ಹೊಸಕೋಟೆ: ವಿವಿಧ ವಸತಿ ಯೋಜನೆಗಳಲ್ಲಿ 2 ಸಾವಿರ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸಿದ್ದು ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಸೂರು ಒದಗಿಸುವುದು ನಮ್ಮ ಉದ್ದೇಶ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ತಾವರೆಕೆರೆ ಗ್ರಾಪಂ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಪರಿಶಿಷ್ಟರಿಗೆ ಸೌಲಭ್ಯ ವಿತರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ತಾವರೆಕೆರೆ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಸಿಗಲಿದ್ದು, ಇದರಿಂದ ಭಾಗದ ಜನರ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಹಿಂದೆ ಬಚ್ಚೇಗೌಡರ ಅವಧಿಯಲ್ಲಿ ವೊಲ್ವೋ ಕಾರ್ಖಾನೆ ಸ್ಥಾಪನೆ ಮಾಡಿದ ಕಾರಣ ಆನೇಕರಿಗೆ ಉದ್ಯೋಗ ಸಿಗುವುದರ ಜತೆಗೆ ಸ್ಥಳೀಯ ಗ್ರಾಪಂಗೆ ಉತ್ತಮ ವರಮಾನ ಲಭಿಸಿ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ತಾವರೆಕೆರೆ ಶಾಲೆಯನ್ನು ವೋಲ್ವೊ ಕಂಪನಿ ದತ್ತು ಪಡೆದು 2.50 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರುತಾಪಂ ಮಾಜಿ ಅಧ್ಯಕ್ಷ ಟಿಎಸ್‌ಆರ್ ರಾಜಶೇಖರ್ ಮಾತನಾಡಿ, ತಾವರೆಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಬಚ್ಚೇಗೌಡರು ಶಾಸಕರಾಗಿ, ಸಚಿವರಾಗಿ ಸಾಕಷ್ಟು ಶಾಶ್ವತ ಕೆಲಸ ಮಾಡಿದ್ದಾರೆ. ಹಾಗೆಯೇ ಶರತ್ ಬಚ್ಚೇಗೌಡರು ಅಭಿವೃದ್ದಿ ಮಾಡುತ್ತಿದ್ದಾರೆ ಎಂದರು.
ಬಿಎಂಆರ್‌ಡಿಎ ನಿದೇರ್ಶಕ ಡಾ.ಎಚ್.ಎಂ ಸುಬ್ಬರಾಜ್, ಉದ್ಯಮಿ ಬಿ.ವಿ.ಬೈರೇಗೌಡ, ಬಗರ್ ಹುಕುಂ ಅಧ್ಯಕ್ಷ ನಾರಾಯಣಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ದೇವರಾಜ್, ಗ್ರಾಪಂ ಅಧ್ಯಕ್ಷೆ ಪವಿತ್ರ ಮಂಜುನಾಥ್, ಉಪಾಧ್ಯಕ್ಷೆ ಅಸ್ಮಾತಾಜ್ ಜಿಯಾವುಲ್ಲಾ, ತಾಪಂ ಮಾಜಿ ಅಧ್ಯಕ್ಷರಾದ ರಾಜಶೇಖರಗೌಡ, ಡಿ ನರಸಿಂಹಯ್ಯ, ಮಾಜಿ ಅಧ್ಯಕ್ಷ ದಯಾನಂದಬಾಬು, ಬಾಣಮಾಕನಹಳ್ಳಿ ರಮೇಶ್, ಪಿಡಿಒ ಮುನಿಗಂಗಯ್ಯ ಇತರರಿದ್ದರು.ಫೋಟೋ: 22 ಹೆಚ್‌ಎಸ್‌ಕೆ 3
ಹೊಸಕೋಟೆ ತಾಲೂಕು ತಾವರೆಕೆರೆ ಗ್ರಾಪಂ ವತಿಯಿಂದ ಇ-ಸ್ವತ್ತು ದಾಖಲೆಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.