ನ.23, 24 ರಂದು ವಿಗ್ರಹ ಪ್ರತಿಷ್ಠಾಪನೆ, ಆನೆ(ಗಜ) ಮೆರವಣಿಗೆ

KannadaprabhaNewsNetwork |  
Published : Nov 22, 2024, 01:18 AM IST
21ಕೆಎಂಎನ್ ಡಿ20 | Kannada Prabha

ಸಾರಾಂಶ

ಅಣ್ಣೂರು ಗ್ರಾಮದಲ್ಲಿ ನ.23, 24 ರಂದು ಶ್ರೀ ಹಟ್ಟಿಮಾರಮ್ಮ, ಶ್ರೀಸಿದ್ದೇಶ್ವರಸ್ವಾಮಿ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವ ಅಂಗವಾಗಿ ಆನೆ ಮೆರವಣಿಗೆ ನಡೆಯಲಿದೆ. ನ.23 ರಂದು ಸಂಜೆ ಆಲಯದಲ್ಲಿ ಪುಣ್ಯಾಹ, ರಕ್ಷಾಬಂಧನ, ಗಣಪತಿ ಹೋಮ, ನವಗ್ರಹ ಹೋಮ, ಮೂರ್ತಿಗೆ ಹೋಮ, ಇತ್ಯಾಥಿ ಪೂಜಾ ಕೈಂಕರ್ಯಗಳು ಜರುಗಲಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಣ್ಣೂರು ಗ್ರಾಮದಲ್ಲಿ ನ.23, 24 ರಂದು ಶ್ರೀ ಹಟ್ಟಿಮಾರಮ್ಮ, ಶ್ರೀಸಿದ್ದೇಶ್ವರಸ್ವಾಮಿ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವ ಅಂಗವಾಗಿ ಆನೆ ಮೆರವಣಿಗೆ ನಡೆಯಲಿದೆ.

ಗ್ರಾಮದ ಶ್ರೀಹಟ್ಟಿಮಾರಮ್ಮ ಹಾಗೂ ಶ್ರೀಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಮುಗಿದಿದೆ. ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ನ.23 ರಂದು ಸಂಜೆ ಆಲಯದಲ್ಲಿ ಪುಣ್ಯಾಹ, ರಕ್ಷಾಬಂಧನ, ಗಣಪತಿ ಹೋಮ, ನವಗ್ರಹ ಹೋಮ, ಮೂರ್ತಿಗೆ ಹೋಮ, ಇತ್ಯಾಥಿ ಪೂಜಾ ಕೈಂಕರ್ಯಗಳು ಜರುಗಲಿದೆ.

ಸಂಜೆ 5 ಗಂಟೆಗೆ ರಾಮ ಮಂದಿರದಿಂದ ಗಜ(ಆನೆ) ಮೆರವಣಿಗೆ ಸಮೇತ ಗ್ರಾಮ ಪ್ರದಕ್ಷಿಣೆ, ಶ್ರೀಅಮ್ಮನವರ ಪೂಜೆ, ಶ್ರೀ ಸಿದ್ದೇಶ್ವರಸ್ವಾಮಿ ಅವರ ಸತ್ತಿಗೆ ಸಮೇತ ಆಲಯ ಪ್ರವೇಶ ನಡೆಯಲಿದೆ.

ನ.24 ರಂದು ಬೆಳಗ್ಗೆ ಶ್ರೀಅಮ್ಮನವರ ಪ್ರಾಣಪ್ರತಿಷ್ಠೆ, ಮಹಾಭಿಷೇಕ, ಅಲಂಕಾರ ಪೂಜೆ ಸೇರಿದಂತೆ ಇತ್ಯಾಧಿ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ಗ್ರಾಮದ ಯಜಮಾನರು, ಮುಖಂಡರು ತಿಳಿಸಿದ್ದಾರೆ.

ನ.23ರಂದು ಶುಷ್ಕ ದಿನ ಘೋಷಣೆ

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಮತದಾನ ಕ್ಷೇತ್ರಗಳ 5 ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ನ.21 ರ ಸಂಜೆ 5 ಗಂಟೆಯಿಂದ ನ.23 ರ ರಾತ್ರಿ 8 ರವರೆಗೆ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‌ಗಳನ್ನು ಮುಚ್ಚುವಂತೆ ಹಾಗೂ ಈ ಅವಧಿಯಲ್ಲಿ ಮದ್ಯ ತಯಾರಿಕಾ ಘಟಕಗಳು, ಮದ್ಯ ಮಾರಾಟ, ಹಂಚಿಕೆ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಶುಷ್ಕ ದಿನಗಳೆಂದು ಆದೇಶ ಹೊರಡಿಸಲಾಗಿದೆ.

ಸಂತೆ ಜಾತ್ರೆ ನಿಷೇಧ: ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಯನ್ನು ಖಚಿತಪಡಿಸುವುದಕ್ಕಾಗಿ ಮತದಾನಕ್ಕೆ ಅವಕಾಶ ಕಲ್ಪಿಸುವ ಹಾಗೂ ಮತದಾನ ಕಾರ್ಯವನ್ನು ಸುಗಮವಾಗಿ ನಡೆಸುವ ಸಲುವಾಗಿ ನ. 23 ರಂದು ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಯ ಪ್ರದೇಶಗಳ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ