ಕಕ್ಕಬ್ಬೆ ಸಹಕಾರ ಸಂಘಕ್ಕೆ 25.04 ಲಕ್ಷ ರು. ಲಾಭ

KannadaprabhaNewsNetwork |  
Published : Sep 07, 2024, 01:41 AM IST
-ಎನ್ ಪಿ ಕೆ-3.ಕಕ್ಕಬ್ಬೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಸಭಾಂಗಣದಲ್ಲಿ ಶುಕ್ರವಾರಆಯೋಜಿಸಿದ  ಸುದ್ಧಿಗೋಷ್ಟಿಯಲ್ಲಿ ಉಪಸ್ಥಿತರಿದ್ದವರು. | Kannada Prabha

ಸಾರಾಂಶ

ಸಂಘದ ಮಹಾಸಭೆಯು ಸೆ.23ರಂದು ಸಂಘದ ಸಭಾಂಗಣದಲ್ಲಿ ಜರುಗಲಿದ್ದು, ಸಂಘದ ಎಲ್ಲ ಸದಸ್ಯರು ಇದರಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಸಂಘದ ಶ್ರೇಯಾಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ರ ಸಾಲಿನಲ್ಲಿ 25.04 ಲಕ್ಷ ರು. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ಎ. ತಮ್ಮಯ್ಯ ತಿಳಿಸಿದರು.

ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 1137 ಜನ ಸದಸ್ಯರಿಂದ 103.36 ಲಕ್ಷ ರು. ಪಾಲು ಹಣ ಇರುತ್ತದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ 17 32.91 ಲಕ್ಷ ರು.ಗಳಾರುತ್ತವೆ ಎಂದರು.

ಘದಿಂದ 339 ಜನ ರೈತರಿಗೆ ಕೆಸಿಸಿ ಸಾಲ 780.54 ಲಕ್ಷ ರು. ವಿತರಿಸಲಾಗಿದೆ. ಜಾಮೀನು ಸಾಲ 7450 ಲಕ್ಷ ರು., ಗೊಬ್ಬರ ಸಾಲ 35.66 ಲಕ್ಷ ರು.ಗಳನ್ನು ವಿತರಿಸಲಾಗಿದೆ. ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಟ್ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಸಂಘದಲ್ಲಿ ಗ್ರಾಹಕರಿಗೆ ಗೊಬ್ಬರ ಕೃಷಿ ಉಪಕರಣ ಮುಂತಾದ ಸಾಮಗ್ರಿಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಸಂಘದ ಮಹಾಸಭೆಯು ಸೆ.23ರಂದು ಸಂಘದ ಸಭಾಂಗಣದಲ್ಲಿ ಜರುಗಲಿದ್ದು, ಸಂಘದ ಎಲ್ಲ ಸದಸ್ಯರು ಇದರಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಸಂಘದ ಶ್ರೇಯಾಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಪರದಂಡ ಪಿ. ಪ್ರಮೀಳಾ ಪೆಮ್ಮಯ್ಯ, ನಿರ್ದೇಶಕರಾದ ಅಲ್ಲಾರಂಡ ಎಸ್. ಅಯ್ಯಪ್ಪ, ಬಡಕಡ ಎಂ ಬೆಳ್ಳಿಯಪ್ಪ, ಕಲಿಯಂಡ ಬೋಪಣ್ಣ, ನೀಡುಮಂಡ ಹರೀಶ್‌ ಪೂವಯ್ಯ, ನಂಬಡಮಂಡ ಬಿ. ಸುನೀತಾ, ಎ.ಎಸ್. ಲಕ್ಷ್ಮಣ, ಪಾಲೇ ಟಿ. ಕಾರ್ಯಪ್ಪ, ಕುಡಿಯರ ಬಿ. ಅಚ್ಚಯ್ಯ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳಾ ಹಾಗೂ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ