ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸನ್ 2025-26ನೇ ಸಾಲಿನ ಪುರಸಭೆಯ ₹3,20,000/-ಗಳ ಉಳಿತಾಯ ಆಯವ್ಯಯವನ್ನು ಪುರಸಭೆ ಅಧ್ಯಕ್ಷ ವಿಜಯ ಶ್ರೀಶೈಲ ಬೋಳನ್ನವರ ಮಂಡಿಸಿದರು.ಪುರಸಭೆಗೆ ಬರತಕ್ಕಂತಹ ಸಂಪನ್ಮೂಲಗಳನ್ನು ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳ ಮತ್ತು ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿರುವ ಅನುದಾನಗಳನ್ನು ಕ್ರೂಢೀಕರಿಸಿಕೊಂಡು ಪಟ್ಟಣ ಪ್ರದೇಶದ ನಾಗರೀಕರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಕುರಿತು ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಹಾಗೂ ಇತರೆ ಹಿಂದುಳಿದ ವರ್ಗದ ಜನರಿಗಾಗಿ ಮತ್ತು ವಿಕಲಚೇತನರ ಕಲ್ಯಾಣಕ್ಕಾಗಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡು ಆಯವ್ಯಯ ಪತ್ರಿಕೆಯನ್ನು ತಯಾರಿಸಲಾಯಿತು.ಪುರಸಭೆ ಅಧ್ಯಕ್ಷ ವಿಜಯ ಶ್ರೀಶೈಲ ಬೋಳನ್ನವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ 2025-26ನೇ ಸಾಲಿನ ₹3,20,000 ಗಳ ಉಳಿತಾಯದ ಆಯವ್ಯಯವನ್ನು ಮಾಜಿ ಸ್ಥಾಯಿ ಸಮಿತಿ ಚೇರಮನ್ ಹಾಗೂ ಹಾಲಿ ಸದಸ್ಯ ಅರ್ಜುನ ಕಲಕುಟಕರ ಸಭೆಯಲ್ಲಿ ವಿವರಿಸಿದರು. ಒಟ್ಟು ಆದಾಯ ₹32.18 ಕೋಟಿಗಳಲ್ಲಿ ಒಟ್ಟು ಖರ್ಚು ₹32.15 ಕೋಟಿಗಳು ಖರ್ಚಾಗಿ ₹3.20 ಲಕ್ಷಗಳ ಉಳಿತಾಯದ ಅಂದಾಜು ಪತ್ರಿಕೆಯನ್ನು ತಯಾರಿಸಲಾಯಿತು. ಸದರಿ ಅಂದಾಜು ಪತ್ರಿಕೆಗೆ ಪುರಸಭೆ ಅಧ್ಯಕ್ಷ ಅಧ್ಯಕ್ಷತೆಯ ಸಭೆಯಲ್ಲಿ ಸರ್ವಾನುಮತದಿಂದ ಮಂಜೂರಾತಿ ನೀಡಿತು.ಸದರಿ ಆಯವ್ಯಯದಲ್ಲಿ ಎಸ್.ಎಫ್.ಸಿ ಮತ್ತು ಸ್ಥಳೀಯ ನಿಧಿಯಡಿ ಶೇ.24.10 ರಡಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ₹18.32 ಲಕ್ಷಗಳನ್ನು ಕಾಯ್ದಿರಿಸಿದ್ದು, ಶೇ.7.25ರಡಿ (ಇತರೆ ಹಿಂದುಳಿದ ವರ್ಗಗಳ ಬಡತನ ನಿರ್ಮೂಲನೆ) ಕಾರ್ಯಕ್ರಮಕ್ಕಾಗಿ ₹2.20 ಲಕ್ಷಗಳನ್ನು ಹಾಗೂ ಶೇ.5ರಡಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕಾಗಿ ₹1.52 ಲಕ್ಷಗಳ ಅನುದಾನವನ್ನು ಕಾಯ್ದಿರಿಸಿ ಪುರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಾದ ರಸ್ತೆ, ಚರಂಡಿಗೆ ₹111.55 ಲಕ್ಷಗಳನ್ನು, ನೀರು ಸರಬರಾಜು ನಿರ್ವಹಣೆಗೆ ₹323.00 ಲಕ್ಷಗಳನ್ನು, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಹಾಗೂ ನಿರ್ವಹಣೆ ಸಲುವಾಗಿ ₹16.55 ಲಕ್ಷಗಳನ್ನು, ಘನತ್ಯಾಜ್ಯ ವಸ್ತು ನಿರ್ವಹಣೆಗೆ ₹216.00 ಲಕ್ಷಗಳನ್ನು, ಬೀದಿ ದೀಪದ ನಿರ್ವಹಣೆಗೆ ₹94.40 ಲಕ್ಷಗಳನ್ನು, ಪುರಸಭೆಯ ಅಧೀನದಲ್ಲಿರುವ ಎಂ.ಕೆ.ಸಿ.ಆರ್. & ಎಂ.ಎಸ್.ಎಸ್.ಆರ್ ಪ್ರೌಢಶಾಲೆಗಳ ಅಭಿವೃದ್ಧಿಗೆ ₹15.00 ಲಕ್ಷಗಳನ್ನು, ಪುರಸಭೆಯ ವ್ಯಾಪ್ತಿಯ ಉದ್ಯಾನವನಗಳ ಅಭಿವೃದ್ಧಿಗೆ ₹26.55 ಲಕ್ಷಗಳನ್ನು ಕಾಯ್ದಿರಿಸಿ ಪುರಸಭೆಯ ಸರ್ವಾಂಗೀಣ ಅಭಿವೃದ್ಧಿಗೊಳಿಸಲು ವ್ಯಯಿಸಲಾಗುವುದು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 24/7 ಕುಡಿಯುವ ನೀರಿನ ಕಾಮಗಾರಿಯು ಶೇ.95 ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದ ಕಾಮಗಾರಿಯನ್ನು 2 ತಿಂಗಳ ಒಳಗಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ನೀರು ಪೂರೈಕೆಗೆ ಚಾಲನೆ ನೀಡಲಾಗುವುದು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಯೋಜನೆಯು ಸಹ ಶೇ.95 ರಷ್ಟು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲಾಗುವುದು ಹಾಗೂ ಪುರಸಭೆ ವ್ಯಾಪ್ತಿಯ ಅಂಬೇಡ್ಕರ ನಗರ, ಇಂದಿರಾ ನಗರ ಹಾಗೂ ಇನ್ನೀತರ ಪುರಸಭೆ ಜಾಗಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಪುರಸಭೆಗೆ ಆಧಾಯದ ಮೂಲ ಸೃಷ್ಟಿ ಜೊತೆಗೆ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿನ ದೊಡ್ಡಕೆರೆಯನ್ನು ಪ್ರವಾಸ ಸ್ಥಾನವಾಗಿ ಅಭಿವೃದ್ಧಿಪಡಿಸಲಾಗಿದೆ. ಪುರಸಭೆ ಅಧಿನದಲ್ಲಿರುವ ಎಂ.ಎಸ್.ಎಸ್.ಆರ್ ಮತ್ತು ಎಂ.ಕೆ.ಸಿ.ಆರ್. ಪ್ರೌಢಶಾಲೆಗಳ ಹೊಸಕಟ್ಟಡ ನಿರ್ಮಾಣ, ದುರಸ್ಥಿ ಕಾಮಗಾರಿ ಮತ್ತು ಓದುವ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಪುರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆ ಜಾಗದಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಹಸಿರು ಇಂಧನ ತಯಾರಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸದರಿ ಯೋಜನೆಯಿಂದ ಪುರಸಭೆ ಘನತ್ಯಾಜ್ಯ ವೈಜ್ಞಾನಿಕವಾಗಿ ನಿರ್ವಹಣೆಯಾಗುವುದಲ್ಲದೆ. ತ್ಯಾಜ್ಯ ಸಂಸ್ಕರಣೆಗೆ ತಗಲುವ ವೆಚ್ಛವು ಪುರಸಭೆಗೆ ಉಳಿತಾಯವಾಗಲಿದೆ. ಪುರಸಭೆಯ 2025-26ನೇ ಸಾಲಿನ ಅಂದಾಜು ಆಯವ್ಯಯ ಪತ್ರಿಕೆಯನ್ನು ಪರಿಶೀಲಿಸಿದ ಸಭೆಯು ಸರ್ವಾನುಮತದಿಂದ ಮಂಜೂರಾತಿ ನೀಡಿತು.ಶಾಸಕ ಮಹಾಂತೇಶ ಕೌಜಲಗಿ, ಮುಖ್ಯಾಧಿಕಾರಿ ವಿರೇಶ ಹಸಬಿ, ಉಪಾಧ್ಯಕ್ಷ ಬುಡ್ಡೇಸಾಬ ಶಿರಸಂಗಿ, ಸ್ಥಾಯಿ ಸಮಿತಿ ಚೇರಮನ್‌ರಾದ ಹೇಮಲತಾ ಹಿರೇಮಠ, ಸದಸ್ಯರಾದ ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮನ್ನವರ, ರಾಜಶೇಖರ ಮೂಗಿ, ಶಿವಬಸಪ್ಪ ಕುಡಸೋಮಣ್ಣವರ, ಅರ್ಜುನ ಕಲಕುಟಕರ, ಶಿವಾನಂದ ಕೋಲಕಾರ, ಸಾಗರ ಭಾವಿಮನಿ, ಸುಧೀರ ವಾಲಿ, ಸದರುದ್ದೀನ್ ಅತ್ತಾರ, ಅಂಬಿಕಾ ಕೊಟಬಾಗಿ, ಶಶಿಕಲಾ ಹೊಸಮನಿ, ಅಮಿರಬಿ ಬಾಗವಾನ, ಪ್ರೇಮಾ ಇಂಚಲ, ಉಮಾ ಹೊಸೂರ, ದಿಲಶಾದ್ ನದಾಫ ಹಾಗೂ ಕಚೇರಿ ವ್ಯವಸ್ಥಾಪಕ ಎಂ.ಐ.ಕುಟ್ರಿ ಕಿರಿಯ ಅಭಿಯಂತರರಾ ಜಿ.ಜಿ.ಮಹಾಳಂಕ, ಬಸನಗೌಡ ಪಾಟೀಲ, ಕಂದಾಯ ಅಧಿಕಾರಿ ಎಸ್.ಎಸ್.ಹಳ್ಳೂರ ಪ್ರ.ದ.ಸ. ಬಿ.ಐ.ಗುಡಿಮನಿ, ಅಕೌಂಟಂಟ್ ಸೋನಾಲಿ ಕೆ.ಬುಬನಾಳೆ, ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಎನ್.ಪಾಟೀಲ ಹಾಗೂ ಸರ್ವ ಸಿಬ್ಬಂದಿ ಉಪಸ್ಥಿತರಿದ್ದರು. 24ಬಿಎಲ್‌ಎಚ್1