ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಳೆದ ಅ.27ರಂದು ಪ್ರಕಟಿಸಲಾದ ಕರಡು ಪಟ್ಟಿಯಂತೆ ಕಲಬುರಗಿ ಜಿಲ್ಲೆಯಲ್ಲಿ 11,29,472 ಪುರುಷರು, 11,04,813 ಮಹಿಳೆಯರು ಹಾಗೂ ಇತರೆ 324 ಸೇರಿ ಒಟ್ಟಾರೆ 22,34,609 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದರು.
ಪ್ರಕಟಿತ ಕರಡು ಪಟ್ಟಿಗೆ ಅಕ್ಷೇಪಣೆ ಸಲ್ಲಿಸಲು ಜನವರಿ 12ರ ವರೆಗೆ ಅವಕಾಶ ನೀಡಲಾಗಿತ್ತು. ಸ್ವೀಕೃತ ಅಕ್ಷೇಪಣೆಯನ್ನು ವಿಲೇವಾರಿ ಮಾಡಿ ಇಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಕ್ಷೇಪಣೆ ಅವಧಿಯಲ್ಲಿ 34,335 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರು ಚುನಾವಣಾ ಆಯೋಗದ ವೆಬ್‍ಸೈಟ್ https://ceo.karnataka.gov.in/en ಹಾಗೂ ಜಿಲ್ಲೆಯ ವೆಬ್‍ಸೈಟ್ https://kalaburagi.nic.in/en ನಲ್ಲಿ ವೀಕ್ಷಿಸಬಹುದಾಗಿದೆ.
1) ಅಫಜಲ್ಪುರ- 1,19,836 ಪುರುಷ, 1,14,334 ಮಹಿಳೆ, ಇತರೆ 19 ಸೇರಿ 2,34,189,
3) ಚಿತ್ತಾಪುರ- 1,21,011 ಪುರುಷ, 1,21,732 ಮಹಿಳೆ, ಇತರೆ 14 ಸೇರಿ 2,42,757,
5) ಚಿಂಚೋಳಿ- 1,05,722 ಪುರುಷ, 1,02,551 ಮಹಿಳೆ, ಇತರೆ 15 ಸೇರಿ 2,08,288
7) ಗುಲ್ಬರ್ಗ ದಕ್ಷಿಣ- 1,40,703 ಪುರುಷ, 1,43,844 ಮಹಿಳೆ, ಇತರೆ 54 ಸೇರಿ 2,84,601,
9) ಆಳಂದ- 1,29,050 ಪುರುಷ, 1,19,250 ಮಹಿಳೆ, ಇತರೆ 39 ಸೇರಿ 2,48,339