ಕನ್ನಡಪ್ರಭ ವಾರ್ತೆ ಮೂಡಲಗಿ
ಮಲ್ಲಕಂಬ ಕಸರತ್ತಿನ ಕಣಜ ಎಂದೇ ಹೆಸರಾದ ಅಪರೂಪದ ತಾಲೂಕಿನ ಅವರಾದಿಯ ಶ್ರೀ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕೋಡಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಮಲ್ಲಕಂಬ ಸ್ಪರ್ಧೆ ಜರುಗಿತು.ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 150ಕ್ಕೂ ಅಧಿಕ ಬಾಲಕ, ಬಾಲಕಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ನಾನಾ ಕಸರತ್ತು, ಕೌಶಲ್ಯ ಪ್ರದರ್ಶಿಸಿದರು. ಸಾಹಸ ಕ್ರೀಡೆಯಲ್ಲಿ ಪಿರ್‍ಯಾಮಿಡ್ ನಿರ್ಮಿಸಿ ಗಮನ ಸೆಳೆದರು. ಪ್ರತಿ ವಿಭಾಗದಲ್ಲಿ ತಲಾ 6 ವಿದ್ಯಾರ್ಥಿಗಳಂತೆ ಒಟ್ಟು 24 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ರಾಜ್ಯಮಟ್ಟಕ್ಕೆ 24 ವಿದ್ಯಾರ್ಥಿಗಳು ಆಯ್ಕೆ: 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅವರಾದಿಯ ಮಿಥುನ ಹೂಗಾರ, ರಾಘವೇಂದ್ರ ಅಂಕಲಗಿ, ಮಲ್ಲಿಕಾರ್ಜುನ ಕಾಳಶೆಟ್ಟಿ, ಮೂಡಲಗಿಯ ಪ್ರವೀಣ ಮರನೂರ, ಮಣಿಕಂಠ ಪೂಜೇರಿ, ಮಲ್ಲಿಕಾರ್ಜುನ ಹೋಳಿ, 14 ವರ್ಷದೊಳಗಿನ ಬಾಲಕಿಯರಲ್ಲಿ ಅವರಾದಿಯ ಕವಿತಾ ಕಾಳಶೆಟ್ಟಿ, ದೀಪಾ ಬಡಿಗೇರ, ಸುಮಂಗಲಾ ಕಂಬಳಿ, ಭುವನೇಶ್ವರಿ ಹೋಳಿ, ಪ್ರಿಯಾ ಹಮ್ಮಿದಡ್ಡಿ, ಮಾಂಜ್ರಿಯ ಆರಾಧ್ಯ ಸಿಂಗಾಡಿ ಆಯ್ಕೆಯಾಗಿದ್ದಾರೆ.17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅವರಾದಿಯ ವಿನಯ ಮೇತ್ರಿ, ವಿನೋದ ಪೂಜೇರಿ, ಪ್ರಜ್ವಲ ಪಾಟೀಲ, ಮೂಡಲಗಿಯ ಶ್ರೀಶೈಲ ಕುಬಕಡ್ಡಿ, ಲಕ್ಷ್ಮಣ ಕರೋಳಿ, ರಮೇಶ ದುಬಾಜ್, 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅವರಾದಿಯ ಸೌಜನ್ಯ ಹಿರೇಮಠ, ಸವಿತಾ ಕಾಳಶೆಟ್ಟಿ, ಸೃಷ್ಟಿ ಪಾಟೀಲ, ಶಿಲ್ಪಾ ಮಹಾಲಿಂಗಪುರ, ಪಿಜಿ ಹುಣಶ್ಯಾಳದ ಸಮೀಕ್ಷಾ ಪಾಟೀಲ, ಮಾಂಜ್ರಿಯ ಅನನ್ಯ ಭಗತ್ ಆಯ್ಕೆಯಾಗಿದ್ದಾರೆ.
ಶಿವಲಿಂಗಯ್ಯ ಹಿರೇಮಠ, ಸಂಗಯ್ಯ ಮಠಪತಿ ಸಾನ್ನಿಧ್ಯದಲ್ಲಿ ಶ್ರೀ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಂ. ಪಾಟೀಲ ಉದ್ಘಾಟಿಸಿದರು. ಬಿಇಒ ಅಜಿತ ಮನ್ನಿಕೇರಿ, ತಾಪಂ ಇಒ ಎಫ್.ಜಿ. ಚನ್ನನವರ, ಎನ್. ಆರ್. ನಾಡಗೌಡ್ರ, ಗ್ರಾಪಂ ಅಧ್ಯಕ್ಷ ಎಚ್.ವಿ.ಚನ್ನಾಳ, ಭೀಮಪ್ಪ ಕುಕ್ಕಡಿ, ಅಲ್ಲಪ್ಪ ವಾಲಿಕಾರ, ಎಚ್.ಎಸ್. ಪಾಟೀಲ, ಸಿ.ಎಲ್. ನಾಯಿಕ, ಮೌನೇಶ ಕುಂಬಾರ, ಹನಮಂತ ಕುಕ್ಕಡಿ, ಗ್ರಾಪಂ ಸದಸ್ಯ ಎಂ.ಜಿ. ಪಾಟೀಲ, ಬಾಲು ಬೇಡರ, ಕೆ.ಎ.ಬಾಗವಾನ, ಪರಶುರಾ, ಮುಖ್ಯ ಶಿಕ್ಷಕ ಎ.ಪಿ.ಬಿರಾದಾರಪಾಟೀಲ, ವೈ.ಎಲ್.ದೊಡಮನಿ, ಎಂ.ಬಿ.ಪಾಟೀಲ, ಎ.ಬಿ.ಹುಕ್ಕೇರಿ ಇತರರು ಇದ್ದರು.