಯ ಪಟ್ಲಿನಾಗರಾಜ್, ಶಿವಶಂಕರ್, ಧನಂಜಯ ಹಾಜರಿದ್ದರು.
- - - -14ಕೆಸಿಎನ್‌ಜಿ2: ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕುರುಬ ಸಮಾಜ ಅಧ್ಯಕ್ಷ ಡಿ.ಶಿವಪ್ಪ ಮಾತನಾಡಿದರು.