ಚಳ್ಳಕೆರೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ ೨೦೨೪-೨೦೨೯ರ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ವಿವಿಧ ಇಲಾಖೆಯಿಂದ ೨೧ ಜನ ಅವಿರೋಧ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ಚುನಾವಣೆ ಬಳಿಕ ಸಂಜೆ ಎಲ್ಲಾ ಇಲಾಖೆಯ ಏಣಿಕೆ ಕಾರ್ಯವನ್ನು ಪೂರೈಸಿ ಬಳಿಕ ಚುನಾವಣಾಧಿಕಾರಿ ಶ್ರೀಧರ ಅವರು ಫಲಿತಾಂಶದ ವಿವರವನ್ನು ನೀಡಿದರು.ಅತಿ ಹೆಚ್ಚು ಮತ ಇರುವ ಶಿಕ್ಷಕ ಕ್ಷೇತ್ರದ ಏಣಿಕೆ ಕಾರ್ಯಮಾತ್ರ ಇನ್ನೂ ನಡೆಯುತ್ತಿದ್ದು, ಆ ಕ್ಷೇತ್ರದಿಂದ ಆಯ್ಕೆಯಾದವರ ಬಗ್ಗೆ ಸ್ವಷ್ಟ ಚಿತ್ರಣಸಿಕ್ಕಿಲ್ಲ.
ಕಂದಾಯ ಇಲಾಖೆಯ ಚುನಾವಣೆಯ ಫಲಿತಾಂಶದ ಮಾಹಿತಿ ಲಭ್ಯವಾಗಿದ್ದು, ಪಿ.ಎಲ್.ಲಿಂಗೇಗೌಡ-೬೫ ಮತಗಳನ್ನು ಪಡೆದು ಆಯ್ಕೆಯಾದರೆ ಎದುರಾಳಿ ಶಿರಸ್ತೇದಾರ್ ಗಿರೀಶ್-೨೩ ಮತಗಳನ್ನು ಪಡೆದು ಪರಾಭವಗೊಂಡರು. ಮತ್ತೊಂದು ಕ್ಷೇತ್ರದಲ್ಲಿ ತಳಕು ಗ್ರಾಮ ಆಡಳಿತಾಧಿಕಾರಿ ಎಚ್.ಉಮೇಶ್, ನಾಯಕನಹಟ್ಟಿ ಗ್ರಾಮ ಆಡಳಿತಾಧಿಕಾರಿ ಎಚ್.ಪ್ರದೀಪ್‌ಕುಮಾರ್ ವಿಜಯದ ನಗೆಬೀರಿದಿದ್ದಾರೆ. ಕಸಬಾ ಗ್ರಾಮ ಆಡಳಿತಾಧಿಕಾರಿ ಎಂ.ಪ್ರಕಾಶ್ ಹಾಗೂ ಪ್ರದೀಪ್‌ಕುಮಾರ್ ತಲಾ ೫೩ ಮತಗಳನ್ನು ಪಡೆದಿದ್ದು, ಡೀಪ್ ಮೂಲಕ ಎಚ್.ಪ್ರದೀಪ್‌ಕುಮಾರ್ ಆಯ್ಕೆಯಾದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್ ಇಲಾಖೆಯಲ್ಲಿ ೯೦ ಮತಗಳಿದ್ದು, ೫೧ ಮತಗಳನ್ನು ಪಡೆಯುವ ಮೂಲಕ ನಗರಂಗೆರೆ ಪಿಡಿಓ ಎಂ.ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ. ಇವರ ಎದುರಾಳಿ ರಜನಿ, ತಿಮ್ಮರಾಜು, ಗುಂಡಪ್ಪ ಅಲ್ಪಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಆರೋಗ್ಯ ಇಲಾಖೆಯಿಂದ ಕೆ.ಒ.ಮಂಜುನಾಥ, ಬಿ.ಎಚ್.ರಾಜು, ಎಸ್.ಬಿ.ತಿಪ್ಪೇಸ್ವಾಮಿ, ಬಸವರಾಜು ಆಯ್ಕೆಯಾಗಿದ್ದಾರೆ. ಬಿಸಿಎಂನಿಂದ ಮಂಜುನಾಥ, ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಎಂ.ಶ್ರೀನಿವಾಸ್, ನ್ಯಾಯಾಂಗ ಇಲಾಖೆ ಬಿ.ಟಿ.ಮಲ್ಲಯ್ಯ, ಪ್ರೌಢಶಾಲಾ ವಿಭಾಗದಿಂದ ಸಿ.ಟಿ.ವೀರೇಶ್, ಅಶೋಕ್‌ಕುಮಾರ್, ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ಎಂ.ಶ್ರೀನಿವಾಸ್ ಆಯ್ಕೆಯಾದರು.ಅವಿರೋಧ ಆಯ್ಕೆ: ಕೃಷಿ ಇಲಾಖೆಯಿಂದ ಎಂ.ತಿಪ್ಪೇಸ್ವಾಮಿ, ಪಶು ಇಲಾಖೆಯಿಂದ ಸಿ.ರುದ್ರಮುನಿ, ಲೋಕೋಪಯೋಗಿ ಇಲಾಖೆ ಪಿ.ಬಿ.ಸಿದ್ದಪ್ಪ, ಪಂಚಾಯಿತ್‌ರಾಜ್ ಇಲಾಖೆ-೧ ಸಿ.ಜೆ.ಸುರೇಶ್‌ಬಾಬು, ಗ್ರಾಮೀಣಾಭಿವೃದ್ಧಿ ಇಲಾಖೆ ಡಿ.ಕೆ.ಸುರೇಶ್, ಕ್ಷೇತ್ರ ಶಿಕ್ಷಣ ಆಡಳಿತ ಸುವರ್ಣಮ್ಮ, ಸಮಾಜಕಲ್ಯಾಣ ಮತ್ತು ಪರಿಶಿಷ್ಟ ವರ್ಗ ಇಲಾಖೆ-೧ ಪಿ.ರಮೇಶ್, ಅರಣ್ಯ ಇಲಾಖೆ ಕೆ.ಅಶೋಕ್‌ಕುಮಾರ್, ಆರೋಗ್ಯ ಇಲಾಖೆ ಬೋರಯ್ಯ, ಖಜಾನೆ ಮತ್ತು ಕಾರ್ಮಿಕ ಇಲಾಖೆ ಬಿ.ಎಂ.ಶ್ವೇತ, ಭೂಮಾಪನ ಬಿ.ಎಸ್.ಬಾಬು, ಪಂಚಾಯಿತ್‌ರಾಜ್‌ನಿಂದ ಎಂ.ಮಂಜುನಾಥ, ಸಿಡಿಪಿಒನಿಂದ ಡಿ.ಎಚ್.ರಜಾಕ್‌ಸಾಬ್, ಮೀನುಗಾರಿಕೆಯಿಂದ ಬಿ.ಸಿ.ಪ್ರಸಾದ್, ಆಹಾರ ಮತ್ತು ಮಾರುಕಟ್ಟೆ ಸಿ.ವೆಂಟಕಲಕ್ಷ್ಮಿ, ಅಬಕಾರಿಯಿಂದ ಪೇದೆ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.