20 ಅಡಿ ಉದ್ದದ ಪೆನ್‌: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಕೃಷ್ಣಮೂರ್ತಿ ಆಚಾರ್‌ ಸಾಧನೆ

KannadaprabhaNewsNetwork |  
Published : Oct 16, 2023, 01:45 AM IST
೧೫ಕೆ.ಎಸ್.ಎ.ಜಿ.೨ | Kannada Prabha

ಸಾರಾಂಶ

ಸಾಗರ ತಾಲೂಕಿನ ಆವಿನಹಳ್ಳಿಯ ಗಣೇಶ್ ಹಾರ್ಡ್‌ವೇರ್ ಮತ್ತು ಜೈಗಣೇಶ್ ವುರ್ಡ್‌ ವರ್ಕ್ ಮಾಲೀಕ

ಸಾಗರ: ತಾಲೂಕಿನ ಆವಿನಹಳ್ಳಿಯ ಗಣೇಶ್ ಹಾರ್ಡ್‌ವೇರ್ ಮತ್ತು ಜೈಗಣೇಶ್ ವುರ್ಡ್‌ ವರ್ಕ್ ಮಾಲೀಕ ಕೃಷ್ಣಮೂರ್ತಿ ಆಚಾರ್ ತಯಾರಿಸಿದ 20 ಅಡಿ ಉದ್ದದ ಪೆನ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಸಿಕ್ಕಿದೆ. ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ಕಳೆದ ಹತ್ತು ವರ್ಷಗಳ ಹಿಂದೆ ತಯಾರಿಸಿದ್ದ ಸುಮಾರು 20 ಅಡಿ ಉದ್ದದ ಪೆನ್‌ಗೆ ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಿಸಿ, ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷ್ಣಮೂರ್ತಿ ಆಚಾರ್ ಅವರು ವಿಶ್ವಕರ್ಮಸ್ ಎಂಬ ಹೆಸರಿನಲ್ಲಿ ತಯಾರಿಸಿದ ಈ ಬೃಹತ್ ಪೆನ್‌ಗೆ ಹೈಬ್ರೀಡ್ ಅಕೇಶಿಯಾ ಮರವನ್ನು ಬಳಸಿದ್ದಾರೆ. ಪೆನ್ ತಯಾರಿಕೆಗೆ ಸುಮಾರು 15 ದಿನಗಳನ್ನು ತೆಗೆದುಕೊಂಡಿದ್ದಾರೆ. ಈ ವಿಶೇಷವಾದ ಪೆನ್‌ ಅ ಅನ್ನು ಗಿನ್ನಿಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಕಳಿಸಲಾಗಿತ್ತು. ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸ್ಥಾನ ಸಿಕ್ಕಿದೆ. - - - -15ಕೆ.ಎಸ್.ಎ.ಜಿ.2:

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ