26ರಿಂದ ತೇರಾ ಕೋಟಿ ಜಪ ಸಾಂಗತಾ ಯಜ್ಞ: ಸಂತೋಷ ಭಾರದ್ವಾಜ್

KannadaprabhaNewsNetwork | Published : Nov 24, 2023 1:30 AM

ಸಾರಾಂಶ

27ರಂದು ಬೆಳಗ್ಗೆ 9ರಿಂದ ಗೋಪೂಜೆ ಸಹಿತ ರಾಮತಾರಕ ಹೋಮ ಆರಂಭವಾಗಲಿದೆ. 11 ಗಂಟೆಗೆ ಪೂರ್ಣಾಹುತಿ, 11:30ಕ್ಕೆ ದೀಪ ಪ್ರಜ್ವಲನೆ ಮತ್ತು ಸಭಾ ಕಾರ್ಯಕ್ರಮ, ಸ್ವಾಮೀಜಿ ಅವರ ಆಶೀರ್ವಚನ ನಡೆಯಲಿದ್ದು, 12.30ರಿಂದ ಅನ್ನಸಂತರ್ಪಣೆ ಜರುಗಲಿದೆ ಎಂದು ವಿವರಿಸಿದರು. ಸಂಜೆ 4 ರಿಂದ ಮಹಿಳೆಯರಿಂದ ಭಜನೆ, ಆಯ್ದ ಕಲಾವಿದರಿಂದ ಯಕ್ಷ ರಸಸಂಜೆ, ರಾತ್ರಿ 8.30ಕ್ಕೆ ಶೇಜಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. 28ರಂದು ಬೆಳಗ್ಗೆ 9.30ಕ್ಕೆ ಗೋಪೂಜೆ ಸಹಿತ ಹೋಮ, 10.30ಕ್ಕೆ ಸಾಧು ಸಂತರಿಂದ ಪೂರ್ಣಾಹುತಿ, 11 ಗಂಟೆಗೆ ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ಬಳಿಕ ಸ್ವಾಮೀಜಿಗಳ ಆಶೀರ್ವಚನ ನಡೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿಪ್ರ ಯುವ ಪರಿಷತ್ತು ವತಿಯಿಂದ ತೇರಾ ಕೋಟಿ ಜಪ ಸಾಂಗತಾ ಯಜ್ಞವನ್ನು ನ.26ರಿಂದ 28ರವರೆಗೆ ಲಗನಾ ಕಲ್ಯಾಣ ಮಂದಿರದಲ್ಲಿ 7 ಯತಿವರ್ಯರ ಸಮ್ಮುಖ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತು ಪ್ರಧಾನ ಕಾರ್ಯದರ್ಶಿ ಸಂತೋಷ್ ಭಾರದ್ವಾಜ್ ಹೇಳಿದರು.

ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನ.26ರಂದು ಸಂಜೆ 5.30 ರಿಂದ ಕಾರ್ಯಕ್ರಮ ಆರಂಭವಾಗಲಿದೆ. 8 ಗಂಟೆಗೆ ಹೆಬ್ಬಳ್ಳಿಯ ಮಹಾರಾಜರ ಪಾದುಕೆ, ದತ್ತಾವದೂತ ಮಹಾರಾಜರ ಆಗಮನ, 9 ಗಂಟೆಗೆ ಶೇಜಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

27ರಂದು ಬೆಳಗ್ಗೆ 9ರಿಂದ ಗೋಪೂಜೆ ಸಹಿತ ರಾಮತಾರಕ ಹೋಮ ಆರಂಭವಾಗಲಿದೆ. 11 ಗಂಟೆಗೆ ಪೂರ್ಣಾಹುತಿ, 11:30ಕ್ಕೆ ದೀಪ ಪ್ರಜ್ವಲನೆ ಮತ್ತು ಸಭಾ ಕಾರ್ಯಕ್ರಮ, ಸ್ವಾಮೀಜಿ ಅವರ ಆಶೀರ್ವಚನ ನಡೆಯಲಿದ್ದು, 12.30ರಿಂದ ಅನ್ನಸಂತರ್ಪಣೆ ಜರುಗಲಿದೆ ಎಂದು ವಿವರಿಸಿದರು.

ಸಂಜೆ 4 ರಿಂದ ಮಹಿಳೆಯರಿಂದ ಭಜನೆ, ಆಯ್ದ ಕಲಾವಿದರಿಂದ ಯಕ್ಷ ರಸಸಂಜೆ, ರಾತ್ರಿ 8.30ಕ್ಕೆ ಶೇಜಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. 28ರಂದು ಬೆಳಗ್ಗೆ 9.30ಕ್ಕೆ ಗೋಪೂಜೆ ಸಹಿತ ಹೋಮ, 10.30ಕ್ಕೆ ಸಾಧು ಸಂತರಿಂದ ಪೂರ್ಣಾಹುತಿ, 11 ಗಂಟೆಗೆ ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ಬಳಿಕ ಸ್ವಾಮೀಜಿಗಳ ಆಶೀರ್ವಚನ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಹೆಬ್ಬಳ್ಳಿಯ ದತ್ತಾವದೂತ ಮಹಾರಾಜರು, ಕೂಡ್ಲಿ ಮಠದ ಅಭಿನವ ಶಂಕರಭಾರತಿ ಸ್ವಾಮೀಜಿ, ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿಗಳು, ಭೀಮನಕಟ್ಟೆಯ ರಘುವರೇಂದ್ರ ತೀರ್ಥರು, ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಶಿವಮೊಗ್ಗ ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತು ಪದಾಧಿಕಾರಿಗಳಾದ ಸುಮುಖ ಭಟ್, ಮಧುಸೂದನ್, ಭಾನುಪ್ರಕಾಶ್, ಆದಿತ್ಯ ಪ್ರಸಾದ್ ಮೊದಲಾದವರಿದ್ದರು.

- - - -ಫೋಟೋ:

ಶಿವಮೊಗ್ಗದಲ್ಲಿ ವಿಪ್ರ ಯುವ ಪರಿಷತ್ ವತಿಯಿಂದ ಪತ್ರಿಕಾಗೋಷ್ಟಿ ನಡೆಸಲಾಯಿತು.

Share this article