ಬೆಂಗಳೂರು : ಮುಂದಿನ ತಿಂಗಳು ನಮ್ಮ ಮೆಟ್ರೋ ಪ್ರಯಾಣ ದರ ಶೇ.20 ಹೆಚ್ಚಳ-ಬಿಎಂಆರ್‌ಸಿಎಲ್‌ ಸಿದ್ಧತೆ

KannadaprabhaNewsNetwork |  
Published : Oct 21, 2024, 01:33 AM ISTUpdated : Oct 21, 2024, 09:53 AM IST
ಟಿಕೆಟ್‌ | Kannada Prabha

ಸಾರಾಂಶ

ನವೆಂಬರ್‌ನಿಂದ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ನಿಗಮ ನಿರ್ಧರಿಸಿದೆ. ಈ ಸಂಬಂಧ ಜನರಅಭಿಪ್ರಾಯ ಸಂಗ್ರಹಕ್ಕೆ ನಿಗದಿ ಮಾಡಿದ್ದ ಅವಧಿಯನ್ನು ವಿಸ್ತರಿಸಿದೆ.

 ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಿಸುವ ಸಂಬಂಧ ಆಹ್ವಾನಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಅವಧಿಯನ್ನು ಅ. 28ರವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ವಿಸ್ತರಿಸಿದೆ.

ಎಷ್ಟು ದರ ಏರಿಕೆ ಮಾಡಬೇಕೆಂದು ಈ ಕುರಿತು ರಚಿಸಿರುವ ಸಮಿತಿಗೆ ಸಾರ್ವಜನಿಕರು ಅಭಿಪ್ರಾಯ, ಸಲಹೆ ನೀಡಬಹುದಾಗಿದೆ. ಹಾಲಿ ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರ ₹10 ನಿಂದ ಗರಿಷ್ಠ ದರ ₹60 ವರೆಗಿದೆ. ಈಗ ಶೇ.15 ರಿಂದ ಶೇ.20 ರಷ್ಟು ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆಯಿದೆ. ಬಹುತೇಕ ಮುಂದಿನ ತಿಂಗಳಿಂದ ಹೊಸ ದರ ಜಾರಿ ಮಾಡುವ ಸಿದ್ಧತೆಯನ್ನು ಬಿಎಂಆರ್‌ಸಿಎಲ್‌ ಮಾಡಿಕೊಂಡಿದೆ. ದರ ಎಷ್ಟರ ಮಟ್ಟಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಬಿಎಂಆರ್‌ಸಿಎಲ್‌ ಈ ಮೊದಲು ಅ.21ರವರೆಗೆ ಜನತೆಯಿಂದ ಅಭಿಪ್ರಾಯ ಕೇಳಿತ್ತು. ಈ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ವಿರೋಧಿಸಿದ್ದಾರೆ.

ದರ ಹೆಚ್ಚಳ

ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ffc@bmrc.co.in ಗೆ ಕಳುಹಿಸಬಹುದು. ಇಲ್ಲವೇ ಅಂಚೆ ಮೂಲಕ ಬಿಎಂಆರ್​ಸಿಎಲ್​​ ಶುಲ್ಕ ನಿಗದಿ ಸಮಿತಿ ಅಧ್ಯಕ್ಷರಿಗೆ ಕಳುಹಿಸಬಹುದು. ಇಲ್ಲವೇ ವಾಟ್ಸಾಪ್​ ಸಂಖ್ಯೆ 94482 91173 ಸಲಹೆ ಕಳುಹಿಸಬಹುದು ಎಂದು ಬಿಎಂಆರ್​ಸಿಎಲ್​ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ