26 ಶಿಕ್ಷಕರು ಅವಿರೋಧವಾಗಿ ಆಯ್ಕೆ

KannadaprabhaNewsNetwork |  
Published : Apr 16, 2026, 01:30 AM IST
0 | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ 9 ಮಹಿಳಾ ಸದಸ್ಯರು ಸೇರಿದಂತೆ 26 ಜನ ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ 9 ಮಹಿಳಾ ಸದಸ್ಯರು ಸೇರಿದಂತೆ 26 ಜನ ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಘಟಕದ ಚುನಾವಣೆಗೆ ತಾಲೂಕು ಚುನಾವಣಾಧಿಕಾರಿಗಳು, ಡಯಟ್‌ನ ನಿವೃತ್ತ ಉಪನ್ಯಾಸಕರಾದ ಕೆ.ಕೃಷ್ಣಮೂರ್ತಿ ಅವರು 10 ಏಪ್ರಿಲ್ 2026 ರಂದು ಅಧಿಸೂಚನೆ ಹೊರಡಿಸಿದ್ದರು. ಏಪ್ರಿಲ್ 14 ರ ಮಂಗಳವಾರ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು,೯ ಮಹಿಳಾ ಮೀಸಲು ಸೇರಿದಂತೆ ಒಟ್ಟು 26 ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಮಪತ್ರ ಸಲಿಸಿರುವ ಅಷ್ಟೂ ಸ್ಥಾನಗಳ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಕೃಷ್ಣಮೂರ್ತಿ ಘೋಷಿಸಿದ್ದಾರೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಘಟಕದ ಅಧ್ಯಕ್ಷರಾದ ಪಿ.ಜಿ.ತಿಮ್ಮೇಗೌಡ, ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಪರಮೇಶ್, ನಿಕಟಪೂರ್ವ ಕಾರ್ಯದರ್ಶಿ ಕೆ.ನಾಗರಾಜು ಅವರ ನೇತೃತ್ವದಲ್ಲಿ ತಾಲೂಕು ಘಟಕಕ್ಕೆ ಸ್ಪರ್ಧಿಸಲು ಬಯಸಿದ್ದ ಎಲ್ಲಾ ಶಿಕ್ಷಕ ಬಂಧುಗಳನ್ನು ಒಂದೆಡೆ ಕಲೆ ಹಾಕಿ, ಅವರ ನಡುವೆ ಒಮ್ಮತ ಮೂಡುವಂತೆ ಮಾಡಿ, ಅವಿರೋಧ ಆಯ್ಕೆಗೆ ಬೇಕಾದ ವೇದಿಕೆ ಸಿದ್ದಪಡಿಸಿದ ಹಿನ್ನೆಲೆಯಲ್ಲಿ ಆಯ್ಕೆಯಾಗಬೇಕಿದ್ದ ೨೬ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ೨೬ ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ: ದಿನೇಶ್ ಪಿ.ಎನ್.ಸಹ ಶಿಕ್ಷಕರು ಚಿಕ್ಕಸಾರಂಗಿ, ಹರೀಶ್ ಕೆ.ವಿ,ಸಹಶಿಕ್ಷಕರು ಹರಳೂರು, ಹರೀಶ್‌ಕುಮಾರ್. ಬಿ.ದೈಹಿಕ ಶಿಕ್ಷಣ ಶಿಕ್ಷಕರು ಕೋರ, ಜಗದೀಶ್.ಕೆ.ಎಚ್, ಸಹಶಿಕ್ಷಕರು ಬಳ್ಳಗೆರೆ, ಜಯರಾಮ್ ಕೆ.ವಿ. ಸಹಶಿಕ್ಷಕರು ಭೈಚಾಪುರ, ಲೋಕೇಶ್, ಟಿ.ಎಚ್, ಸಹಶಿಕ್ಷಕರು ವಡ್ಡರಪಾಳ್ಯ, ಮಲ್ಲಿಕಾರ್ಜುನಯ್ಯ ಎಚ್.ಆರ್. ಸಹಶಿಕ್ಷಕರು ಹೆಗ್ಗೆರೆ, ಮಹಮದ್ ಫೈರೋಜ್ ಸಹಶಿಕ್ಷಕರು ಕೋರ, ನಾಗರಾಜು.ಕೆ. ಸಹ ಶಿಕ್ಷಕರು ಬಿಸಿಲಹಳ್ಳಿ, ನಾಗರಾಜು.ಕೆ.ವಿ. ಸಹಶಿಕ್ಷಕರು ಗೋವಿಂದರಾಜಪುರ, ಪದ್ಮರಾಜು.ಡಿ. ಸಹಶಿಕ್ಷಕರು ಮಹಿಮನಪಾಳ್ಯ, ಪರಮೇಶ್.ಸಹಶಿಕ್ಷಕರು ಹೆತ್ತೇನಹಳ್ಳಿ ಪಾಳ್ಯ,ಸತೀಶ್ ಸಹಶಿಕ್ಷಕರು ಯಲ್ಲಾಪುರ, ಸಿದ್ದರಾಜು.ಕೆ.ಆರ್, ಸಹಶಿಕ್ಷಕರು ಗೇರಹಳ್ಳಿ, ಶ್ರೀನಿವಾಸ್.ಟಿ. ಸಹಶಿಕ್ಷಕರು ಕುಚ್ಚಂಗಿಪಾಳ್ಯ,ಶಿವಕುಮಾರ್.ಸಿ. ಸಹಶಿಕ್ಷಕರು ಅಣ್ಣೇನಹಳ್ಳಿ,ತಿಮ್ಮೇಗೌಡ ಪಿ.ಸಹಶಿಕ್ಷಕರು ಉತ್ತರಬಡಾಣೆ ತುಮಕೂರು.

ಮಹಿಳಾ ಮೀಸಲು ಕ್ಷೇತ್ರ: ಜಯಲಕ್ಷಮ್ಮ ಡಿ. ಸಹಶಿಕ್ಷಕಿ ಯಲ್ಲಾಪುರ, ಕೋಮಲ ಆರ್. ಸಹಶಿಕ್ಷಕಿ ಕ್ಯಾತ್ಸಂದ್ರ,ಮಂಗಳ ಗೌರಮ್ಮ ಹೆಚ್.ಎನ್.ಸಹಶಿಕ್ಷಕಿ ಕೊಟ್ಟನಹಳ್ಳಿ, ಮಂಜುಳ ಕೆ.ಎ. ಸಹಶಿಕ್ಷಕಿ ಹನುಮಂತನಗರ, ಮಹಬೂಬ್ ಬಿ.ಸಹಶಿಕ್ಷಕಿ ಗೇರಹಳ್ಳಿ, ನಂದಿನಿ.ಎಸ್.ವಿ, ಸಹಶಿಕ್ಷಕಿ ಕೈದಾಳ, ಸವಿತ.ಆರ್. ಸಹಶಿಕ್ಷಕಿ ಚಿಕ್ಕಹೊಸೂರು, ಸಂಗೀತ.ಡಿ, ಸಹಶಿಕ್ಷಕಿ ಗೂಳರಿವೆ,ಶಾಂತಕುಮಾರಿ.ಕೆ.ಟಿ. ಸಹಶಿಕ್ಷಕಿ ಪಶ್ಚಿಮ ಬಡಾವಣೆ ತುಮಕೂರು. ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಶಿಕ್ಷಕರನ್ನು ಬಿ.ಇ.ಒ ಹನುಮಂತಪ್ಪ ಹೂ ಗುಚ್ಚ ನೀಡಿ ಅಭಿನಂದಿಸಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಶುಭ ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾವಯವ ಪದಾರ್ಥಗಳ ಬಳಕೆಯಿಂದ ಮಾತ್ರ ಆರೋಗ್ಯ
ಸರ್ಕಾರಿ ಶಾಲೆಗೆ ಗ್ರೀನ್ ಬೋರ್ಡ್ ವಿತರಣೆ