ಸಿಡಿಲಿಗೆ 30 ಮೇಕೆ, 1 ಕುರಿ ಬಲಿ

KannadaprabhaNewsNetwork | Published : Nov 7, 2023 1:31 AM

ಸಾರಾಂಶ

ಸೂಕ್ತ ಪರಿಹಾರ ನೀಡಬೇಕು ಎಂದು ಕುರಿ ವಾರಸುದಾರರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಸಿಡಿಲು ಬಡಿದು 30 ಮೇಕೆಗಳು, 1 ಕುರಿ ಅಸುನೀಗಿರುವ ಘಟನೆ ತಾಲೂಕಿನ ಗಡಿಗುಡಾಳು ಗ್ರಾಮದ ಜಮೀನೊಂದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.

ಗಡಿಗುಡಾಳು ಗ್ರಾಮದ ಕಟಗಿಹಳ್ಳಿ ತಿಮ್ಮಪ್ಪನವರ ಜಮೀನಿನಲ್ಲಿ ಬೀಡುಬಿಟ್ಟಿದ್ದ ಗ್ರಾಮದ ವಿವಿಧ 17 ಜನರಿಗೆ ಸೇರಿದ 30 ಮೇಕೆಗಳು ಹಾಗೂ 1 ಕುರಿಗೆ ಮಧ್ಯಾಹ್ನ 2.30ರ ಸುಮಾರಿಗೆ ಸಿಡಿಲು ಬಡಿದು ಮೃತಪಟ್ಟಿವೆ.

ಕಾಳೋರ ಬಸವರಾಜ ಎಂಬವರು ಕುರಿ ಕಾಯುತ್ತಿದ್ದರು. ಘಟನಾ ಸ್ಥಳಕ್ಕೆ ಜಂಗಮ ತುಂಬಿಗೇರಿ ಪಶು ವೈದ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೂಕ್ತ ಪರಿಹಾರ ನೀಡಬೇಕು ಎಂದು ಕುರಿ ವಾರಸುದಾರರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

Share this article