ಸರ್ಕಾರಿ ನೌಕರರ ಸಂಘಕ್ಕೆ ೧೯ ನಿರ್ದೇಶಕರು ಅವಿರೋಧ ಆಯ್ಕೆ

KannadaprabhaNewsNetwork |  
Published : Oct 25, 2024, 01:01 AM ISTUpdated : Oct 25, 2024, 01:02 AM IST
ಸರ್ಕಾರಿ ನೌಕರರ ಸಂಘಕ್ಕೆ ೧೯ ನಿರ್ದೇಶಕರು ಅವಿರೋಧ ಆಯ್ಕೆ | Kannada Prabha

ಸಾರಾಂಶ

ಯಳಂದೂರು ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನು ಪಟ್ಟಣದ ಕಚೇರಿಯ ಆವರಣದಲ್ಲಿ ಬುಧವಾರ ಅಭಿನಂದಿಸಲಾಯಿತು. ಅಧ್ಯಕ್ಷ ವೈ.ಎಂ. ಮಂಜುನಾಥ್, ಅಮ್ಮನಪುರ ಮಹೇಶ್ ಸೇರಿದಂತೆ ಹಲವರು ಇದ್ದರು.

ಕನ್ನಡಪ್ರಭ ವಾರ್ತೆ ಯಳಂದೂರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ವಿವಿಧ ಇಲಾಖೆಗಳಿಂದ ೧೯ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಇವರಿಗೆ ಬುಧವಾರ ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯ ಆವರಣದಲ್ಲಿ ಸನ್ಮಾನ ಮಾಡಲಾಯಿತು.

ಒಟ್ಟು ೨೯ ಮಂದಿ ನಿರ್ದೇಶಕರು ತಾಲೂಕಿನಲ್ಲಿದ್ದು ಇದರಲ್ಲಿ ೧೯ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೃಷಿ ಇಲಾಖೆಯಿಂದ ಎ.ವೆಂಕಟರಂಗಶೆಟ್ಟಿ, ಪಶುಪಾಲನಾ ಇಲಾಖೆಯಿಂದ ಬಸವರಾಜು, ತಾಲೂಕು ಖಜಾನೆಯಿಂದ ನವೀನ್, ಸರ್ವೇ ಇಲಾಖೆಯಿಂದ ಕೀರ್ತಿ ಪ್ರಸಾದ್, ರೇಷ್ಮೆ ಇಲಾಖೆಯಿಂದ ಎಸ್. ಪ್ರದೀಪ್‌ಕುಮಾರ್, ಬಿಸಿಎಂ ಇಲಾಖೆಯಿಂದ ಮಾನಸ, ಸಮಾಜ ಕಲ್ಯಾಣ ಇಲಾಖೆಯಿಂದ ಬಸವರಾಜೇಂದ್ರ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ವತಿಯಿಂದ ಮಹೇಶ್, ಪದವಿಪೂರ್ವ ಕಾಲೇಜಿನಿಂದ ಮಹೇಶ್, ಆರೋಗ್ಯ ಇಲಾಖೆಯಿಂದ ಶಶಿಕಲಾ, ಸಂಪಿಗಯ್ಯ, ಎಚ್.ಆರ್. ಭಾರತಿ, ಜಗದೀಶ್, ನ್ಯಾಯಾಂಗ ಇಲಾಖೆಯಿಂದ ನದೀಂಷರೀಫ್, ಲೋಕೋಪಯೋಗಿ ಇಲಾಖೆಯಿಂದ ಧರ್ಮೇಂದ್ರ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಆರೋಕ್ಯರಾಜ್, ತಾಪಂನಿಂದ ವೇಲು, ತೋಟಗಾರಿಕಾ ಇಲಾಖೆಯಿಂದ ಸುರೇಶ್, ಸಿಡಿಪಿಒ ಇಲಾಖೆಯ ವತಿಯಿಂದ ಸರಸ್ವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ವೈ.ಎಂ. ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ೨೯ ನಿರ್ದೇಶಕ ಸ್ಥಾನಗಳಿವೆ. ಇದರಲ್ಲಿ ಈಗಾಗಲೇ ೧೯ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ೧೦ ನಿರ್ದೇಶಕರ ಸ್ಥಾನಕ್ಕೆ ಅ.೨೮ ರಂದು ಚುನಾವಣೆ ನಡೆಯಲಿದ್ದು ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಗೆ ೪ ಮಂದಿ, ಪ್ರೌಢಶಾಲಾ ವಿಭಾಗಕ್ಕೆ ಒಬ್ಬರು, ಪಿಡಿಒಗಳಿಂದ ಒಂದು ಸ್ಥಾನಕ್ಕೆ ಕಂದಾಯ ಇಲಾಖೆಯ ಮೂರು ಸ್ಥಾನಗಳಿಗೆ ಹಾಗೂ ಅರಣ್ಯ ಇಲಾಖೆಯ ಒಂದು ನಿರ್ದೆಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಅಮ್ಮನಪುರಮಹೇಶ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ. ಸೋಮಣ್ಣ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ