ಕನ್ನಡನಾಮ ಫಲಕ ಅಳವಡಿಕೆಗೆ 23 ಸಾವಿರ ಅಂಗಡಿಗಳ ನಿರ್ಲಕ್ಷ್ಯ

KannadaprabhaNewsNetwork |  
Published : Feb 10, 2024, 01:45 AM ISTUpdated : Feb 10, 2024, 12:19 PM IST
Kannada Name Plate

ಸಾರಾಂಶ

ನಗರದಲ್ಲಿ ಶೇ.100ರಷ್ಟು ಶೇ.60 ಕನ್ನಡ ನಾಮ ಫಲಕ ಅಳವಡಿಕೆ ಕಾರ್ಯವಾಗಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೋಟಿಸ್‌ ನೀಡಿದ ಪೈಕಿ ಇನ್ನೂ 23 ಸಾವಿರಕ್ಕೂ ಅಧಿಕ ವ್ಯಾಪಾರಿಗಳು ಕನ್ನಡ ನಾಮಫಲಕ ಅಳವಡಿಕೆ ಮಾಡಿಲ್ಲ.ಕಳೆದ ಒಂದೂವರೆ ತಿಂಗಳಿನಿಂದ ನಗರದಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸದೇ ಇರುವ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗುತ್ತಿದೆ. ಈವರೆಗೆ ಒಟ್ಟು 49 ಸಾವಿರಕ್ಕೂ ಅಧಿಕ ವ್ಯಾಪಾರಿಗಳಿಗೆ ನೋಟಿಸ್‌ ನೀಡಲಾಗಿದೆ.

ಈವರೆಗೆ ಕೇವಲ 27 ಸಾವಿರ ವ್ಯಾಪಾರಿಗಳು ಮಾತ್ರ ಶೇ.60ರಷ್ಟು ಕನ್ನಡ ಭಾಷೆ ಇರುವ ನಾಮ ಫಲಕವನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಇನ್ನುಳಿದ 23 ಸಾವಿರ ವ್ಯಾಪಾರಿಗಳು ಬಿಬಿಎಂಪಿ ನೀಡಿರುವ ನೋಟಿಸ್‌ ಮನ್ನಣೆ ನೀಡಿಲ್ಲ ಹಾಗೂ ಕನ್ನಡ ನಾಮ ಫಲಕ ಅಳವಡಿಕೆ ಮಾಡಿಕೊಳ್ಳುವುದಕ್ಕೆ ಮುಂದಾಗಿಲ್ಲ.ಪಾಲಿಕೆಯಿಂದಲೇ ಅನ್ಯ ಭಾಷೆಯ ಫಲಕ ತೆರವು

ನಗರದಲ್ಲಿ ಶೇ.100ರಷ್ಟು ಶೇ.60 ಕನ್ನಡ ನಾಮ ಫಲಕ ಅಳವಡಿಕೆ ಕಾರ್ಯವಾಗಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕನ್ನಡ ಭಾಷೆ ಇರುವ ನಾಮಫಲಕ ಅಳವಡಿಕೆ ನೋಟಿಸ್‌ ನೀಡಿ ಗಡುವು ಮುಕ್ತಾಯಗೊಂಡ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿಯ ಆಯಾ ವಲಯ ಅಧಿಕಾರಿಗಳು ಭೇಟಿ ನೀಡಿ ಅನ್ಯ ಭಾಷೆಯ ನಾಮಫಲಕ ತೆರವು ಮಾಡುತ್ತಿದ್ದಾರೆ. 

ಜತೆಗೆ, ಶೇ.60 ರಷ್ಟು ಕನ್ನಡ ಇರುವ ನಾಮಫಲಕ ಅಳವಡಿಕೆ ಮಾಡದೇ ನಿಯಮ ಉಲ್ಲಂಘಿಸಿದರೆ ಉದ್ದಿಮೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡುತ್ತಿದ್ದಾರೆ.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ