ಈಶ್ವರ ಶೆಟ್ಟರ
ಜನವರಿ
ಜ.2- ಬೆಳೆ ನೆಲಸಮ ಮಾಡಿದ ಗುತ್ತಿಗೆದಾರ. ಬಿಟಿಡಿಎ ಅಧಿಕಾರಿಗಳೊಂದಿಗೆ ರೈತರ ವಾಗ್ವಾದ. 3ನೇ ಯೂನಿಟ್ ಕಾಮಗಾರಿ ನಿಲ್ಲಿಸಿದ ರೈತರು. ಜಿಲ್ಲೆಯಾದ್ಯಂತ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮ.ಜ.7-ನಗರದಲ್ಲಿ ರಾಷ್ಟ್ರ ಸೇವಕಿಯರಿಂದ ಆಕರ್ಷಕ ಪಥ ಸಂಚಲನ.
ಜ.22-ಬಾಗಲಕೋಟೆಯಲ್ಲಿ ಪಂಚಮುಖಿ ಆಂಜನೇಯ ದೇವಾಲಯ ಲೋಕಾರ್ಪಣೆ.
ಜ.26-ಬಾದಾಮಿ ಜಾತ್ರೆಗೆ ಬಂದಿದ್ದ ವಿಜಯಪುರ ತಾಲೂಕಿನ ಹೊನಹನಹಳ್ಳಿಯ ನಾಲ್ವರು ಸುನಗ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವು.
ಜ.29-ಜಮಖಂಡಿ ತಾಲೂಕಿನ ಆಲಗೂರ ಬಳಿ ಕಬ್ಬಿನ ಟ್ಯಾಕ್ಟರ್‌ರ್ಗೆ ಶಾಲಾ ವಾಹನ ಡಿಕ್ಕಿ. ನಾಲ್ವರು ಮಕ್ಕಳು ಸಾವು. ಮುಖ್ಯಮಂತ್ರಿಗಳಿಂದ ಮಕ್ಕಳ ಕುಟುಂಬಕ್ಕೆ ತಲಾ ₹2 ಲಕ್ಷ, ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ಘೋಷಣೆ.ಫೆಬ್ರವರಿ
ಫೆ.10-ತೋಟಗಾರಿಕೆ ವಿವಿಯಿಂದ ಮೂರು ದಿನಗಳ ತೋಟಗಾರಿಕೆ ಮೇಳ. ಬಾರದ ಸಿಎಂ, ಸಚಿವರು. ಸಪ್ಪೆಯಾಗಿ ಮುಗಿದ ಮೇಳ.
ಫೆ.17-ಕಲಾದಗಿಯಲ್ಲಿ ರಂಭಾಪುರಿ ಜಗದ್ಗುರುಗಳ ಕಾರಿಗೆ ಚಪ್ಪಲಿ ಎಸೆದ ಮಹಿಳೆ. 59 ಜನರ ವಿರುದ್ಧ ಪ್ರಕರಣ ದಾಖಲು.
ಫೆ.26-ಬಾಗಲಕೋಟೆಯ ಅಮೃತ ಭಾರತ ಯೋಜನೆಯಡಿ ನೂತನ ರೈಲ್ವೆ ನಿಲ್ದಾಣ ಉದ್ಘಾಟನೆ. ಆನ್‌ಲೈನ್‌ನಲ್ಲಿ ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ.
ಮಾರ್ಚ್ಮಾ.1-ಜಿಲ್ಲೆಯ ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನ.
ಮಾ.9-ಅತ್ಯುತ್ತಮ ಕಾರ್ಯ ನಿರ್ವಹಣೆ. ರಾಜ್ಯ ಮಟ್ಟದ ಮೂರು ಪ್ರಶಸ್ತಿ ಬಾಚಿಕೊಂಡ ಬಾಗಲಕೋಟೆ ಜಿ.ಪಂ.ಮಾ.13-ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಪಿ.ಸಿ.ಗದ್ದಿಗೌಡರ 5ನೇ ಬಾರಿ ಅಭ್ಯರ್ಥಿಯಾಗಿ ಘೋಷಣೆ.
ಮಾ.21-ಕಾಂಗ್ರೆಸ್‌ನಿಂದ ಸಚಿವ ಶಿವಾನಂದ ಪುತ್ರಿ ಸಂಯುಕ್ತಾ ಪಾಟೀಲ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.ಮಾ.22-ವೀಣಾ ಬೆಂಬಲಿಗರ ಆಕ್ರೋಶ. ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶ.
ಮಾ.26-ವಿಪ್ರ ಸಮಾಜದ ಜಿಲ್ಲಾ ಅಧ್ಯಕ್ಷ, ಹಿರಿಯ ವಕೀಲ ಕೆ.ಎಸ್.ದೇಶಪಾಂಡೆ, ಖಾನಾಪುರ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವು.-------
ಏಪ್ರಿಲ್ಏ.6-ಟಿಕೆಟ್ ವಂಚಿತ ವೀಣಾ ಕಾಶಪ್ಪನವರ ಹಿತೈಷಿಗಳ ಸಭೆ. ಯುಗಾದಿ ಬಳಿಕ ಅಂತಿಮ ನಿರ್ಧಾರಕ್ಕೆ ತೀರ್ಮಾನ.
ಏ.7-ಬಾಗಲಕೋಟೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ. ವೀಣಾಗೆ ಖಡಕ್ ಎಚ್ಚರಿಕೆ ಕೊಟ್ಟ ಸಚಿವ ಶಿವಾನಂದ ಪಾಟೀಲ, ಶಾಸಕ ಜೆ.ಟಿ.ಪಾಟೀಲ.ಏ.8-ಬಾದಾಮಿಯಲ್ಲಿ ಬಿಜೆಪಿ ಬಣ ರಾಜಕೀಯ. ತಾಲೂಕು ಪದಾಧಿಕಾರಿಗಳ ಆಯ್ಕೆಗೆ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ ಬಣದ ಒತ್ತಾಯ.
ಏ.12-ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ. ಮೊದಲ ದಿನವೇ ಮೂವರು ಪಕ್ಷೇತರರ ನಾಮಪತ್ರ ಸಲ್ಲಿಕೆ.ಏ.14-ಹೊಲದಲ್ಲಿ ಕೃಷಿ ಕೂಲಿ ಕಾರ್ಯ ಮುಗಿಸಿ, ಸಂಜೆ ಮನೆಗೆ ಹೊರಟ್ಟಿ ಬೀಳಗಿ ತಾಲೂಕಿನ ಯತ್ನಟ್ಟಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ಸಂಭವಿಸಿ, ಬೀಳಗಿ ತಾಲೂಕು ಬಾದರದಿನ್ನಿ ಗ್ರಾಮದ ಯಂಕಪ್ಪ ಶಿವಪ್ಪ ತೋಳಮಟ್ಟಿ (72), ಪತ್ನಿ ಯಲ್ಲವ್ವ ಯಂಕಪ್ಪ ತೋಳಮಟ್ಟಿ (66), ಪುತ್ರ ಪುಂಡಲೀಕ ಯಂಕಪ್ಪ ತೋಳಮಟ್ಟಿ (40), ಪುತ್ರಿ ನಾಗವ್ವ ಅಶೋಕ ಬಮ್ಮನ್ನವರ, ನಾಗವ್ವಳ ಪತಿ ಮತ್ತು ಯಂಕಪ್ಪ ಅವರ ಅಳಿಯ ಅಶೋಕ ನಿಂಗಪ್ಪ ಬಮ್ಮನ್ನವರ (48) ಮೃತಪಟ್ಟರು.
ಏ.19-ಮುನಿಸು ಬಿಟ್ಟು ಕಾಂಗ್ರೆಸ್ ರೋಡ್ ಶೋಗೆ ಬಂದ ವೀಣಾ ಕಾಶಪ್ಪನವರ. ಪಕ್ಷವೇ ಮುಖ್ಯ ಎಂದು ಒಗ್ಗಟ್ಟು ಪ್ರದರ್ಶನ.ಏ.27-ಬನಹಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಜಾಧ್ವನಿ-2 ಸಮಾವೇಶ.
ಏ.29-ಬಾಗಲಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ. ನವನಗರದಲ್ಲಿ ಬೃಹತ್ ಸಮಾವೇಶ.ಮೇ
ಮೇ.4-ಸಿದ್ದನಕೊಳ್ಳದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಕಾರು ಭೀಕರ ಅಪಘಾತ. ಪ್ರಾಣಾಪಾಯದಿಂದ ಪಾರಾದ ಶ್ರೀಗಳು.ಮೇ.7-ಜಿಲ್ಲೆಯಾದ್ಯಂತ 18ನೇ ಲೋಕಸಭೆ ಚುನಾವಣೆಯ ಮತದಾನ. ಇತಿಹಾಸದಲ್ಲೇ ದಾಖಲೆಯ 72.66ರಷ್ಟು ಮತದಾನ.
ಮೇ.9-ಮುಧೋಳ ತಾಲೂಕು ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ.ಜೂನ್
ಜೂ.4-ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟ. 68,399 ಮತಗಳ ಅಂತರದಿಂದ ಗೆದ್ದ ಬಿಜೆಪಿಯ ಪಿ.ಸಿ.ಗದ್ದಿಗೌಡರ. ಸತತ ನಾಲ್ಕು ಬಾರಿ ಗೆದ್ದಿದ್ದ ದಿ.ಎಸ್.ಬಿ. ಪಾಟೀಲ ದಾಖಲೆ ಮುರಿದು, ಸತತ 5ನೇ ಬಾರಿ ಗೆದ್ದು, ರಾಜಕೀಯ ದಾಖಲೆ ಸ್ಥಾಪಿಸಿದ ಗದ್ದಿಗೌಡರು.ಜೂ.16-ವಿಶ್ವ ದಾಖಲೆಗಾಗಿ 10ಕೆ ಮ್ಯಾರಾಥಾನ್. ರಷ್ಯಾದ ಓಟಗಾರ್ತಿ ಅಲೆಕ್ಸಾಂದ್ರಾ ಅಫಾನಾಸೋವಾ. 1500ಕ್ಕೂ ಹೆಚ್ಚು ಮಹಿಳೆಯರು ಇಳಕಲ್ಲ ಸೀರೆಯುಟ್ಟು ಮ್ಯಾರಾಥಾನ್ನಲ್ಲಿ ಭಾಗಿ.
ಜೂ.26-ವಿದ್ಯುತ್ ತಗುಲಿ ತೇರದಾಳದಲ್ಲಿ ಇಬ್ಬರ ಸಾವು.ಜೂ.28-ಆರೋಗ್ಯ ಸಚಿವ ದಿನೇಶ ಗುಂಡೂರವ್ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ.
ಜುಲೈಜು.2-ಖೋಟಾ ನೋಟು, ಹಣ ದ್ವಿಗುಣ ಪ್ರಕರಣ. ಮಹಾಲಿಂಗಪುರದ ಏಳು ಜನರ ಬಂಧನ.
ಜು.13- ಬಿವಿವಿ ಸಂಘದಿಂದ ನಾಲ್ವರು ಸಂಸದರ ಅಭಿನಂದನೆ.ಜು.16-ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ತೋಟದ ಮನೆಯಲ್ಲಿ ಇಡೀ ಕುಟುಂಬ ಸಜೀವ ದಹನಕ್ಕೆ ಸಂಚು. ಶೆಡ್ಗೆ ಪೆಟ್ರೋಲ್ ಸುರಿದು ಬೆಂಕಿ, ತಾಯಿ-ಮಗಳು ಸ್ಥಳದಲ್ಲೇ ಸಾವು. ಬೆಳಗಾವಿ ಆಸ್ಪತ್ರೆಯಲ್ಲಿ ಯುವಕ ಸಾವು. ಘಟನೆಯಲ್ಲಿ ಮೂವರು ಸಾವು.
ಜು.19-ಐಡಿಬಿಐ ಬ್ಯಾಂಕ್‌ನಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ₹2.47 ಕೋಟಿ ಲೂಟಿ ಪ್ರಕರಣ. ಬಾಗಲಕೋಟೆಯ ಸೂರಜ್ ಸಗರ, ಆತನ ಸ್ನೇಹಿತರು ಸೇರಿ ಏಳು ಜನರ ಬಂಧನ.ಆಗಸ್ಟ್
ಆ.2-ಜಿಲ್ಲೆಯ ಘಟಪ್ರಭಾ ನದಿ ಪಾತ್ರದಲ್ಲಿ ಪ್ರವಾಹ. ಮೂರು ಗ್ರಾಮಗಳ ಜನರ ಸ್ಥಳಾಂತರ.ಆ.5-ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ರಾಜಕೀಯ ಪಿತೂರಿ. ಕಾಂಗ್ರೆಸ್ನಿಂದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ.
ಆ.19-ಜಿಲ್ಲಾಡಳಿತ ಭವನದ ಎದುರು ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆ ವೇಳೆ ಪ್ರತಿಕೃತಿ ದಹನ ವೇಳೆ ಇಬ್ಬರಿಗೆ ತಗುಲಿದ ಬೆಂಕಿ.ಸೆಪ್ಟಂಬರ್ಸೆ.5-ಮಹಾಲಿಂಗಪುರದಲ್ಲಿ ಮತ್ತೆ ಭ್ರೂಣಲಿಂಗ ಪತ್ತೆ ಪ್ರಕರಣ. ಪಾಟೀಲ ಆಸ್ಪತ್ರೆ ಮೇಲೆ ದಾಳಿ.
ಸೆ.6-ನವನಗರದ ಹೇಲಿಪ್ಯಾಡ್ ರಸ್ತೆಯಲ್ಲಿ ಭೀಕರ ಅಪಘಾತ. ಸ್ಕೂಟಿ-ಬೈಕ್ ಡಿಕ್ಕಿ. ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಶೃತಿ ವಂದಕುದರಿ, ಸಾಪ್ಟವೇರ್ ಎಂಜಿನಿಯರ್ ರಜನಿ ವಂದಕುರಿ, ಕೂಲಿ ಕಾರ್ಮಿಕ ಅಭಿಷೇಕ ಧೋತ್ರೆ ಸಾವು.ಸೆ.26-ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ್ ಟೋಲ್ ನಾಕಾ ಬಳಿ ಭೀಕರ ಅಪಘಾತ. ಮುದ್ದೇಬಿಹಾಳ ತಾಲೂಕು ಬಿದರಕುಂದಿಯ ನಾಲ್ವರು ಸ್ಥಳದಲ್ಲೇ ಸಾವು.
ಸೆ.28-ತಾಲೂಕಿನ ರಾಮಾರೂಢ ಮಠದ ಶ್ರೀ ಪರಮರಾಮಾರೂಢ ಸ್ವಾಮೀಜಿಗೆ ಜೆಡಿಎಸ್ ಮುಖಂಡನಿಂದ ₹1 ಕೋಟಿ ವಂಚನೆ. ಡಿವೈಎಸ್ಪಿ-ಎಡಿಜಿಪಿ ಹೆಸರಿನಲ್ಲಿ ಮೋಸ ಮಾಡಿದ ಪ್ರಕಾಶ ಮುಧೋಳ.ಅಕ್ಟೋಬರ್
ಅ.1-ಪೊಲೀಸರ ಹೆಸರಿನಲ್ಲಿ ಹಣ ವಂಚನೆ- ಬಾಗಲಕೋಟೆ ಸಮೀಪದ ರಾಮಾರೂಢ ಸ್ವಾಮೀಜಿಗೆ ವಂಚಿಸಿದ ಪ್ರಕರಣದ ಮಾಹಿತಿ ಬಿಚ್ಚಿಟ್ಟ ಐಜಿಪಿ ವಿಕಾಸಕುಮಾರ-ಬಂಧಿತ ಆರೋಪಿ ಪ್ರಕಾಶ ಮುಧೋಳನಿಂದ ₹87 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಐಜಿಪಿ ವಿಕಾಸಕುಮಾರ-ಸಮಗ್ರ ತನಿಖೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ ಆಧಿಕಾರಿಗಳುಅ.4-ಬಾಗಲಕೋಟೆ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನವನಗರದ ಮೊದಲನೇಯ ಯೂನಿಟ್‌ಗಳನ್ನು ಬಾಗಲಕೋಟೆ ನಗರ ಸಭೆಗೆ ಹಸ್ತಾಂತರ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಿದ ಜನ ಪ್ರತಿನಿಧಿಗಳು-ಸಭೆಯಲ್ಲಿ ಶಾಸಕರಾದ ಮೇಟಿ, ವಿ.ಪ ಸದಸ್ಯರಾದ ಪೂಜಾರ ಭಾಗಿ.
ಅ.24-ರಾಜ್ಯದ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ ಬರುವ ಕೃಷ್ಣಾಭಾಗ್ಯಜಲನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿನ ಅಣೆಕಟ್ಟು ಮತ್ತು ಬ್ಯಾರೆಜುಗಳ ನದಿಪಾತ್ರದಲ್ಲಿನ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಭಂಧಿಸಿದಂತೆ ತಾಂತ್ರಿಕ ಪರಿಶೀಲನೆ ಕೈಗೊಂಡು ವಾಸ್ತವಿಕ ಅಂಶಗಳ ಒಳಗೊಂಡ ವರದಿಯನ್ನು ಸಲ್ಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆಗಿರುವ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ.ಅ.27-ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾಗರಮಾಲ ಯೋಜನೆಯಡಿ ಪ್ರವಾಸೋದ್ಯಮ ಪೂರಕವಾಗಿ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವ ಆಲಮಟ್ಟಿ, ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯ್‌ಪುರ ತಿಳಿಸಿದರು.
-ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಮತ್ತು ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳ ಕಾರ್ಯ ಸಾಧ್ಯತೆ, ಯೋಜನೆಯ ಭೂಸ್ವಾಧೀನ ಮತ್ತು ಜಲಸಾರಿಗೆ ಉಪಯುಕ್ತತೆ ಬಗ್ಗೆ ಪರಿಶೀಲನೆ ಹಾಗೂ ಆಲಮಟ್ಟಿ ಅಣೆಕಟ್ಟಿನ ಕೆಳಭಾಗದಲ್ಲಿರುವ 25 ಎಕರೆ ಜಮೀನಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೀನು ಸಾಕಾಣಿಕೆ ಸ್ಥಳಕ್ಕೆ ಭೇಟಿ ನೀಡಿ ಅವರು ಮಾಹಿತಿ ನೀಡಿದರು.---------------
ನವೆಂಬರ್ನ.15-ಹೇರ್ ಡ್ರೈಯರ್‌ನಲ್ಲಿ ಸ್ಫೋಟಕ ಇಟ್ಟು ಕೊಲೆಗೆ ಯತ್ನ. ಇಳಕಲ್ಲ ಘಟನೆಗೆ ಹೊಸ ತಿರುವು. ಪ್ರೇಯಸಿಯ ಗೆಳತಿ ಕೊಲ್ಲಲು ಸಂಚು. ಗಾಯಗೊಂಡಿದ್ದು ಆರೋಪಿಯ ಪ್ರೇಯಸಿ ಬಸವರಾಜೇಶ್ವರಿ. ಅನೈತಿಕ ಸಂಬಂಧ ಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಆರೋಪಿ ಕೃತ್ಯ
--------------ಡಿಸೆಂಬರ್
ಡಿ.3 ರಿಂದ ಆರಂಭಗೊಂಡ ಉತ್ತರಕರ್ನಾಟಕದ ಜೀವನಾಡಿ ಯುಕೆಪಿ ಸಂತ್ರಸ್ತರ ಬೇಡಿಕೆ ಇಡೇರಿಕೆಗಾಗಿ ಆರಂಭಗೊಂಡ ಹೋರಾಟ 15 ದಿನಗಳ ಕಾಲ ನಡೆದು ಅಂತಿಮವಾಗಿ ಸರ್ಕಾರದ ಭರವಸೆಯಂತೆ ಮುಕ್ತಾಯಗೊಂಡಿತು.ಡಿ.20-ರಿಂದ ನಾಲ್ಕು ದಿನಗಳ ಕಾಲ ಮೂರುವರ್ಷಕ್ಕೊಮ್ಮೆ ನಡೆಯುವ ಬಾಗಲಕೋಟೆಯ ಗ್ರಾಮದೇವರ ಜಾತ್ರೆ ಅದ್ಧೂರಿಯಾಗಿ ನಡೆಯಿತು.
ಡಿ.26-ರಂದು ಕಾಶ್ಮೀರದಲ್ಲಿ ನಡೆದ ವಾಹನ ದುರಂತದಲ್ಲಿ ಜಿಲ್ಲೆಯ ಮಹಾಲಿಂಗಪೂರದ ಯೋಧನ ಸಾವು.