ಮುಂಡರಗಿ ತಾಲೂಕಿನಲ್ಲಿ 1970 ವಿದ್ಯಾರ್ಥಿಗಳು ಹಾಜರ

KannadaprabhaNewsNetwork |  
Published : Mar 22, 2025, 02:07 AM IST
ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪೌಢಶಾಲೆಯಲ್ಲಿ ಶುಕ್ರವಾರ ಎಸ್.ಎಸ್.ಎಲ್.ಸಿ. ಪರೀಕ್ಷಗೆ ಬಂದಿದ್ದ ಮಕ್ಕಳಿಗೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಪಡ್ನೇಶಿ ಮಕ್ಕಳಿಗೆ ಹೂ ನೀಡಿ ಪರೀಕ್ಷಾ ದೇಂದ್ರಕ್ಕೆ ಸ್ವಾಗತಿಸಿದರು. | Kannada Prabha

ಸಾರಾಂಶ

ತಾಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಶಾಂತಿಯುತವಾಗಿ ಪ್ರಾರಂಭವಾಗಿವೆ. ಮೊದಲ ದಿನದ ಕನ್ನಡ ಭಾಷಾ ಪರೀಕ್ಷೆಗೆ 2022 ಮಕ್ಕಳ ಲ್ಲಿ 52 ಮಕ್ಕಳು ಗೈರು ಹಾಜರಾಗಿದ್ದು, 1970 ಮಕ್ಕಳು ಬರೆದಿದ್ದಾರೆ.

ಮುಂಡರಗಿ: ತಾಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಶಾಂತಿಯುತವಾಗಿ ಪ್ರಾರಂಭವಾಗಿವೆ. ಮೊದಲ ದಿನದ ಕನ್ನಡ ಭಾಷಾ ಪರೀಕ್ಷೆಗೆ 2022 ಮಕ್ಕ‍ಳಲ್ಲಿ 52 ಮಕ್ಕಳು ಗೈರು ಹಾಜರಾಗಿದ್ದು, 1970 ಮಕ್ಕಳು ಬರೆದಿದ್ದಾರೆ.

ಮುಂಡರಗಿ ತಾಲೂಕಿನ 8 ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ಮಕ್ಕಳಿಗೆ ಅಲ್ಲಿನ ಶಿಕ್ಷಕರು ಹಾಗೂ ಇಲಾಖೆ ಹಿರಿಯ ಅಧಿಕಾರಿಗಳು ಮಕ್ಕಳಿಗೆ ಹೂ ಕೊಟ್ಟು ಪರೀಕ್ಷಾ ಕೇಂದ್ರಕ್ಕೆ ಬರಮಾಡಿಕೊಂಡರು. ಪರೀಕ್ಷೆ ಜರುಗುವ ಎಲ್ಲ 8 ಕೇಂದ್ರಗಳಲ್ಲಿಯೂ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಕೇಂದ್ರಗಳಲ್ಲಿಯೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಫಡ್ನೇಶಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ: ಡಂಬಳದ ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಅಜ್ಜಿಯ ಸಾವಿನ ದುಃಖದಲ್ಲೂ ಶುಕ್ರವಾರ ಪರೀಕ್ಷೆ ಬರೆದಿದ್ದಾಳೆ.

ವಿದ್ಯಾರ್ಥಿನಿ ಜಲಜಾಕ್ಷಿ ಕಿಲಾರಿ ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಬರೆಯಲು ಮೊದಲಿನಿಂದಲೂ ಓದಿ ಸಿದ್ಧವಾಗಿದ್ದಳು. ಆದರೆ ವಿಧಿಯ ಆಟ ಮನೆಯಲ್ಲಿ ಅವಳ ಅಜ್ಜಿ ಗಂಗಮ್ಮ ಕಿಲಾರಿ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ದುಃಖದ ವಾತಾವರಣದಲ್ಲಿ ಪರೀಕ್ಷೆಗೆ ಬರಲು ಭಯಭೀತಳಾಗಿ ಮಾನಸಿಕವಾಗಿ ಗೊಂದಲದ್ದಾಗ ವಿದ್ಯಾರ್ಥಿನಿಗೆ ಮನೆಯ ಪಾಲಕರು ಹಾಗೂ ಶಾಲೆಯ ಶಿಕ್ಷಕರು ಮತ್ತು ಅವಳ ಸಹಪಾಠಿಗಳು ಶಾಲೆಗೆ ಕರೆದುಕೊಂಡು ಬಂದು ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಎ.ಬಿ. ಬೇವಿನಕಟ್ಟಿ, ಸಂಜುತ ಸಂಕಣ್ಣವರ್, ಎಸ್.ಎಂ. ಹಂಚಿನಾಳ, ಬೂದಪ್ಪ ಅಂಗಡಿ, ಎಸ್.ಎಸ್. ತಿಮ್ಮಾಪುರ, ಎಂ.ಎಂ. ಗೌಳೆರ ಎಲ್ಲ ಶಿಕ್ಷಕರು ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಗೆ ಹೋಗಿ ಧೈರ್ಯ ತುಂಬಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''