ಕನ್ನಡಪ್ರಭ ವಾರ್ತೆ ಮದ್ದೂರು
ಎ ತರಗತಿಯ 5 ಸ್ಥಾನಗಳ ಪೈಕಿ ಆತಗೂರು ಹೋಬಳಿ ಕ್ಷೇತ್ರದಿಂದ 2 ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಂಕರಲಿಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ 4 ಕ್ಷೇತ್ರಗಳ ಪೈಕಿ ಕಸಬಾ ಹೋಬಳಿಯ 1 ಕ್ಷೇತ್ರಕ್ಕೆ ದೇವರಾಜು, ಶಿವಚರಣ್,(ಸಂದೀಪ್) ಕೊಪ್ಪ ಹೋಬಳಿಯಿಂದ ಕರಿಯಪ್ಪ, ದಯಾನಂದ್, ಸಿ.ಎ.ಕೆರೆ ಕ್ಷೇತ್ರದ 2 ಸ್ಥಾನಗಳಿಗೆ 1 ಕ್ಷೇತ್ರದಿಂದ ಮಹೇಂದ್ರ, ತಿಮ್ಮರಾಜು, 2ನೇ ಕ್ಷೇತ್ರದಿಂದ ಎಂ.ಡಿ.ಪ್ರಕಾಶ್ ಮತ್ತು ಲಕ್ಷ್ಮಿ ಸೇರಿ 4 ಸ್ಥಾನಗಳಿಗೆ 8 ಮಂದಿ ಕಣದಲ್ಲಿದ್ದಾರೆ.ಬಿ.ತರಗತಿಯಿಂದ ನಿಗದಿಯಾದ 7 ಸ್ಥಾನಗಳಲ್ಲಿ ಮಹಿಳಾ ಮೀಸಲು 2 ಸ್ಥಾನಕ್ಕೆ ಪಿ.ಕೆ.ಕಾವ್ಯ, ಎಂ.ಎಸ್.ಶಶಿಕಲಾ, ಕೆ.ಎಚ್.ನಾಗಮ್ಮ, ಕೆ.ಎಂ.ಅಮೂಲ್ಯ, ಕೆ.ಎಚ್.ಇಂದಿರಾ, ಪರಿಶಿಷ್ಟ ಜಾತಿ 1 ಸ್ಥಾನಕ್ಕೆ ವೈ.ಕೆ.ದ್ಯಾವಯ್ಯ, ಮರಿದೇವರು, ಸಿದ್ದರಾಮು, ಬಿ.ಎಸ್.ಗೋವಿಂದರಾಜು, ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ ಚಂದ್ರನಾಯಕ ಕೊಂ ತಮ್ಮಣ್ಣನಾಯಕ ಮತ್ತು ಚಂದ್ರನಾಯಕ ಕಣದಲ್ಲಿದ್ದಾರೆ.
ಚುನಾವಣೆಯಲ್ಲಿ ಆತಗೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಂಕರ ಲಿಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆತಗೂರು ಹೋಬಳಿ ಎ, ತರಗತಿ ಮತ ಕ್ಷೇತ್ರದಿಂದ ಸ್ಪರ್ಧಿಸಿರುವ ಶಂಕರ ಲಿಂಗಯ್ಯ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ, ತಹಸೀಲ್ದಾರ್ ಡಾ.ಶಿವಕುಮಾರ ಬಿರಾದಾರ ಪ್ರಕಟಿಸಿದರು. ಅವಿರೋಧವಾಗಿ ಆಯ್ಕೆಯಾದ ಶಂಕರ ಲಿಂಗಯ್ಯ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮುಖಂಡರಾದ ಅರುಣ ಸೇರಿದಂತೆ ಹಲವರು ಅಭಿನಂದಿಸಿದರು.