ನಾಗನೂರ ಅರ್ಬನ್ ಸಹಕಾರಿಗೆ ₹2.52 ಕೋಟಿ ಲಾಭ

KannadaprabhaNewsNetwork | Published : Sep 23, 2024 1:15 AM

ಸಾರಾಂಶ

ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 13 ಶಾಖೆಗಳನ್ನು ಹೊಂದಿ ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ₹2.52 ಕೋಟಿ ಲಾಭಗಳಿಸಿ ಶೇರುದಾರರಿಗೆ ಶೇ.25ರಷ್ಟು ಲಾಭಾಂಶ ವಿತರಿಸಿ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಗೌಡಪ್ಪ ತಡಸನವರ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 13 ಶಾಖೆಗಳನ್ನು ಹೊಂದಿ ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ ₹2.52 ಕೋಟಿ ಲಾಭಗಳಿಸಿ ಶೇರುದಾರರಿಗೆ ಶೇ.25ರಷ್ಟು ಲಾಭಾಂಶ ವಿತರಿಸಿ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಗೌಡಪ್ಪ ತಡಸನವರ ಹೇಳಿದರು.ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ 30ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು, ನಾಗನೂರ ಸಹಕಾರಿಯು ರಾಷ್ಟ್ರೀಕರ್ತ ಬ್ಯಾಂಕು ನೀಡುವ ಸೌಲಭವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ, ಸಂಘದಿಂದ ಇನ್ನೂ 10 ಶಾಖೆ ಪ್ರಾರಂಭಿಸಲು ಸಹಕಾರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿಲಾಗಿದೆ. ನಮ್ಮ ಸಂಘದ ಸಾಲಗಾರರಿಗೆ ವೀಮೆ ಸೌಲಭ್ಯ ಒದಗಿಸಿದ್ದು ಹಾಗೂ ಸದಸ್ಯರ ಮಕ್ಕಳ ಮದುವೆಗೆ ಹಾಗೂ ಸದಸ್ಯರು ಮರಣ ಹೊಂದಿದರೆ ಸಹಾಯ ದನ ನೀಡುತ್ತಿರುವುದರಿಂದ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಿದ್ದೇವೆ ಎಂದರು. ಸಂಘದಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಪಾರದರ್ಶಕ ಆಡಳಿತ ನಡೆಸಿದ ಪರಿಣಾಮ ಪ್ರಗತಿ ಸಾಧಿಸುತಿದೆ, ಸಂಘಕ್ಕೆ ದ್ರೋಹ ಬಗೆದರೆ ಹೆತ್ತತಾಯಿಗೆ ದ್ರೋಹ ಬಗ್ಗೆದಂತೆ ಎಂದ ಸಿಬ್ಬಂದಿ ಸದಸ್ಯರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಬೇಕೆಂದರು. ಮಾಜಿ ಸಚಿವ ಹಾಗೂ ಬರ್ಡ್ಸ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಪಾಟೀಲ, ಯರಗಟ್ಟಿ ಶಾಖೆಯ ರುದ್ರಪ್ಪ ಸಿಂಗಾಡಿ, ಕಬ್ಬೂರ ಶಾಖೆಯ ಶಿವಕುಮಾರ ಸಿಂಗಾರಿಕೊಪ್ಪ, ಮುಗಳಖೋಡ ಶಾಖೆಯ ಮಲ್ಲಿಕಾರ್ಜು ಖಾನಗೌಡ್ರ, ಮಹಾಲಿಂಗಪುರ ಶಾಖೆಯ ಈರಪ್ಪ ಸಪ್ತಸಾಗರ, ಅಶೋಕ ಭಜಂತ್ರಿ ಮಾತನಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ ಅಂಗಡಿ ಸಭೆಯ ವಿಷಯ ಪ್ರಾಸ್ತಾಪಿಸಿ ಮಾತನಾಡಿ, ಸಂಘ ಕಳೆದ ಮಾರ್ಚ್‌ ಅಂತ್ಯಕ್ಕೆ 11,144 ಷೇರುದಾರನ್ನು ಹೊಂದಿ ₹85.39 ಲಕ್ಷ ಷೇರು ಬಂಡವಾಳ, ₹126.17 ಕೋಟಿ ಠೇವು, ಒಟ್ಟು ₹140.04 ದುಡಿಯುವ ಬಂಡವಾಳ ಹೊಂದಿ ಸಂಘದ ಗ್ರಾಹಕರಿಗೆ ವಿವಿಧ ರೀತಿಯ ₹100.21 ಕೋಟಿ ಸಾಲ ವಿತರಿಸಿದೆ ಒಟ್ಟು ₹ 995.33 ಕೋಟಿ ವ್ಯವಹಾರ ನಡೆಸಿದೆ ಎಂದರು. ಸಭೆಯಲ್ಲಿ ಮುಗಳಖೋಡ ಆದರ್ಶ ಶಾಖೆ, ಆನಂದ ಮಳವಾಡ ಉತ್ತಮ ಶಾಖಾ ವ್ಯವಸ್ಥಾಪಕ, ರಮೇಶ ಕಂಬಿ ಉತ್ತಮ ಗುಮಾಸ್ತ, ವಸಂತ ಸುಣಗಾರ ಉತ್ತಮ ಸಿಪಾಯಿ, ಮುತ್ತೇಪ್ಪ ಪೂಜೇರಿ ಉತ್ತಮ ಪಿಗ್ಮೀ ಸಂಗ್ರಹ ಎಂದು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಾಗನೂರ ಮಯೂರ ಪ್ರೌಢಶಾಲೆಯ ವಿಶ್ವನಾಥ ನಾವಿ, ಶಿಲ್ಪಾ ಪೂಜೇರಿ, ಪ್ರವೀಣ ಹೊಸಟ್ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘದ ವಿವಿಧ ಶಾಖೆಯ ಸಲಹಾ ಸಮೀತಿ ಅಧ್ಯಕ್ಷ ರಾಜಾರಾಮ ಕಲಾಲ, ಈಶ್ವರಪ್ಪ ಸೋಗಲದ, ಮಲ್ಲಪ್ಪ ಕಂಬಿ, ಅಶೋಕ ಬಂಡಿವಡ್ಡರ, ಚಂದ್ರಪ್ಪ ಮೆಳವಂಕಿ, ಸಿದ್ದು ಕೋಟಗಿ, ತಮ್ಮಣ್ಣ ಹುಂಡೆಕಾರ, ಶಿವುಕುಮಾರ ಜಕಾತಿ, ಗಿರಿಗೌಡ ಪಾಟೀಲ, ಶಿವಾನಂದ ಮುಡಸಿ, ವಿಠ್ಠಲ ಕುಕನೂರ, ಈರಪ್ಪ ಸಪ್ತಸಾಗರ, ಬಸವರಾಜ ಬಸೀಡೀಣಿ ಹಾಗೂಪ್ರಧಾನ ಕಚೇರಿಯ ಉಪಾಧ್ಯಕ್ಷ ಶಿವಲಿಂಗಪ್ಪ ಗೋಟೂರ, ನಿರ್ದೇಶಕರಾದ ವೆಂಕಪ್ಪ ಪೂಜೇರಿ, ಮಲ್ಲಪ್ಪ ಬಂಡಿ, ರುದ್ರಪ್ಪ ಬಾಗೋಜಿ, ಸುಬಾಸ ಸಣ್ಣಕ್ಕಿ, ಶಿವಾನಂದ ದಡ್ಡಿ, ರಾಮಪ್ಪ ಪದ್ದಿ, ಕೆಂಪಣ್ಣ ನಿಡಸೋಸಿ, ಶ್ರೇಯಾಂಕ ಮೆಳವಂಕಿ, ದುಂಡಪ್ಪ ಬೆಳಕೂಡ, ವಿಠ್ಠಲ ಬೆಳಕೂಡ, ಬಾಳಪ್ಪ ಬಡಕುಂದ್ರಿ, ರಾಮನಗೌಡ ತಡಸನವರ, ರತ್ನಾ ಪಾಟೀಲ, ಜಯಶ್ರೀ ಕರಿಹೊಳಿ ಹಾಗೂ ಷೇರುದಾರರು ಇದ್ದರು. ರಮೇಶಕುಮಾರ ಕಂಬಿ ವಾರ್ಷಿಕ ವರದಿ ಮಂಡಿಸಿದರು. ಸಿದ್ಧಾರೂಢ ಕೆಸರಗೊಪ್ಪ ನಿರೂಪಿಸಿದರು. ಪ್ರಕಾಶ ಅಂಗಡಿ ಸ್ವಾಗತಿಸಿ ವಂದಿಸಿದರು.

Share this article