ವಾಣಿಜ್ಯ ಮಳಿಗೆ ಹರಾಜಿನಿಂದ ₹೨.೭೩ ಕೋಟಿ ಠೇವಣಿ

KannadaprabhaNewsNetwork |  
Published : Oct 04, 2024, 01:20 AM IST
೩ಬಿಎಸ್ವಿ೦೨- ಬಸವನಬಾಗೇವಾಡಿಯ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಮೆಗಾಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಮುಂದುವರಿದ ಬಹಿರಂಗ ಹರಾಜು ಪ್ರಕ್ರಿಯೆ ಗುರುವಾರ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆಯ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಗುರುವಾರ ಸಕ್ಕರೆ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಜರುಗಿತು. ಮಂಗಳವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ೧೭ ವಾಣಿಜ್ಯ ಮಳಿಗೆಗಳು ಹರಾಜಾಗಿದ್ದು, ಒಟ್ಟು ₹೨.೭೩ ಕೋಟಿ ಠೇವಣಿ ಸಂದಾಯವಾಗಿದೆ.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾ ಮಾರುಕಟ್ಟೆಯ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಗುರುವಾರ ಸಕ್ಕರೆ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಜರುಗಿತು. ಮಂಗಳವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ೧೭ ವಾಣಿಜ್ಯ ಮಳಿಗೆಗಳು ಹರಾಜಾಗಿದ್ದು, ಒಟ್ಟು ₹೨.೭೩ ಕೋಟಿ ಠೇವಣಿ ಸಂದಾಯವಾಗಿದೆ.ಮೆಗಾ ಮಾರುಕಟ್ಟೆಯಲ್ಲಿ ಒಟ್ಟು ೧೩೪ ವಾಣಿಜ್ಯ ಮಳಿಗೆಗಳಿವೆ. ಇದರಲ್ಲಿ ೩೫ ವಾಣಿಜ್ಯ ಮಳಿಗೆಗಳು ಹಿಂದೆ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಆಗಿವೆ. ಉಳಿದ ೯೯ ವಾಣಿಜ್ಯ ಮಳಿಗೆಗಳ ಮುಂದುವರಿದ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ, ಗುರುವಾರ ಎರಡು ದಿನಗಳ ಕಾಲ ಪುರಸಭೆ ನಡೆಸಿತು. ಮಂಗಳವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೭ ವಾಣಿಜ್ಯ ಮಳಿಗೆಗಳು ಹರಾಜಾಗಿದ್ದವು. ಅದರಿಂದ ಒಟ್ಟು ₹ ೯೮ ಲಕ್ಷ ಠೇವಣಿ ಮೊತ್ತ ಆಗಿತ್ತು. ಮಂಗಳವಾರ ಒಟ್ಟು ೧೫ ಜನರು ಭಾಗವಹಿಸಿದ್ದರು. ಮಂಗಳವಾರದ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಳಿಗೆ ಸಂಖ್ಯೆ ಜಿ-೫ ಅನ್ನು ಸುನೀಲಕುಮಾರ ಆದಿಗೊಂಡ ಎಂಬುವವರು ₹ ೩೦ ಲಕ್ಷ ಠೇವಣಿ ನೀಡಿ ಪಡೆದುಕೊಂಡಿದ್ದಾರೆ.ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಜಿಪಂ ಎಇಇ ವಿಲಾಸ ರಾಠೋಡ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಪುರಸಭೆ ಕಂದಾಯ ನಿರೀಕ್ಷಕಿ ಗೀತಾಂಜಲಿ ದಾಸರ, ಪುರಸಭೆ ಆರೋಗ್ಯ ನಿರೀಕ್ಷಕ ವಿಜಯ ವಂದಾಲ, ಬಸವರಾಜ ಬೋಳಶೆಟ್ಟಿ, ಪುರಸಭೆ ಅಭಿಯಂತರ ಮಹಾದೇವ ಜಂಬಗಿ, ಸಂತೋಷ ಗಿಡ್ಡಸಣ್ಣನವರ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ನಜೀರ ಗಣಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಅನಿಲ ಅಗರವಾಲ, ಸಂಗನಗೌಡ ಚಿಕ್ಕೊಂಡ, ಶೇಖರ ಗೊಳಸಂಗಿ, ಕಮಲಸಾಬ ಕೊರಬು, ರಮೇಶ ಯಳಮೇಲಿ, ಮಲ್ಲೇಶಿ ಕಡಕೋಳ, ಶಂಕರಗೌಡ ಚಿಕ್ಕೊಂಡ, ಬಸಣ್ಣ ದೇಸಾಯಿ, ಸಿದ್ದಣ್ಣ ಮೋದಿ, ಬಸವರಾಜ ಚೌರಿ ಇದ್ದರು.

----

ಬಾಕ್ಸ್‌8 ಮಳಿಗೆ ಪಡೆದ ಅಗರವಾಲ್‌

ಉಳಿದ ೯೨ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಗುರುವಾರ ನಡೆದಿದ್ದು, ಒಟ್ಟು ೧೦ ವಾಣಿಜ್ಯ ಮಳಿಗೆಗಳು ಹರಾಜಾಗಿ, ₹ ೧.೭೫ ಕೋಟಿ ಠೇವಣಿ ಮೊತ್ತ ಸಂದಾಯವಾಗಿದೆ. ಮಳಿಗೆ ಸಂಖ್ಯೆ ಜಿ-೫೪ ರಿಂದ ಜಿ.೬೧ ರವರೆಗೆ ಒಟ್ಟು ೮ ಮಳಿಗೆಗಳನ್ನು ಜಿತೇಂದ್ರ ಅಗರವಾಲ್‌ ಅವರು ೧.೩೬ ಕೋಟಿ ಠೇವಣಿ ಮೊತ್ತಕ್ಕೆ ಹಿಡಿದರೆ, ಜಿ.೫೧ ಅನ್ನು ಗಾಯತ್ರಿ ಬಡಿಗೇರ ₹ ೧೩ ಲಕ್ಷ ಠೇವಣಿ ಮೊತ್ತಕ್ಕೆ, ಜಿ-೬ ಅನ್ನು ವೀರಭದ್ರೇಶ್ವರ ಇಲೆಕ್ಟ್ರಾನಿಕ್ ಅಂಗಡಿ ಮಾಲೀಕರು ₹ ೨೬.೨೦ ಲಕ್ಷ ಠೇವಣಿ ಮೊತ್ತಕ್ಕೆ ಪಡೆದರು. ಗುರವಾರ ೨೭ ಜನರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮೆಗಾ ಮಾರುಕಟ್ಟೆಯಲ್ಲಿ ಉಳಿದ ೮೨ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ