ಹೂವಿನಹಡಗಲಿ:
ತಾಲೂಕಿನ ಹೊಳಗುಂದಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ತಡರಾತ್ರಿ ಸಿಡಿಲು ಬಡಿದು 22 ಮೇಕೆಗಳು ಮೃತಪಟ್ಟಿರುವ ಘಟನೆ ಜರುಗಿದೆ.ಹೊಳಗುಂದಿ ಗ್ರಾಮದ ಅಳವಂಡಿ ಯಲ್ಲಪ್ಪ ಎಂಬವರಿಗೆ ಸೇರಿದ್ದ ಮೇಕೆಗಳನ್ನು ಅಡವಿಯಲ್ಲಿ ಮೇಯಿಸಲು ಹೋಗಿದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು 22 ಮೇಕೆಗಳು ಮೃತಪಟ್ಟಿವೆ. ಸ್ಥಳಕ್ಕೆಶಾಸಕ ಕೃಷ್ಣನಾಯ್ಕ, ತಹಸೀಲ್ದಾರ್ ಕೆ. ಶರಣಮ್ಮ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.