ಕನ್ನಡಪ್ರಭ ವಾರ್ತೆ ಗುರುಮಠಕಲ್
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ ಅವರು ಜೂ.22ರಂದು ಜಿಲ್ಲೆಯಲ್ಲಿ ಯುವ ಬ್ರಿಗೇಡ್ ಜಿಲ್ಲಾ ಕಚೇರಿ ಉದ್ಘಾಟಿಸಲಿದ್ದು, ಅಂದೇ ಸಂಜೆ 4 ಗಂಟೆಗೆ ಪಟ್ಟಣದ ಖಾಸಾಮಠಕ್ಕೆ ಭೇಟಿ ನೀಡಿ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳ ದರ್ಶನ ಪಡೆಯುವರು ಎಂದರು.
ಜತೆಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪೂರ, ಸುರಪುರ ಶಾಸಕ ವೇಣುಗೋಪಾಲ ನಾಯಕ, ಚಿತ್ರನಟರಾದ ದುನಿಯಾ ವಿಜಯ್, ಚೇತನ್ ಹಾಗೂ ಡಾಲಿ ಧನಂಜಯ ಉಪಸ್ಥಿತರಿರುವರು ಎಂದರು.ಈ ವೇಳೆ ಯುವ ಬ್ರಿಗ್ರೇಡ್ ತಾಲೂಕು ಗೌರವಾಧ್ಯಕ್ಷ ಬಾಲರಾಮ್ ಕುಂಠಿಮರಿ, ಪ್ರಧಾನ ಕಾರ್ಯದರ್ಶಿ ನಾಗೇಶ್, ಚನ್ನಪ್ಪ, ಮಹೇಶ, ಎಂ.ಡಿ. ಗೌಸ್, ಎಂ.ಡಿ. ತಸ್ಲೀಮ್ ಅರೀಫ್ ಸೇರಿದಂತೆ ಇತರರಿದ್ದರು.